ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ xxx 44, - 384 – 42. ತಗರಾಗುರು- ಧನ್ಯಾಕ-ಶೃಂಗವೇರ-ಭೂತೀಕವಚಾ- ಕಂಟಕಾರಿಕಾಗ್ನಿ ಮಂಧ- ಶ್ಲೋಣಾಕ- ಪಿಪ್ಪಲ್ಯ: ಇತಿ ದಶೇಮಾನಿ ಶೀತಪ್ರಶಮನಾನಿ ಭವಂತಿ | ತಗರ, ಅಗಿಲುಗಂಧ, ಕೊತ್ತಂಬರಿ, ಶುಂಠಿ, ಮಜ್ಜಿಗೆ ಹುಲ್ಲು (ಅಧವಾ ನೆಲಬೇವು), ಬಜೆ, ಕಲ್ಲಂಟಿ, ನರುವಲು, ಆನೆಮುಂಗು, ಹಿಪ್ಪಲಿ, ಇವು ಹತ್ತು ಶೀತಶಮನಮಾಡತಕ್ಕಂಧವ. 43. ತಿಂದುಕ - ಪಿಯಾಲ - ಬದರ ಖದಿರ-ಕದರ-ಸಪ್ತಪರ್ಣಾಶ್ವಕರ್ಣಾರ್ಜು ನಾಸನಾರಿಮೇದಾ ಇತಿ ದಶಮಾನುದರ್ದಪ್ರಶಮನಾನಿ ಭವಂತಿ | ಬಂದ, ಮೋರಂಟೆ (ಮಲ, ಮುರಳ), ಬೊಗರಿ, ಕೆಂಪು ಕಾಚ, ಬಿಳೆ ಕಾಚು, ಹಾಲೆ (ಏಳೆಲೆ ಬಾಳೆ), ರಾಳ, ಮತ್ತಿ, ಅಸನ (ಬೇಂಬ), ಕರಿಜಾಲಿ (ಇರಿಮೇದ), ಇವ್ರ ಹತ್ತು ಉದರ್ದರೋಗವನ್ನು ಶಮನಮಾಡತಕ್ಕವು. ವಿದಾರೀಗಂಧಾ -ಪೃಶ್ನಿಸರ್ಣೀ - ಬೃಹತೀ -ಕಂಟಕಾರಿಕೈರಂಡ-ಕಾಕೋ ಲೀ-ಚಂದನೋಶೀರೈಲಾ-ಮಧುಕಾನೀತಿ ದಶೇಮಾನಿ ಅಂಗಮರ್ದಪ್ರಶ ಮನಾನಿ ಭವಂತಿ | ಮೂವೆಲೆ, ಓರೆಲೆ, ಗುಳ್ಳ, ಕಲ್ಲಂಟಿ, ಹರಳು, ಕಾಕೋಲೇ, ಶ್ರೀಗಂಧ, ಲಾವಂಚ, ಯಾಲಕ್ಕಿ, ಜೇಷ್ಠಮಧು, ಇವು ಹತ್ತು ಅಂಗಮರ್ದವನ್ನು ಶಮನಮಾಡತಕ್ಕವು. 45, ಪಿಪ್ಪಲೀ - ಪಿಪ್ಪಲೀಮೂಲ - ಚವ್ಯ-ಚಿತ್ರಕ-ಶೃಂಗವೇರ-ಮರಿಚಾಜಮೋ ದಾಜಗಂಧಾಜಾಜೀ-ಗಂಡೀರಾತಿ ದಶೇಮಾನಿ ಶೂಲಪ್ರಶಮನಾನಿ ಭವಂತಿ || ಹಿಪ್ಪಲಿ, ಹಿಪ್ಪಲೀಮೂಲ, ಕಾಡು ಮೆಣಸಿನ ಬೇರು, ಚಿತ್ರಮೂಲ, ಶುಂರಿ, ಕಾಳು ಮೆಣಸು, ಓಮ, ಸಿರಿಕಾಳ (ಮಲ ಕಾರ್ವೇಳ), ಜೀರಿಗೆ, ಗಂಡೀರ* ಇವು ಹತ್ತು ಶೂಲ ಶಮನಮಾಡತಕ್ಕವು.

  • ಸಮಷ್ಟಿ' ಎಂತಲೂ ನದ್ಯಾಮ' ಎಂತಲೂ ಇದಕ್ಕೆ ಹೆಸರುಗಳಿವೆ 46. ಮಧು - ಮಧುಕ - ರುಧಿರ - ಮೋಚರಸ - ಮೃತ್ಯಪಾಲ-ಲೋಧ್ರ-ಗೈರಿಕ

ಪ್ರಿಯಂಗು-ಶರ್ಕರಾ-ಲಾಜಾ ಇತಿ ದಶೇಮಾನಿ ಶೋಣಿತಾಸ್ಥಾಪನಾನಿ ಭವಂತಿ | ಜೇನು, ಜೇಷ್ಠ ಮಧು, ಕುಂಕುಮಕೇಸರ, ಬೂರುಗದ ಮೇಣ, ಮಣ್ಣಿನ ಕಪಾಲ, ಲೋಧ್ರ, ಕಾವಿಕಲ್ಲು, ಪ್ರಿಯಂಗು, ಸಕ್ಕರೆ, ಅರಳು, ಇವ್ರ ಹತ್ತು ರಕ್ತವನ್ನು ನಿಲ್ಲಿಸತಕ್ಕವು. 47, ಶಾಲ-ಕಟ್ಟಲ- ಕದಂಬ - ಪದ್ಮಕ -ತುರಂಗ -ಮೋಚರಸ-ಶಿರೀಷ-ವಂಜು ಲೈಲವಾಲುಕಾಶೋಕಾ ಇತಿ ದಶೇಮಾನಿ ವೇದನಾಸ್ಥಾಪನಾನಿ ಭವಂತಿ |