– 319 - U XVII ವಾತ-ಪಿತ್ತ-ಕಫ಼ ನಾಡಿಗಳ ಲಕ್ಷಣ (ಮತಾಂತರ)
ಶ್ಲೇಷ್ಮೋತ್ಧಾ ಕುಕ್ಕುಟಾಭಾ ಪರಭೃತಗಮನಾ ಮಂದವೇಗಾತಿಶೀತಾ | ಚೇತ್ಯೇವಂ ನಾಡಿಕಾ ಯಾ ವಹತಿ ಧಮನಿಕಾ ಕ್ಷೀರಪಾಣ್ಯೋಕ್ತ ಮೇತತ್ ||
(ವೈ, ಸಾ. ಸಂ. 6-7.) ವಾತಪ್ರಕೋಪದಲ್ಲಿ ನಾಡಿಯು ಗೋಮೂತ್ರದ ಅಧವಾ ಹಾವಿನ ಅಧವಾ ಜಿಗಳೆಯ ಗತಿಯಂತೆ ಡೊಂಕಾಗಿರುವದು ಪಿತ್ತಪ್ರಕೋಪದಲ್ಲಿ ನಾಡಿಯು ಬಿಸಿಯಾಗಿ ಮತ್ತು ಕಪ್ಪೆಯ ನಡಿಕೆಯಂತೆ, ಅಧವಾ ನವಿಲಿನ ನಡಿಕೆಯಂತೆ, ಕ್ಷಿಪ್ರವೇಗವುಳ್ಳದ್ದಾಗಿ ಇರುವದು. ಕಫಾ ಧಿಕ್ಯದಲ್ಲಿ ನಾಡಿಯು ಶೀತವಾಗಿ, ಕೋಳಿಯಂತೆ ಅಧವಾ ಪಾರಿವಾಳದ ನಡಿಕೆಯಂತೆ, ಮಂದ ವೇಗವುಳ್ಳದ್ದಾಗಿ ಇರುವದು ಹೀಗೆ ನಾಡಿಯೆಂಬ ಧಮನಿಯ ಗತಿಲಕ್ಷಣವನ್ನು ಕ್ಷೀರಪಾಣಿಯವರು ಹೇಳಿದ್ದಾರೆ. (C) ಕಾಷ್ಠ ಕುಟ್ಟೋ ಯಧಾ ಕಾಷ್ಠಂ ಕುಟ್ಟತೇ ನಾತಿವೇಗತಃ | ಸಸ್ಲಿಪಾತದ ಸ್ಥಿತ್ವಾ ಸ್ಥಿತ್ವಾ ತಧಾ ನಾಡೀ ಸನ್ನಿಪಾತೇ ಭವೇದ್ದ್ರು ವಂ || (ಗ್ರಂಧಾಂತರ ) ಕಟ್ಟಿಗೆಯೊಡಿಯುವವನು ಹ್ಯಾಗೆ ಅತಿ ವೇಗವಿಲ್ಲದೆ ನಿಂತುನಿಂತು ಕಟ್ಟಿಗೆಯನ್ನು ಒಡಿಯು ತ್ತಾನೋ, ಹಾಗೆ ಸನ್ನಿಪಾತದಲ್ಲಿ ನಾಡಿಯು ಒಡಿಯುವದಾಗುತ್ತದೆ. (d) ಸವ್ಯೇನ ರೋಗಧೃತಿಕೂರ್ಪರಭಾಗಭಾಚಾ ನಾಡೀ ಪರೀಕ್ಷೆ ಪೀಡ್ಯಾಧದಕ್ಷಿಣಕರಾಂಗುಲಿಕಾತ್ರಯೇಣ |ಕ್ರಮ ಅಂಗುಷ್ಠ ಮೂಲಮಧಿಪಶ್ಚಿಮಭಾಗಮಧ್ಯೇ (ಮತಾಂತರ) ನಾಡೀಂ ಪ್ರಭಾತಸಮಯೇ* ಸತತಂ ಪರೀಕ್ಷೇತ್ || (ಧ, 6.) ವೈದ್ಯನು ರೋಗಿಯ ಮೊಣಕೈಯನ್ನು ಬುಡದಲ್ಲಿ ತನ್ನ ಎಡಕೈಯಿಂದ ಹಿಡಕೊಂಡು ತನ್ನ ಬಲಕೈಯ ಮೂರು ಬೆರಳುಗಳಿಂದ ರೋಗಿಯ ಹೆಬ್ಬೆಟ್ಟಿನ ಬುಡವನ್ನು ಅದರ ಮೇಲಿನ ಭಾಗದ (ಒಳಪಾರ್ಶ್ವದ) ಮಧ್ಯದಲ್ಲಿ ಒತ್ತಿ, ನಾಡಿಯನ್ನು ಬೆಳಿಗ್ಗಿನ ಸಮಯದಲ್ಲಿ, ಯಾವಾಗಲೂ ಪರೀಕ್ಷಿಸತಕ್ಕದ್ದು. ಷರಾ ಪ್ರಭಂಜನಗತಿ೦' (ವಾಯುವಿನ ಗತಿಯುಳ್ಳ) ಎಂಬ ಪಾರಾ೦ತರ ಕಾಣುತ್ತದೆ ಕೈಯನ್ನು ಹಿಡಿಯುವ ಎಷಯದಲ್ಲಿ ಮುಂದಿನ (೧) ನೋಡಿರಿ ಅಂಗುಷ್ಠಸ್ಯ ತು ಮೂಲೇ ಯಾ ಧಮನೀ ಜೀವಸಾಕ್ಷಿಣೀ | ತಸ್ಯಾ ಗತಿವಶಾದ್ವಿದ್ಯಾತ್ಸುಖಂ ದುಃಖಂ ಚ ರೋಗಿಣಾಂ || (ನಾ. ಪ್ರ. 18.) ಹೆಬ್ಬೆಟ್ಟಿನ ಬುಡದಲ್ಲಿ ಇರುವ ಜೀವಸಾಕ್ಷಿಯಾದ ಧಮನೀ ನಾಡಿಯ ಗತಿಭೇದದಿಂದ ರೋಗಿಯ ಸುಖವನ್ನೂ ದುಃಖವನ್ನೂ ತಿಳಿಯತಕ್ಕದ್ದು. ಪ್ರಾತಃ ಕೃತಸಮಾಚಾರಃ ಕೃತಾಚಾರಪರಿಗ್ರಹಂ | ಸುಖಾಸೀನಃ ಸುಖಾಸೀನಂ ಪರೀಕ್ಷಾರ್ಧಮುಪಾಚರೇತ್ || (ನಾ. ಪ್ರ. 17.) ಪ್ರಾತಃಕಾಲದಲ್ಲಿ ವೈದ್ಯನೂ ರೋಗಿಯೂ ತಮ್ಮ ನಿತ್ಯಾಚಾರಗಳನ್ನು ತೀರಿಸಿಕೊಂಡು, ಸುಖವಾಗಿ ಕೂತುಕೊಂಡು, ನಾಡೀಪರೀಕ್ಷೆಯನ್ನು ತೊಡಗಬೇಕು.