ಆ XIX
-357-
ಲಂಘನಂ ಬೃಂಹಣಂ ಕಾಲೇ ರೂಕ್ಷಣಂ ಸ್ನೇಹನಂ ತಥಾ | ಸ್ವೇದನಂ ಸ್ತಂಭನಂ ಚೈವ ಜಾನೀತೇ ಯಃ ಸ ವೈ ಭಿಷಕ್ || (ಚ, 120.)
ಆ ಆರು ಉಪಕ್ರಮಗಳು ಯಾವವಂದರೆ: 1. ಲಂಘನ, 2 ಬೃಂಹಣ, 3. ರೂಕ್ಷಣ, 4. ಸ್ನೇಹನ, 5. ಸ್ವೇದನ ಮತ್ತು 6. ಸ್ತಂಭನ. ಇವುಗಳನ್ನು ತಕ್ಕ ಕಾಲಗಳಲ್ಲಿ ಉಪಯೋಗಿಸಲಿಕ್ಕೆ ತಿಳಿದವನೇ ವೈದ್ಯನೆನ್ನಿಸಿಕೊಳ್ಳಲಿಕ್ಕೆ ಯೋಗ್ಯ.
36. ಯತ್ಕಿಂಚಿಲ್ಲಾಘವಕರಂ ದೇಹೇ ತಲ್ಲಂಘನಂ ಸ್ಮೃತಂ |
ಬೃಂಹತ್ವಂ ಯಚ್ಛರೀರಸ್ಯ ಜನಯೇತ್ತಚ್ಚ ಬೃಂಹಣಂ | ರೌಕ್ಷ್ಯಮ್ ಖರತ್ವಂ ವೈಶದ್ಯಂ ಯತ್ಕುರ್ಯಾತದ್ಧಿ ರೂಕ್ಷಣಂ | ಸ್ನೇಹನಂ ಸ್ನೇಹನಿಷ್ಯಂದಮಾರ್ದವಕ್ಲೇದಕಾರಕಂ || ಸ್ತಂಭಗೌರವಶೀತಘ್ನಂ ಸ್ವೇದನಂ ಸ್ವೇದಕಾರಕಂ || ಸ್ತಂಭನಂ ಸ್ತಂಭಯತಿ ಯದ್ಗತಿಮಂತಂ ಚಲಂ ಧ್ರುವಂ || (ಚ. 120 )
ಲ೦ಘನಾದಿಗಳ ವ್ಯಾಖ್ಯಾನ
ಯಾವದು ದೇಹದಲ್ಲಿ ಅಘುತ್ವವನ್ನುಂಟುಮಾಡತಕ್ಕಂಧಾದ್ದೋ, ಅದು ಲಂಘನ, ಶರೀರದ ಪುಷ್ಟಿಯನ್ನುಂಟುಮಾಡತಕ್ಕಂಥಾದ್ದು ಯಾವದೋ, ಅದು ಬೃಂಹಣ; ರೂಕ್ಷತ್ವ, ಖರತ್ವ ಮತ್ತು ವಿಶದತ್ವ, ಇವುಗಳನ್ನುಂಟುಮಾಡುವಂಥಾದ್ದು ಯಾವದೋ, ಅದು ರೂಕ್ಷಣ, ಜಿಡ್ಡನ್ನೂ, ಸುರಿಯುವಿಕೆಯನ್ನೂ, ಮೃದುತ್ವವನ್ನೂ, ಒದ್ದೆಯಾಗಿರುವಿಕೆಯನ್ನೂ ಉಂಟುಮಾಡತಕ್ಕಂಧಾದ್ದು ಸ್ನೇಹನ, ಸ್ತಬ್ಧತೆಯನ್ನೂ, ಗುರುತ್ವವನ್ನೂ, ಶೀತವನ್ನೂ, ಹೋಗಲಾಡಿಸತಕ್ಕಂತೆ ಬೆವರನ್ನುಂಟುಮಾಡತಕ್ಕಂಧಾದ್ದು ಸ್ವೇದನ, ಗತಿಯುಳ್ಳದ್ದನ್ನೂ ಮತ್ತು ಅಸ್ಥಿರವಾದದ್ದನ್ನೂ ಸ್ಥಿರವಾಗಿ ನಿಲ್ಲಿಸತಕ್ಕಂಥಾದ್ದು ಸ್ತಂಭನ.
37. ಲಘೂಷ್ಣತೀಕ್ಷ್ಗವಿಶದಂ ರೂಕ್ಷಂ ಸೂಕ್ಶ್ಮಂ ಖರಂ ಸರಂ |
ಕರಿನಂ ಚೈವ ಯುದ್ದ್ರವ್ಯಂ ಪ್ರಾಯಸ್ತಲ್ಲಂಘನಂ ಸ್ಮೃತಂ || ಗುರುಶೀತಮೃದುಸ್ನಿಗ್ದಂ ಬಹುಲಂ ಸೂಕ್ಷ್ಮಪಿಚ್ಛಿಲಂ | ಪ್ರಾಯೋ ಮಂದಂ ಸ್ಥಿರಂ ಸೂಕ್ಷ್ಮಂ ದ್ರವ್ಯಂ ಬೃಂಹಣಮುಚ್ಯತೇ || ರೂಕ್ಷಂ ಲಘು ಖರಂ ತೀಕ್ಷ್ಣಮುಷ್ಣಂ ಸ್ಥಿರಮಪಿಚ್ಛಿಲಂ | ಪ್ರಾಯಶಃ ಕರಿನಂ ಚೈವ ಯದ್ದ್ರವ್ಯಂ ತದ್ಧಿ ರೂಕ್ಷಣಂ | ದ್ರವಂ ಸೂಕ್ಷ್ಮಂ ಸರಂ ಸ್ನಿಗ್ಢಂ ಪಿಚ್ಛಿಲಂ ಗುರುಶೀತಲಂ || ತಕ್ಕ ದ್ರವ್ಯ ಪ್ರಾಯೋ ಮಂದಂ ಮೃದು ಚ ಯದ್ದ್ರವ್ಯಂ ತತ್ಸ್ನೇಹನಂ ಮತಂ | ಉಷ್ಣಂ ತೀಕ್ಷಂ ಸರಂ ಸ್ನಿಗ್ಧಂ ರೂಕ್ಷಂ ಸೂಕ್ಷ್ಮಂ ದ್ರವಂ ಸ್ಥಿರಂ | ದ್ರವ್ಯಂ ಗುರು ಚ ಯತ್ಪ್ರಾಯಃ ತದ್ಧಿ ಸ್ವೇದನಮುಚ್ಯತೇ || ಶೀತಂ ಮಂದಂ ಮೃದು ಶ್ಲಕ್ಷ್ಣಂ ರೂಕ್ಷಂ ಸೂಕ್ಷ್ಮಂ ದ್ರವಂ ಸರಂ | ಯದ್ದ್ರವ್ಯಂ ಲಘು ಚೋದ್ದಿಷ್ಟಂ ಪ್ರಾಯಸ್ತತ್ತ್ಸಂಭನಂ ಸ್ಮೃತಂ || (ಚ, 120-21,)
ಲಂಘನಾದಿ ಕರ್ಮ ಸಿದ್ಧಿಸ ತಕ್ಕ ದ್ರವ್ಯ ಗುಣಗಳು