ಅ XIX
__356__
ದೇಹದಿಂದ ದೋಷಗಳನ್ನು ಹೊರಗೆ ಹಾಕುವಂಥಾದ್ದು ಯಾವದೋ ಅದು ಶೋಧನ. ಅದು ಐದು ವಿಧ:
1. ನಿರೂಹವಸ್ತಿ, 2. ವಾಂತಿಮಾಡಿಸುವದು, 3. ದೇಹವಿರೇಚನ 4. ಶಿರಸ್ಸಿನ ವಿರೇಚನ ಮತ್ತು 5. ರಕ್ತ ತೆಗೆಯುವದು, ಹೀಗೆ.
32. ಕಷಾಯಕ್ಷೀರತೋ ವಸ್ತಿರ್ನಿರೂಹಃ ಸ ನಿಗದ್ಯತೇ |
ಸಿರೂಹದ ವಾಖ್ಯಾನ
(ಚಿ. ಸಾ. ಸಂ. 932 ) ಕಷಾಯ ಅಧವಾ ಹಾಲಿನ ಮೂಲಕ (ಗುದದ್ವಾರ) ಕೊಡುವ ವಸ್ತಿಗೆ ನಿರೂಹವೆಂದು ಹೆಸರು.
33. ನ ಶೋಧಯತಿ ಯದ್ದೋಷಾನ್ ಸಮಾನ್ನೋದೀರಯತ್ಯಪಿ |
ಸಮೀಕರೋತಿ ವಿಷಮಾನ್ ಶಮನಂ ತಚ್ಚ ಸಪ್ತಧಾ || ಪಾಚನಂ ದೀಪನಂ ಕ್ಷುತ್ತೃಡ್ ವ್ಯಾಯಾಮಾತಪಮಾರುತಾಃ | ಬೃಂಹಣಂ ಶಮನಂ ತ್ವೇವ ವಾಯೋಃ ಪಿತ್ತಾನಿಲಸ್ಯ ಚ || (ವಾ. 68.)
ಶಮನದ ವ್ಯಾಖ್ಯಾನ
ದೋಷಗಳನ್ನು ಹೊರಗೆ ಹಾಕದೆ, ಸಮವಾಗಿರುವವನ್ನು ಕೆದರಿಸದೆ, ವಿಷಮವಾಗಿರುವವನ್ನು ಸರಿಪಡಿಸುವದಕ್ಕೆ ಶಮನವೆನ್ನುವದು. ಅದು ಏಳು ವಿಧ 1. ಪಾಚನ 2. ದೀಪನ 3 ಹಸಿವು (ಉಪವಾಸ) 4. ಬಾಯಾರಿಕೆ (ಕುಡಿಯದಿರೋಣ) 5. ವ್ಯಾಯಾಮ 6. ಬಿಸಿಲು ಮತ್ತು 7. ಗಾಳಿ, ಆದರ ವಾತಕ್ಕೆ ಮತ್ತು ವಾತಪಿತ್ತಕ್ಕೆ ಬೃಂಹಣವೇ ಶಮನವಾಗಿರುತ್ತದೆ (ಅಂದರೆ ಉಪವಾಸಾದಿಗಳು ವಿರುದ್ಢ).
34. ಉಪಕ್ರಮ್ಯಸ್ಯ ಹಿ ದ್ವಿತ್ವಾದ್ದ್ವಿಧೈವೋಪಕ್ರಮೋ ಮತಃ |
ಏಕಃ ಸಂತರ್ಪಣಸ್ತತ್ರ ದ್ವಿತೀಯಶ್ಚಾಪತರ್ಪಣಃ || ಬೃಂಹಣೋ ಲಂಘನಶ್ವೇತಿ ತತ್ಪರ್ಯಾಯಾವುದಾಹೃತೌ | ಬೃಂಹಣಂ ಯದ್ವೃಹತ್ವಾಯ ಲಂಘನಂ ಲಾಘವಾಯ ಯತ್ | ದೇಹಸ್ಯ - (ವಾ. 68.) .
ಉಪಕ್ರಮದಲ್ಲಿ ಸಂತರ್ಪಣ, ಅಪತರ್ಪಣ, ಎಂಬ ಭೇದ
ರೋಗಿಯಲ್ಲಿ ಎರಡು ವಿಧವಿರುವದರಿಂದ ಚಿಕಿತ್ಸೋಪಕ್ರಮವು ಎರಡೇ ವಿಧ. 1. ಸಂತರ್ಪಣ 2. ಅಪತರ್ಪಣ. ಆ ಸಂತರ್ಪಣಕ್ಕೇನೇ ಬೃಂಹಣ ಮತ್ತು ಅಪತರ್ಪಣಕ್ಕೆ ಲಂಘನ ಎನ್ನುವದು. ಯಾವದು ದೇಹದ ವುಷ್ಟಿಗೆ ಸಹಾಯಮಾಡುತ್ತದೋ, ಅದು ಬೃಂಹಣ; ಮತ್ತು ಯಾವದು ದೇಹವನ್ನು ಲಘುಮಾಡುವದಕ್ಕೆ ಸಹಾಯಕವೋ, ಅದು ಲಂಘನ.
35. ದೋಷಾಣಾಂ ಬಹುಸಂಸರ್ಗಾತ್ ಸಂಕೀರ್ಯಂತೇ ಹ್ಯುಪಕ್ರಮಾಃ |
ಷಟ್ಕಂ ತು ನಾತಿವರ್ತಂತೇ ತ್ರಿತ್ವಂ ವಾತಾದಯೋ ಯಧಾ || (ಚ.123)
ಉಪಕ್ರಮಗಳಲ್ಲಿ ಲಂಘನಾದಿ 6 ವಿಧ
ದೋಷಗಳು ಬಹು ವಿಧವಾಗಿ ಕೂಡಿಕೊಳ್ಳುವದರಿಂದ ಉಪಕ್ರಮಗಳಲ್ಲಿ ಬಹಳ ಭೇದವಿದ್ದರೂ,ದೋಷಗಳು ವಾತ-ಪಿತ್ತ-ಶ್ಲೇಷ್ಮಗಳೆಂಬ ಮೂರಕ್ಕೆ ಹ್ಯಾಗೆ ಮಿಕ್ಕಿರುವದಿಲ್ಲವೋ,ಹಾಗೆಯೇ ಉಪಕ್ರಮಗಳು ಆರಕ್ಕೆ ಮಿಕ್ಕಿರುವದಿಲ್ಲ