XVII - 328 ವಾತಕಫ ಅಧಿಕವಾದಾಗ್ಗೆ ತರ್ಜನಿಯ ಅಡಿಯಲ್ಲಿಯೂ ಅನಾಮಿಕೆಯ ಅಡಿಯಲ್ಲಿಯೂ, ಪಿತ್ತ ಕಫ ಅಧಿಕವಾದಾಗ್ಗೆ ಮಧ್ಯಮಾ ಅನಾಮಿಕೆಗಳ ಮಧ್ಯದಲ್ಲಿಯೂ, ಸನ್ನಿಪಾತದಲ್ಲಿ ಮೂರು ಬೆರಳುಗಳ ಅಡಿಯಲ್ಲಿ ಯೂ, ಬಲವಾಗಿ ಬಡಿಯುವದು. ಷರಾ *ಕೆಳಗೆ () ನೋಡಿರಿ ವಾತಾದ್ರಕ್ರಗತಿಂ ಧ ಪಿತ್ತಾದುತ ಗಾಮಿನೀ | ಕಫಾನ್ಮಂದಗತಿರ್ಜ್ಞೆಯಾ ಸನ್ನಿಪಾತಾದತಿದ್ರುತಾ || ವಜ್ರಮುತ್ತುತ್ಯ ಚಲತಿ ಧಮನೀ ವಾತಪಿತ್ರತಃ || ವಹೇದ್ದಕ್ರಂ ಚ ಮಂದಂ ಚ ವಾತಶ್ಲೇಷ್ಯಾಧಿಕತ್ರತಃ | ಉಪ್ಪುತ್ಯ ಮಂದಂ ಚಲತಿ ನಾಡೀ ಪಿತ್ತ ಕಫೇಧಿಕೇ | ಕಾಮಾತ್ರೋಧಾದ್ವೇಗವಹಾ ಕ್ಷೀಣಾ ಚಿಂತಾಭಯುತಾ || ಸ್ಥಿತ್ವಾ ಸ್ಥಿತ್ವಾ ಚಲೇದ್ಯಾ ಸಾ ಹಂತಿ ಸ್ಥಾನಚ್ಯುತಾ ತಥಾ | ಅತಿಕ್ಷೀಣಾ ಚ ಪೀತಾ ಚ ಪ್ರಾಣಾನ್ ಹಂತಿ ನ ಸಂಶಯಃ || ಜ್ವರಕೊಪೇನ ಧಮನೀ ಸೋಪ್ಲಾ ವೇಗವತೀ ಭವೇತ್ | ಮಂದಾಗ್ನ ಕ್ಷೀಣಧಾತೋಶ್ವ ಸೃವಂ ಮಂದತರಾ ಮತಾ || ಚಪಲಾ ಕುಧಿತಸ್ಯ ಸ್ವಾತಪಸ್ಯ ಭವತಿ ಸ್ಥಿರಾ | ಸುಖಿನೋSಪಿ ಸ್ಟೀರಾ ಜೇಯಾ ತಧಾ ಬಲವತೀ ಮತಾ ! (ಭಾ. ಪ್ರ. 239.) ನಾಡಿಯ ಗತಿಯ ವಾತದಲ್ಲಿ (ಅಡ್ಡಕ್ಕೆ) ಡೊಂಕಾಗಿಯೂ, ಪಿತ್ತದಲ್ಲಿ (ಮೇಲಕ್ಕೆ) ಹಾರುವದಾಗಿಯೂ, ಕಫದಲ್ಲಿ (ಚುರುಕಿಲ್ಲದೆ) ಮೆಲ್ಲ ಗಾಗಿಯೂ, ಸನ್ನಿಪಾತದಲ್ಲಿ ಅತಿವೇಗ ವುಳ್ಳದ್ದಾಗಿಯೂ, ಇರುವದು. ವಾತಪಿತ್ತಪ್ರಕೋಪದಲ್ಲಿ ಧಮನಿಯು ಡೊಂಕಾಗಿ ಹಾರಿ ನಡೆಯುವದು; ಕಫವಾತದಲ್ಲಿ ಮೆಲ್ಲಗಾಗಿಯೂ, ಡೊಂಕಾಗಿಯೂ ನಡಯುವದು, ಮತ್ತು ಕಫಪಿತ್ತದಲ್ಲಿ ಮೆಲ್ಲಗಾಗಿ ಹಾರಿ ಚಲಿಸುವದ.. ಕಾಮದಿಂದ ಅಥವಾ ಕ್ರೋಧದಿಂದ ಪೀಡಿತ ನಾದವನ ನಾಡಿಯು ವೇಗವುಳ್ಳದ್ದಾಗಿಯೂ, ಚಿಂತೆಯಿಂದ ಅಥವಾ ಭಯದಿಂದ ನೊಂದವನ ನಾಡಿಯು ಕ್ಷೀಣವಾಗಿಯೂ ಇರುವದು. ನಾಡಿಯು ಸ್ಥಾನತಪ್ತಿ ಅಥವಾ ನಿಂತುನಿಂತು ನಡೆಯುತ್ತಿದ್ದರ, ಮರಣ ಸಂಭವಿಸುವದೆಂದು ತಿಳಿಯುವದು ನಾಡಿಯು ಬಹಳ ಕ್ಷೀಣವಾ ಗಿಯೂ, ಶೀತವಾಗಿಯೂ ಇದ್ದರೆ ಸಹ ಪ್ರಾಣ ಹೋಗುವದೆಂಬದು ನಿಃಸಂಶಯ. ಜ್ವರದಲ್ಲಿ ನಾಡಿಯು ಬಿಸಿಯಾಗಿ ವೇಗವುಳ್ಳದ್ದಾಗುತ್ತದೆ ಅಗ್ನಿ ಮಂದವಾಗಿಯುಳ್ಳವನ, ಅಥವಾ ಧಾತುಕ್ಷೀಣವಾದವನ, ನಾಡಿಯು ಹೆಚ್ಚು ಮಂದ ಎಂತ ತಿಳಿದಿದ್ದಾರ. ಹಸಿದವನ ನಾಡಿಯು ಚಪಲವಾಗಿಯೂ, ಉಂಡು ತೃಪ್ತನಾದವನ ನಾಡಿಯು ಸ್ಥಿರವಾಗಿಯೂ ಇರುತ್ತದೆ. ಸುಖ ವಾಗಿರುವವನ ನಾಡಿಯು ಸ್ಥಿರವಾಗಿಯೂ, ಬಲವಾಗಿಯೂ ಇರುವದೆಂದು ತಿಳಿಯಬೇಕು. ಷರಾ ನಾಡಿಯ ಪೆಟ್ಟುಗಳಲ್ಲಿ ಒಂದೊಂದು ಕಾಣದೆ ಹೋಗುವದರಿಂದಲೇ, ಅಥವಾ ನಾಡಿಗಳ ಪೆಟ್ಟುಗಳು ಸ್ಥಾನಕ್ಕೆ ಹಿಂದೆ ಅಥವಾ ಮುಂದೆ ಕಾಣುವದರಿಂದಲೇ ಮರಣಸಂಭವವನ್ನು ಊಹಿಸಬಾರದು ಕೆಳಗೆ (4) ನೋಡಿರಿ () ವಾತಾಡ್ಕೊಮೂತ್ರಿಕಾಭಾ ಭುಜಗಗತಿಸಮಾ ಸ್ಯಾಜ್ಜಲೂಕೇವ ವಕ್ರಾ 1. - ಪಿತ್ತೇ ಸ್ವಾಧೈಕಯಾನಾ ಶಿಖಿಗಮನನಿಭಾ ಕ್ಷಿಪ್ರವೇಗಾ ಮಹೋಷ್ಣಾ ||
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೦೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.