ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 -408-


             XXI ನೇ ಅಧ್ಯಾಯ.
           ವಮನ ವಿರೇಚನ ವಿಧಿಗಳು.
 1.ಪ್ರಾಧಾನ್ಯೇನ ವಮನವಿರೇಚನೇ ವರ್ತೇತೇ ನಿರ್ಹರಣೇ                      ವಮನವಿರೇಚನಗಳ ದೋಷಾಣಾಂ | (ಸು. 546.)

ಉಪಿಯೋಗ

 ದೋಷಗಳನ್ನು ಹೊರಗೆ ಹಾಕುವದಕ್ಕೆ ವಮನ (ವಾಂತಿ ಮಾಡಿಸುವದು) ವಿರೇಚನ (ಜುಲಾಬು ಮಾಡಿಸುವದು)ಗಳು ಪ್ರಧಾನವಾಗಿರುತ್ತವೆ
ವಮನಕ್ಕೆ ಹಿಂದಿನ ದಿನದ ಕರ್ತವ್ಯ 
 2. ತಧಾತುರಂ ಸ್ನಿಗ್ಧಂ ಸ್ವಿನ್ನಮಭಿಷ್ಯಂದಿಭಿರಾಹಾರೈರನವಬದ್ದ ದೋಷ ಮವಲೋಕ್ಯ ಶ್ವೋ ವಮನಂ ಪಾಯಯಿತಾಶ್ಮೀತಿ ಸಂಭೋಜಯೇತ್  ತೀಕ್ಷಾಗ್ನಿಂ ಒಲವಂತಂ ಬಹುದೋಷಂ ಮಹಾವ್ಯಾಧಿಪರೀತಂ ವಮನ ಸಾತ್ತ್ವಂ ಚ | (ಸು.547.)
   ತೀಕ್ಷ್ಣವಾದ ಅಗ್ನಿಯುಳ್ಳವನೂ, ಬಲವಂತನೂ, ಬಹು ದೋಷಗಳಿಂದ ಕೂಡಿದವನೂ, ಮಹಾವ್ಯಾಧಿಯಿಂದ ಪೀಡಿತನೂ, ವಮನಸಾತ್ಮ್ಯನಾದವನೂ ಆದ ರೋಗಿಯನ್ನು (ಸ್ನೇಹನ ಕ್ರಮದಿಂದ) ಸಿಗ್ಧನೂ, (ಸ್ಪೇದನ ಕ್ರಮದಿಂದ) ಸ್ಪಿನ್ನನೂ, ಬದ್ಧ ದೋಷವಿಲ್ಲದವನೂ ಆದದ್ದನ್ನು ನೋಡಿಕೊಂಡು, ನಾಳೆ ವಾಂತಿ ಮದ್ದನ್ನು ಕೊಡಿಸುತ್ತೇನೆಂತ (ಹಿಂದಿನ ದಿನ) ಅಭಿಷ್ಯಂದಿಯಾದ ಆಹಾರಗಳಿಂದ ಚೆನ್ನಾಗಿ ಉಣ್ಣಿಸಬೇಕು.

ಷರಾ ಅಭಿಷ್ಯಂದಿಯ ಅರ್ಥಕ್ಕೆ 73ನೇ ಪುಟ ನೋಡಿರಿ

ವಮನಕ್ಕೆ ಕಾಲ ಮತ್ತು ದ್ರವ್ಯ
3. ಅಧಾಪರೕದ್ಯುಃ ಪೂರ್ವಾಹ್ಣೇ ಸಾಧಾರಣೇ ಕಾಲೇ ವಮನದ್ರವ್ಯ

ಕಷಾಯಕಲ್ಕಚೂರ್ಣಸ್ನೇಹಾನಾಮನ್ಯತಮಸ್ಯ ಮಾತ್ರಾಂ ಪಾಯ

ಯಿತ್ವಾ ವಾಮಯೇತ್ | ಯಧಾಯೋಗಂ ಕೋಷ್ಠ ವಿಶೇಷಮವೇ ಕ್ಷ್ಯಾಸಾತ್ಮ್ಯಬೀಭತ್ಸದುರ್ಗಂಧದುರ್ದರ್ಶನಾನಿ ಚ ವಮನಾನಿ ವಿದ

ಧ್ಯಾತ್ | ಅತೋ ವಿಪರೀತಾನಿ ವಿರೇಚನಾನಿ | (ಸು. 547,)

ಮಾರಣೆ ದಿನ ಪೂರ್ವಾಗ
 ಮಾರಣೆ ದಿನ ಪೂರ್ವಾಹ್ಣದಲ್ಲಿ, ಶೀತವೂ ಉಷ್ಣವೂ ಅಲ್ಲದ ಕಾಲದಲ್ಲಿ, ವಮನದ್ರವ್ಯ ಗಳಿಂದ ತಯಾರಿಸಲ್ಪಟ್ಟ ಕಷಾಯ, ಕಲ್ಕ, ಚೂರ್ಣ, ಸ್ನೇಹ, ಇವುಗಳಲ್ಲಿ ಒಂದನ್ನು ತಕ್ಕ ಪ್ರಮಾಣದಲ್ಲಿ ಕುಡಿಸಿ ವಾಂತಿ ಮಾಡಿಸಬೇಕು. ರೋಗಿಯ ಹೊಟ್ಟೆಯ ಸ್ಥಿತಿವಿಶೇಷವನ್ನು ನೋಡಿಕೊಂಡು, ರೋಗಿಗೆ ಹಿತವಲ್ಲದ್ದು, ಅಸಹ್ಯಕರವಾದದ್ದು, ದುರ್ವಾಸನೆಯುಳ್ಳದ್ದು, ಮತ್ತು ನೋಡುವಿಕೆಗೆ ಅಹಿತವಾದದ್ದು ಆಗುವ ರೀತಿಯಲ್ಲಿ ಯೋಗ ಪ್ರಕಾರ ನಮನ ಔಷಧಗಳನ್ನು ಕಲ್ಪಿಸಬೇಕು. ವಿರೇಚನ ಔಷಧಗಳು ಇದಕ್ಕೆ ವಿರುದ್ಧ ಲಕ್ಷಣಗಳುಳ್ಳ ವಾಗಿರಬೇಕು.