ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 331 331 - ೧೨ XVIIರ್ ಭಾರ ಹೊರೋಣದರಿಂದ, ಪ್ರವಾಹದಲ್ಲಿ ಬೀಳೋಣದರಿಂದ, ಮೂರ್ಚ್ಛೆಯಿಂದ, ಭಯ ದಿಂದ, ಶೋಕದಿಂದ, ಅಥವಾ ಬೇರೆ ಪ್ರಮುಖ ಕಾರಣದಿಂದ, ನಾಡಿಯು ತತ್ಕಾಲ ವೂರಾ ನಿಂತರೂ, ಪುನಃ ಜೀವ ಹೊಂದುತ್ತದ

ಷರಾ ಕೆಲವರು 'ಪ್ರವಾಹಮರ್ಚ್ಛಾ ' ಎಂಬದನ್ನು ಒಂದೇ ಪದವನ್ನಾಗಿ ತೆಗೆದುಕೊಂಡು ರಕ್ತ ಪ್ರವಾಹಾಏಗ ಳಿಂದ ಉಂಟಾದ ಮೂರ್ಚೆ ಎಂತ ಅರ್ಥ ಬರೆದಿದ್ದಾರೆ
ಪತಿತಸ್ಸಂಧಿತೋ ಭೇದೀ ನಷ್ಟಶುಕ್ರಶ್ಚ ಯೋ ನರಃ |
ಶಾಮ್ಯಾತೇ ವಿಸ್ಮಯಸ್ತಸ್ಯ ನ ಕಿಂಚಿನ್ಮೃತ್ಯುಕಾರನಮಂ || (ನಾ ೨೮)                                ಎತ್ತರದಿಂದ ಬಿದ್ದಂಧಾ, ಕಡಿದು ಸಂದುಕೂಡಿಸಲ್ಪಟ್ಟಂಧಾ, ಅತಿಸಾರದಿಂದ ಪೀಡಿತ ನಾದಂಧಾ, ಅಧವಾ ಶುಕ್ರ ನಷ್ಟ ಹೊಂದಿದಂಧಾ, ಮನುಷ್ಯನ ನಾಡಿಯು ಅಸಾಧ್ಯವಾಗಿ ಕಂಡರೂ, ಅದರಿಂದ ಏನೂ ಮರಣಕ್ಕೆ ಕಾರಣವಿಲ್ಲ ಅವನ ವಿಸ್ಮಯವ್ರ ಶಾಂತವಾಗುತ್ತದೆ
ತಧಾ ಭೂತಾಭಿಷಂಗೇ ಚ ತ್ರಿದೋಷವದುಪಸ್ಥಿತಾ |
ಸಮಾಂಗಾ ವಹತೇ ನಾಡೀ ತಧಾ ಚ ನ ಕ್ರಮಂಗತಾ || ಭೂತಾದಿಗಳು ಪೀಡಿಸುವ ಸಂಗತಿಯಲ್ಲಿ, ನಾಡಿಯು ತ್ರಿದೋಷಲಕ್ಷಣಗಳನ್ನು ಕೂಡಿ ಕೊಂಡು ಸರಿಯಾಗಿ ನಡೆದರೂ, ಆ ಭೇದಗಳನ್ನು ಅದು ಕ್ರಮವಾಗಿ ಹೊಂದಿದ್ದಲ್ಲ.
ಷರಾ “ವೀಣೆಯ ಮಟ್ಲಿನ ಛೇದ ಸ್ವರಗಳು ಹುಟ್ಟಿ ರಾಗಭೇದಗಳು ಹ್ಯಾಗೆ ತೋರುವವೋ, ಹಾಗೆ ಮನುಷ್ಯನ ಹಸ್ತದ ಹೆಬ್ಬೆರಳಿನ ಬುಡದಲ್ಲಿ ಪಾಂಕ್ತವಾಗಿ ಮೂರು ಬೆರಳುಗಳನ್ನಿಟ್ಟು, ಲಕ್ಷ ಧಾರಣೆಯಿಂದ ಒತ್ತಿ ನೋಡಿದರೆ, ಯವಬೀಜದಂತೆ ಮೊದಲಿನ ಬೆರಳಿಗೆ ವಕ್ರವಾಗಿಯೂ, ಎರಡನೇ ಬೆರಳಿಗೆ ಚಪಲವಾಗಿಯೂ, ಮೂರನೇ ಬೆರಳಿಗೆ ಸ್ಪರ ವಾಗಿಯೂ, ಅಡ್ಡವಾಗಿಯೂ, ಸಹ ತೋರುವ ಗತಿಗಳೇ ವಾತ, ಪಿತ್ತ ಶೇಷ್ಮವೆಂಬ ಹೆಸರುಳ್ಳ ಮೂರು ಗತಿಗಳೆನ್ರಿಸಿ ಕೊಳ್ಳುವವು

ಈ ಮೂರು ಗತಿಗಳಿಂದ ವಂಚಭೂತಗಳೆಂಬ ಐದು ಗತಿಗಳು ಸಪ್ತಗತಿಗಳು ಮತ್ತು ಒಂಭತ್ತು ಗತಿಗಳು ಸಹ ತೋರುತ್ತವೆ, ಆ ಒಂಭತ್ತು ಗತಿಗಳು ಸಂವತ್ಸರ, ಆಯುಷ್ಯ, ಗಂಡಕಾಲ, ಋತುಕಾಲ, ಗರ್ಭಕಾಲ, ರೋಗ, ಮನೋಭಾವ, ಗ್ರಹಣ, ಸಾಧ್ಯಾಸಾಧ್ಯ ಲಕ್ಷಣ, ಭೂತ ಭವಿಷ್ಯದ್ವರ್ತಮಾನಗತಿಸಿತಿಲಗಳ ತಿಳಿಸುತ್ತವೆ ಇವು ಸಪ್ತ ಗ್ರಹ, ನವಗ್ರಹ ರೂಪವಾಗಿರುತ್ತವೆ - “ಕರಾಂಗುಷ್ಠ ಮೂಲದಲ್ಲಿ ಮೂರು ಸ್ಥಾನಗಳಲ್ಲಿಯೂ ಮೂರು ಬೆರಳುಗಳನ್ನಿಟ್ಟು, ಆದಿಯಲ್ಲಿ ಪಿತ್ತವನ್ನು ಆ ಮೇಲೆ ವಾತವನ್ನು, ಅನಂತರ ಶ್ಲೇಷ್ಮಸ್ಥಾನವನ್ನು ನೋಡಿದರೆ, ಕ್ರಮವಾಗಿ ಹನ್ನೆರಡು ಗತಿಗಳ ಪ್ರಕಾರ ಮನರಾವರ್ತಿ ಬಂದರೆ ಅಂಥಾ ಮನುಷ್ಯನು ಬಹುಕಾಲ ಜೀವಿಸುತ್ತಾನೆ ” ಮೇಲಿನದು ನಾಡಿಪರೀಕ್ಷೆಯಲ್ಲಿ ಪ್ರಖ್ಯಾತಿಹೊಂದಿದ ಮೈಸೂರು ಹೊಸ ಪಂಡಿತ ಭೀಮರಾಯರು ರಚಿಸಿದ ಮೈಸೂರು ಗವರ್ನಮೆಂಟ್ ಪ್ರೆಸ್ಸಿನಲ್ಲಿ 1885 ನೇ ಇಸವಿಯಲ್ಲಿ ಮುದ್ರಿಸಲ್ಪಟ್ಟ, ವೈದ್ಯಸಂಗ್ರಹ ಎಂಬ ಗ್ರಂಥದಿಂದ ಎತ್ತಿ ತೆಗೆದದ್ದು ಇವರು ವಾತ ಪಿತ್ತ ಕಫ ಗತಿಗಳಲ್ಲದೆ, ಪೃಥ್ವಿ ಗತಿ, ಆಕಾಶಗತಿ, ಡೋಲಾಗತಿ, ಕುಂಡಲಸಿಗತಿ, ವಕ್ರ ಚಕ್ರಗತಿ ಚಪಲಚಕ್ರಗತಿಗಳೆಂಬ ಆರು ಗತಿಗಳಿರುವದಾಗಿಯೂ, ಗೋಲಾಕಾರವಾದ ಪೃಥ್ವಿಗತಿಯಲ್ಲಿ, ಅಷ್ಟದಳಗಳೂ, ಆ ಪ್ರತಿದಳದಲ್ಲಿ ಬೇರೆ ಅಷ್ಟದಳಗಳಿರುವದಾಗಿಯೂ, ಈ ಭೇದಗಳಿಗೆ ಲಕ್ಷ್ಯವನ್ನು ನಾಡಿಚಲನೆಯ ಸ್ಥಾನವನ್ನು ಗೊತ್ತು ಮಾಡುವದರಿಂದ ಗರ್ಭದಲ್ಲಿರುವಾಗಲೇ ಪಾಣಿ ಭವಿಷ್ಯತ್ತನೂ ಮನೋಭಾವಗಳನ್ನೂ, ಸೂರ್ಯ ಚಂದ್ರಾದಿಗಳ ಗ್ರಹಣವನ್ನೂ, ತಿಳಿಯಲು ಸಾಧ್ಯವಿದೆಯೆಂಬದು ಮುಂತಾದ ಕೆಲವು ವಿವರಗಳನ್ನು ಬರೆದು, ಆಧಾರ ವಾಗಿ ದತ್ತಾತ್ರೇಯರ ವಚನವೆಂತ ಕೆಲವ್ರ ಶ್ಲೋಕಗಳನ್ನು ಕೊಟ್ಟಿದ್ದಾರೆ ಇವೇ ಮೊದಲಾದ ನಾಡಿಪರೀಕ್ಷೆಗೆ ಸಂಬಂಧ ಪಟ್ಟ ಬಹು ವಿಸ್ತಾರವುಳ್ಳ ಸೂತ್ರಗಳು ಬಹು ಪಕ್ಷದವರಿಗೆ ಪ್ರಯೋಜನಕರವಾಗಲಾರವು ಎಂಬದರಿಂದ, ಅಂಥವುಗಳ ನ್ನೆಲ್ಲಾ ಈ ಭಾಗದಲ್ಲಿ ಸೇರಿಸದೆ ಬಿಟ್ಟಿರುತ್ತದೆ 20. ವಾತೇನ ಶಬ್ದಸ್ತ್ಮತಿಸೌಕ್ಷ್ಮ್ಯಮೇತಿ ಪಿತ್ತಪ್ರಕೋಪೇ ಸ್ಪುಟವಾಕ್ಯತಾ ಚ | ಶಬ್ದದ ಪರೀಕ್ಷೆ ಶ್ರೇಷ್ಮಪ್ರಕೋಪೇ ಗುರುತಾ ಸ್ವರೇ ಸ್ಯಾದ್ದ್ವಯೇ ದ್ವಿಲಿಂಗಂ ತ್ರಿತಯೇ ತ್ರಿಲಕ್ಷ್ಮಂ | (ಧ. 18.) 43