ಅ AIA 3bರಿ ಸ್ವಭಕ್ತಂ ಪ್ರಾವೃತಾಂಗಂ ಚ ನಿವಾತಶರಣಸ್ಥಿತಂ || ಭೋಜಯೇದನಭಿಷ್ಯಂದಿ ಸರ್ವಂ ವಾಚಾರಮಾದಿಶೇತ್ | (ಸು. 546.) ಎಲ್ಲಾ ವಿಧವಾದ ಸ್ನೇದಗಳನ್ನು, ರೋಗಿಯು ಉಂಡದ್ದು ಜೀರ್ಣವಾದ ಮೇಲೆ, ಶರೀ ರಕ್ಕೆ ಸ್ನೇಹ ಹಚ್ಚಿ, ಗಾಳಿಯಿಲ್ಲದ ಸ್ಥಳದಲ್ಲಿ, ನಡಿಸಬೇಕು ಮತ್ತು ಕಣ್ಣುಗಳನ್ನು ಶೀತವಾದ ವಸ್ತಾದಿಗಳಿಂದ ಮುಚ್ಚಿಡಬೇಕು; ಬೆವರುವಾಗ್ಗೆ ಎದೆಗೆ ಪದೇ ಪದೇ ತಣ್ಣಗಾದವುಗಳ ಸ್ಪರ್ಶನಕೊಡಬೇಕು; ಚೆನ್ನಾಗಿ ಬೆವರು ಬಂದ ಮೇಲೆ ಮೆಲ್ಲಗೆ ತಿಕ್ಕಿ, ಬಿಸಿನೀರಿನಿಂದ ಸ್ನಾನ ಮಾಡಿಸಿ, ಎಣ್ಣೆ ಹಚ್ಚಿ, ಅಂಗಗಳು ಮುಚ್ಚುವ ಹಾಗೆ ಹೊದ್ದಿಸಿ, ಗಾಳಿಯಿಲ್ಲದ ಕೋಣೆಯಲ್ಲಿ ಇರಿಸಿ, ಅಭಿಷ್ಯಂದಿಯಲ್ಲದ ಭೋಜನವನ್ನು ಕೊಡಬೇಕು, ಅಥವಾ ಎಲ್ಲಾ ವಿಷಯದಲ್ಲಿಯೂ ಪಧ್ಯದಲ್ಲಿರಿಸಬೇಕು. ವಿಧಾನ 72. ತತ್ರ ತಾಪತ್ತೇದಃ ಪಾಣಿಕಾಂಸ್ಯಕಂದುಕಪಾಲವಾಲುಕಾವ ಪ್ರಯು ತಾಪಸೇದದ ಜ್ಯತೇ ಶಯಾನಸ್ಯ ಚಾಂಗತಾವೋ ಬಹುಶಃ ಖಾದಿರಾಂಗಾರೈರಿತಿ | (ಸು. 543.) ನಾಲ್ಕು ವಿಧವಾದ ಸ್ನೇದಗಳಲ್ಲಿ ತಾಪಸೈದವೆಂಬದು ರೋಗಿಯನ್ನು ಮಲಗಿಸಿ, ಖದಿರೆ ಮರದ ಬೆಂಕಿಯಲ್ಲಿ ಬಿಸಿ ಮಾಡಿದ ಅಂಗೈ, ತಟ್ಟೆ, ಚರಿಗೆ, ಬಾಣಲೆ, ಮಳಲು ಅಧವಾ ವಸ್ತ್ರ ದಿಂದ ಅಂಗವನ್ನು ಬಿಸಿಮಾಡುವದಾಗಿರುತ್ತದೆ. ಷರಾ ಅಂಗದ ಮೇಲೆ ವಸ್ತ್ರದ ತುಂಡು ಹೊದಿಸಿ, ಮಳಲು, ವಸ್ತ್ರ ಅಥವಾ ಅಂಗೈಗೆ ಹುಳಿದ್ರವವನ್ನು ಚಿಮುಕಿಸಿ ಕೊಳ್ಳಬೇಕಾಗಿ ಭಾ ಪ್ರ (229) ವಸ್ತ್ರ, ಫಾಲ (ನೇಗಲ ಮೊನೆ) ಅಂಗೈ ಮುಂತಾದ್ದರಿಂದ ಬಿಸಿಮಾಡುವದಾಗಿ ವಾ (ಪು 80) 73. ಉನ್ಮತ್ತೇದಸ್ತು ಕಪಾಲಪಾಷಾಣೇಷ್ಟ ಕಾಲೋಹಪಿಂಡಾನಗ್ನಿವರ್ಣಾ ಉಷ್ಯದ್ವೇದದ ನದ್ಭರಾಸಿಂಚೇದಮ್ಮ ದ್ರವೈರ್ವಾತೃರಾದ್ರ್ರಾಲಕ್ಕಪರಿವೇಷ್ಟಿತಮಂಗ ವಿಧಾನ ಪ್ರದೇಶಂ ಪೋದಯೇತ್ | (ಸು. 543.) ಉಸ್ಮಸ್ಸೇದವೆಂಬದು ಬಾಣಲೆ, (ಅಧವಾ ಆ ಆಕಾರದ ಮಣ್ಣಿನ ಪಾತ್ರೆ, ಓಡು), ಶಿಲೆ ಕಲ್ಲು, ಇಟ್ಟಿಗೆ, ಅಧವಾ ಕಬ್ಬಿಣದ ಗಟ್ಟಿಯನ್ನು ಅಗ್ನಿವರ್ಣವಾಗುವ ತನಕ ಸುಟ್ಟು, ಅದಕ್ಕೆ ನೀರು ಅಥವಾ ಹುಳಿಯಾದ ಗಂಜಿ ಮುಂತಾದ ದ್ರವಪದಾರ್ಥವನ್ನು ಚಿಮುಕಿಸಿ, ಅದರ ಸೆಕೆ ಯನ್ನು ಅಗತ್ಯವುಳ್ಳ ಅಂಗಕ್ಕೆ ಕೊಟ್ಟು ಬೆವರಿಸುವದು. ಆ ಅಂಗವನ್ನು ಮೊದಲಾಗಿ ಅದೇ ದ್ರವದಿಂದ ಒದ್ದೆ ಮಾಡಲ್ಪಟ್ಟ ವಸ್ತ್ರದಿಂದ ಸುತ್ತಿಕೊಳ್ಳಬೇಕು. ಇದರಲ್ಲಿ ಇನ್ನೊಂದು ವಿಧ ಹ್ಯಾಗಂದರೆ - ಮಾಂಸರಸಪಯೋದಧಿಧಾನ್ಯಾಮ ವಾತಹರಪತ್ರಭಂಗಕ್ಕಾಧಪೂರ್ಣಾ೦ ನಾ ಕುಂಭೀಮನುತಾಂ ಪ್ರಾತೃತ್ಯೋಷ್ಮಾಣಂ ಗೃಘೀಯಾತ್ | (ಸು. 543.)
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.