ಈ ಪುಟವನ್ನು ಪರಿಶೀಲಿಸಲಾಗಿಲ್ಲ.
-345-
ಆ XVIII
20.ಕೋಟಲೆಯಲ್ಲಿ ಅಶುಭಸೂಚನೆ
ಮಸೂರದ್ವಿದಲಪ್ರಖ್ಯಾಸ್ತಧಾ ವಿದ್ರುಮಸನ್ನಿಭಾಃ | ಅಂತರ್ವಕ್ತ್ರಾಃ ಕಿಣಾಭಾಶ್ಚ ವಿಸ್ಪೋಟಾ ದೇಹನಾಶನಾಃ || (ವಾ. 176.) ಗುಳ್ಳೆಗಳು ಚಾಣಂಗಿ ಬೇಳೆಯ ಆಕಾರವಾಗಿಯೂ, ಹವಳದ ವರ್ಣವಾಗಿಯೂ, ಒಳ ಮುಖವಾಗಿಯೂ, ದಡ್ಡಿಗೆ ಸದೃಶವಾಗಿಯೂ ಇದ್ದರೆ, ಆ ಗುಳ್ಳೆ (ಕೋಟಲೆ) ರೋಗವು ದೇಹವನ್ನು ನಾಶಮಾಡುವದು.
21.ಅಷ್ಠೀಲಾ ವ್ಯಾಧಿಯಲ್ಲಿ ಅಶುಭಸೂಚನೆ
ವಾತಾಷ್ಠೀಲಾತಿಸಂವೃದ್ದಾ ತಿಷ್ಠಂತೀ ದಾರುಣಾ ಹೃದಿ | ತೃಷ್ಣಯಾ ತು ಪರೀತಸ್ಯ ಸದ್ಯೋ ಮುಷ್ಣಾತಿ ಜೀವಿತಂ || (ವಾ. 175 ) ವಾತ ಅಷ್ಠೀಲವು ಅತಿಯಾಗಿ ಬೆಳೆದು ಎದೆಯಲ್ಲಿ ಕರಿಣವಾಗಿ ನಿಂತಿದ್ದು, ಬಾಯಾರಿಕೆ ಯುಂಟಾದರೆ ಆ ಮನುಷ್ಯನು ಸದ್ಯದಲ್ಲಿ ಪ್ರಾಣವನ್ನು ಬಿಡುವನು.
22.ಶೋಫೆ ಮತ್ತು ಜ್ವರಾತಿಸಾರ
ಜ್ವರಾತಿಸಾರೌ ಶೋಫಾಂತೇ ಶ್ವಯಧುರ್ವಾ ತಯೋಃ ಕ್ಷಯೇ | ದುರ್ಬಲಸ್ಯ ವಿಶೇಷೇಣ ಬಾಯಂತೇTಂತಾಯ ದೇಹಿನಃ || (ವಾ. 174.) ಶೋಫೆಯ ಅಂತ್ಯದಲ್ಲಿ ಜ್ವರಾತಿಸಾರಗಳು ಅಧವಾ ಜರಾತಿಸಾರಗಳ ಅಂತ್ಯದಲ್ಲ
ಶೋಫೆ ಉಂಟಾದರ, ಮುಖ್ಯವಾಗಿ ರೋಗಿಯು ದುರ್ಬಲನಾಗಿದ್ದರೆ, ಆತನ ಅಂತ್ಯವು ಸಮಿಾಪಿಸಿತೆಂದು ತಿಳಿಯುವದು.
23.ಇಂದ್ರಿಯಗಳ ದುರ್ಬಲತೆ
ನಾಸಾಗ್ರಂ ಭ್ರೂಯುಗಂ ಜಿಹ್ವಾಂ ಮುಖಂ ಚೈವ ನ ಪಶ್ಯತಿ || ಕರ್ಣಘೋಷಂ ನ ಜಾನಾತಿ ಸ ಗಚ್ಛೇದ್ಯಮಮಂದಿರಂ ||
ಮೂಗಿನ ತುದಿ, ಎರಡು ಹುಬ್ಬುಗಳು, ನಾಲಿಗೆ, ಮುಖ, ಇವು ಯಾವ ರೋಗಿಗೆ
ಕಾಣುವದಿಲ್ಲ ವೋ ಮತ್ತು ಯಾವನಿಗೆ ಕಿವಿಯೊಳಗಿನ ಘೋಷವು ಕೇಳುವದಿಲ್ಲ ವೋ, ಅವನು ಮೃತಿ ಹೊಂದುವನು.
24.ಶ್ವಾಸವಿರುವ ವರೆಗೆ ಚಿಕಿತ್ಸಾವಶ್ಯಕ
ಯಾವಚ್ಚ ಶ್ವಸತೇ ಜೀವೋ ಯಾವತ್ಕ್ರಮತಿ ಭೇಷಜಂ | ತಾವತ್ಕ್ರಿಯಾ ಪ್ರಕರ್ತವ್ಯಾ ದೈವಸ್ಯ ಕುಟಿಲಾ ಗತಿಃ | ( ನಿ ರ)
ಯಾವ ವರೆಗೆ ಜೀವಶ್ವಾಸ ಇರುತ್ತದೋ ಮತ್ತು ಔಷಧವು ಕೆಳಗೆ ಇಳಿಯುತ್ತದೋ,
ಆ ವರೆಗೆ ಪ್ರತಿಕ್ರಿಯೆಗಳನ್ನು ನಡಿಸತಕ್ಕದ್ದು. ದೈವಗತಿಯು ಕುಟಿಲವಾಗಿದೆ.
25.ಸರಿಯಾದ ಚಿಕಿತ್ಸೆ ನಿಷ್ಠಲವಾಗುವದು
ಚಿಕಿತ್ಸ್ಯಮಾನಃ ಸಮ್ಯಕ್ಚ ವಿಕಾರೋ ಯೋSಭಿವರ್ಧತೇ | ಪ್ರಕ್ಷೀಣಬಲಮಾಂಸಸ್ಯ ಲಕ್ಷಣಂ ತದ್ಗತಾಯುಷಃ | (ಸು. 122.)