ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XVII. - 332 - ರೋಗಿಯ ಕಂರಸ್ವರವು ವಾತಪ್ರಕೋಪದಲ್ಲಿ ಅತಿಸೂಕ್ಷ್ಮವಾಗಿಯೂ, ಪಿತ್ತಪ್ರಕೋಪ ದಲ್ಲಿ ಸ್ಪಷ್ಟವಾದ ಮಾತುಗಳುಳ್ಳದ್ದಾಗಿಯೂ, ಕಫಪ್ರಕೋಪದಲ್ಲಿ ಗುರು (ತೋರ)ವಾಗಿಯೂ, ದ್ವಂದ್ವ ಮತ್ತು ತ್ರಿದೋಷಗಳಲ್ಲಿ ಆಯಾ ದೋಷಗಳ ಲಕ್ಷಣಗಳು ಮಿಶ್ರವಾಗಿಯೂ ಇರುವದು.

21. ವಾತಾಚ್ಛೇತಃ ಕಫಾಚ್ಚಾರ್ದ್ರಃ ವರೋ ಭವೇತ್ |ಪಿತ್ತಾ

ದುಷ್ಣೂ ರುಜಾರ್ತಃ ಸ್ಯಾತ್ ಮುನಿಭಿಃ ಪರಿಕೀರ್ತಿತಃ | ದ್ವಂದ್ವೇನ
 ಸ್ಪರ್ಶದಿಂದ ಮಿಶ್ರ ಸಕಲೈಸಸ್ತ್ರಿಲಿ0ಗ0   ಸಂಸ್ಪರ್ಶಚಾತುರ್ಯಚಣೈರ್ಭಿಷ್ನಗ್ದಿಃ ಕ್ಷಣೇನ ವರೀಕ್ಷೆ
ಶೀತಃ ಕ್ಷಣತೋತಿತಪ್ತೋ ವರ್ಜ್ಯಃ ಸ ಜನ್ತುರ್ಗದಪೀಡಿತಾಂಗಃ |(ಧ.೧೮.)
ಮೈಯ ಸ್ಪರ್ಶವು ವಾತಪ್ರಕೋಪದಲ್ಲಿ ಶೀತವಾಗಿಯೂ, ಕಫದಲ್ಲಿ ಒದ್ದೆಯಾಗಿಯೂ, ಶೀತಲವಾಗಿಯೂ, ಪಿತ್ತದಲ್ಲಿ ಬಿಸಿಯಾಗಿಯೂ, ನೋವುಳ್ಳದ್ದಾಗಿಯೂ ಇರುತ್ತದೆ ಮತ್ತು ದ್ವಂದ್ವದೋಷಗಳಲ್ಲಿಯೂ, ತ್ರಿದೋಷಗಳಲ್ಲಿಯೂ ಆಯಾ ದೋಷಗಳ ಲಕ್ಷಣಗಳು ಮಿಶ್ರ ವಾಗಿ ಕಾಣುವವು ಎಂತ ಈ ಪರೀಕ್ಷೆಯಲ್ಲಿ ಕುಶಲರೂ ವೈದ್ಯರೂ ಆದ ಮುನಿಗಳಿಂದ ಹೇಳ ಲ್ಪಟ್ಟಿದೆ. ಯಾವ ರೋಗಿಯ ಮೈಯು ಕ್ಷಣಕ್ಕ ಶೀತ ಕ್ಷಣಕ್ಕೆ ಅತಿಬಿಸಿಯಾಗುತ್ತದೋ ಅಂಧವನ ರೋಗವು ಅಸಾಧ್ಯವಾಗಿರುತ್ತದೆ.


22. ಹೃದಯದ ಕೆಳ ಅಂಕಣಗಳು ಉಬ್ಬಿ ಸಂಕೋಚವಾಗುತ್ತಾ ಇರುವ ಸ್ಥಿತಿ ಪಾಶ್ಚಾತ್ಯರೀತ್ಯಾ ಯಲ್ಲಿ ಎಡ ಬದಿಯ ಅಂಕಣದಿಂದ ಧಮನಿಯೂಳಗೆ ಸೇರಿ ತೆರೆಯಾಗಿ ಚಲಿ ನಾಡೀಪರೀಕ್ಷೆ ಸುವ ರಕ್ತವೇ ನಾಡಿಯಾಗಿ ಕಾಣುವದು ಎಂತ ಹಿಂದೆ ಹೇಳಿಯದೆ (59ನೇ ಪು, ನೋಡಿರಿ). ಹಾಗೆ ಒಂದೊಂದು ಸರ್ತಿ ಧಮನಿಗೆ ಸೇರುವ ರಕ್ತವು ಒಂದೊಂದು ನಾಡಿಗೆ ಕಾರಣವು. ಪ್ರತಿ ಸರ್ತಿ ಧಮನಿಗೆ ಅಷ್ಟಷ್ಟು ರಕ್ತ ಸೇರಿದೊಡನೆ ಧಮನಿಯ ಬುಡದಲ್ಲಿ ರುವ ಮುಚ್ಚಳವು ಮುಚ್ಚುವದರಿಂದ, ಆ ಧಮನಿಯಲ್ಲಿ ಮತ್ತೊಂದು ಚಿಕ್ಕ ಉಬ್ಬುವಿಕೆ ಉಂಟಾಗುತ್ತದೆ, ಅಂದರೆ ಧಮನಿಯಲ್ಲಿ ಪ್ರವಹಿಸುವ ರಕ್ತದಲ್ಲಿ ಎರಡನೇದೊಂದು ಚಿಕ್ಕ ತೆರೆಯುಂಟಾಗುತ್ತದೆ. ಹೀಗೆ ಪ್ರತಿನಾಡಿಯಲ್ಲಿ ಎರಡು ಪಟ್ಟುಗಳಿವೆ, ಒಂದು ದೊಡ್ಡದು, ಒಂದು ಚಿಕ್ಕದು. ಈ ಎರಡು ವಿಧವಾದ ಪೆಟ್ಟುಗಳಲ್ಲಿ ಅಸ್ವಸ್ಥತೆಯ ದೆಸೆಯಿಂದ ನಾನಾ ವಿಧ ವಾದ ಭೇದಗಳು ಉಂಟಾಗುತ್ತವೆ. ಮುಖ್ಯವಾಗಿ ಪರೀಕ್ಷಿಸತಕ್ಕ ಅವಸ್ಥೆಗಳು ಮೂರು. ಯಾವವೆಂದರೆ' (1) ವೇಗ,-ಮಿನಿಟಿಗೆ ಎಷ್ಟು ಪೆಟ್ಟುಗಳು ಕಾಣುತ್ತವೆ ಎಂಬದು,- (2) ಸಂಕೋಚನ ಶಕ್ತಿ,-ಗಟ್ಟಿ ಅಧವಾ ಮೃದು ಎಂಬದು; ನಾಡಿಯು ಒತ್ತಲ್ಪಡುವಾಗ್ಗೆ ಬಲವಾಗಿ ನಿಂತರ ಗಟ್ಟಿ, ಅಡಿಗೆ ಸುಲಭವಾಗಿ ಹೋದರೆ ಮೃದು~ (3) ಕ್ರಮ,-ಒಂದರ ನಂತರ ಒಂದು ಕ್ರಮವಾಗಿ ಬಡಿಯುತ್ತದೋ, ಅಥವಾ ತಪ್ಪಿ ಬಡಿಯುತ್ತದೋ ಎಂಬದು, ಆರೋಗ್ಯಸ್ಥಿತಿಯಲ್ಲಿ ನಾಡಿಯು ಕ್ರಮ ತಪ್ಪದೆಯೂ, ಸರಿಯಾದ ವೇಗವುಳ್ಳದ್ದಾಗಿಯೂ, ಒಂದೇ ರೀತಿಯಾದ ಉಬ್ಬುವಿಕೆಯುಳ್ಳದ್ದಾಗಿಯೂ, ಇರುತ್ತದೆ; ಮಿತವಾಗಿ ತುಂಬಿದ್ದು