ಈ ಪುಟವನ್ನು ಪರಿಶೀಲಿಸಲಾಗಿದೆ
ಅ XVIII -344-
ಹೊಟ್ಟೆಯುಬ್ಬರ, ಕೀವುಕಟ್ಟಿಕೊಳ್ಳೋಣ, ವಾಂತಿ, ಬಿಕ್ಕಟ್ಟು, ಬಾಯಾರಿಕೆ, ಶ್ವಾಸ ಎಳೆಯುವಾಗ ನೋವು, ಈ ಲಕ್ಷಣಗಳುಳ್ಳವನನ್ನು ವಿದ್ರಧಿಯು ಕೊಲ್ಲುವದು.
15.ಪಾಂಡುರೋಗದಲ್ಲಿ ಅಶುಭಸೂಚನೆ
ಪಾಂಡುದಂತನಖೋ ಯಶ್ಚ ಪಾಂಡುನೇತ್ರಶ್ಚ ಮಾನವಃ | ಪಾಂಡುಸಂಘಾತದರ್ಶೋ ಚ ಪಾಂಡುರೋಗೀ ವಿನಶ್ಯತಿ || (ಸು. 124.)
ಹಲ್ಲು, ಉಗುರು ಮತ್ತು ಕಣ್ಣು ಬಿಳೇದಾಗಿರುವದು ಮತ್ತು ರೋಗಿಯ ದೃಷ್ಟಿಗೆ ಬಿಳುಪಿನ ರಾಶಿಯೇ ಕಾಣುವದು, ಈ ಲಕ್ಷಣಗಳು ಯಾವ ಪಾಂಡುರೋಗಿಯಲ್ಲಿ ಕಾಣುತ್ತವೋ,ಅವನು ಸಾಯುವನು.
16.ರಕ್ತದತ್ತದಲ್ಲಿ ಅಶುಭಸೂಚನೆ
ಲೋಹಿತಂ ಛರ್ದಯೇದ್ಯಶ್ಯ ಬಹುಶೋ ಲೋಹಿತೇಕ್ಷಣಃ | ರಕ್ತಾನಾಂ ಚ ದಿಶಾಂ ದ್ರಷ್ಟಾ ರಕ್ತಪಿತ್ತೀ ವಿನಶ್ಯತಿ | (ಸು. 124.)
ರಕ್ತವನ್ನು ಬಹಳ ಸರ್ತಿ ವಾಂತಿಮಾಡೋಣ, ಕಣ್ಣು ಕೆಂಪಾಗೋಣ, ದಿಕ್ಕುಗಳು ಕೆಂಪಾಗಿ ಕಾಣೋಣ, ಈ ಲಕ್ಷಣಗಳಿಂದ ಕೂಡಿದ ರಕ್ತಪಿತ್ತರೋಗಿಯು ಸಾಯುವನು.
17.ಉನ್ಮಾದದಲ್ಲಿ ಅಶುಭಸೂಚನೆ
ಅವಾಬ್ಮುಖಸ್ತೂನ್ಮುಮೋ ವಾ ಕ್ಷೀಣಮಾ೦ಸಬಲೋ ನರಂ | ಜಾಗರಿಷ್ಣು ರಸಂದೇಹಮುನ್ಮಾದೇನ ವಿನಶ್ಯತಿ || (ಸು. 124.)
ಮುಖವನ್ನು ಕೆಳಗೆ ಬೊಗ್ಗಿಸಿಕೊಂಡೇ ಅಧವಾ ಮೇಲಕ್ಕೆತ್ತಿಕೊಂಡೇ ಇರೋಣ,ಮಾಂಸ ಮತ್ತು ಬಲ ಕ್ಷೀಣವಾಗೋಣ, ನಿದ್ರೆಯಿಲ್ಲದಿರೋಣ, ಈ ಲಕ್ಷಣಗಳು ಉನ್ಮಾದ ರೋಗಿಯಲ್ಲಿ ಕಂಡರ ಆತನು ನಿಶ್ಚಯವಾಗಿ ಸಾಯುವನು.
18.ಅಪಸ್ಮಾರದಲ್ಲಿ ಅಶುಭಸೂಚನೆ
ಬಹುಶೋಪಸ್ಮರಂತಂ ತು ಪ್ರಕ್ಷೀಣಂ ಚಲಿತಭ್ರುವಂ || ನೇತ್ರಾಭ್ಯಾಂ ಚ ವಿಕುರ್ವಾಣಮಪಸ್ಮಾರೋ ವಿನಾಶಯೇತ್ || (ಸು. 124.) ಬಹು ಸರ್ತಿ ಸ್ಮೃತಿ ತಪ್ಪೋಣ, ಬಹಳ ಕ್ಷೀಣತೆ, ಹುಬ್ಬುಗಳನ್ನು ಅಲ್ಲಾಡಿಸೋಣ, ಕಣ್ಣುಗಳನ್ನು ವಿಕಾರವಾಗಿ ತಿರುಗಿಸೋಣ, ಈ ಲಕ್ಷಣಗಳುಳ್ಳವನನ್ನು ಅಪಸ್ಮಾರ ರೋಗವು ಕೊಲ್ಲುವದು.
19.ಮಸೂರಿಕೆಯಲ್ಲಿ ಅಶುಭಸೂಚನೆ
ಪ್ರವಾಲಗುಲಿಕಾಭಾಸಾ ಯಸ್ಯ ಗಾತ್ರೇ ಮಸೂರಿಕಾಃ | ಉತ್ಪದ್ಯಾಶು ವಿನಶ್ಯಂತಿ ನ ಚಿರಾತ್ ನ ವಿನಶ್ಯತಿ | (ವಾ. 176.)
ಹವಳದ ಗುಂಡಿನ ಪ್ರಭೆಯುಳ್ಳ ಮೈಲಿಗೆ ಖಜ್ಜಿಗಳು ಯಾವನ ಶರೀರದಲ್ಲಿ ಎದ್ದು ಬೇಗನೇ ಕಾಣದೆ ಹೋಗುತ್ತವೋ, ಆತನು ಸ್ವಲ್ಪಕಾಲದಲ್ಲಿಯೇ ಮೃತವಾಗುವನು.