- 409 -. ಆXXI
4 ವಮನ ಪಾನಾ ನಂತರದ ಉಪಚಾರ
ತತ್ರ ಸುಕುಮಾರಂ ಕೃಶಂ ಬಾಲಂ ವೃದ್ಧಂ ಭೀರುo ವಾ ವಮನಸಾ ಧ್ಯೇಷು ವಿಕಾರೇಷು ಕ್ಷೀರದಧಿತಕ್ರಯವಾಗೂನಾಮನ್ಯತಮಮಾ ಕಂರಂ ಪಾಯಯೇತ್ | ಪೀತೌಷಧಂ ಚ ಪಾಣಿಭಿರಗ್ನಿತಪ್ತೈಃ ಪ್ರತಾ ಪ್ಯಮಾನಂ ಮುಹೂರ್ತಮುಪೇಕ್ಷೇತ | (ಸು. 547.) ಅತಿನೂತನ ಶರೀರದವನಿಗೂ,ಕೃಶನಾದವನಿಗೂ,ಬಾಲನಿಗೂ, ವೃದ್ಧನಿಗೂ, ಹೆಚ್ಚಾಗಿ ಅಂಜುವ ಸ್ವಭಾವದವನಿಗೂ, ವಮನದಿಂದ ಗುಣವಾಗತಕ್ಕ ರೋಗಗಳಲ್ಲಿ ಹಾಲು, ಮೊಸರು, ಮಜ್ಜಿಗೆ, ಗಂಜಿನೀರು, ಇವುಗಳೊಳಗೆ ಒಂದನ್ನು ಕಂರದ ವರೆಗೆ ಕುಡಿಸಬೇಕು ಔಷಧವನ್ನು ಕುಡಿದವನನ್ನು ಅಗ್ನಿಯಿಂದ ಬಿಸಿಯಾದ ಕೈಗಳಿಂದ ಒರಸಿ ಬಿಸಿಮಾಡುತ್ತಾ, ಎರಡು ಗಳಿಗೆ ಕಳೆಯಬೇಕು ಷರಾ ಕ್ಷೀಯಾದಿಗಳು ಔಷಧಸಿದ್ಧವಲ್ಲದಿದ್ದರೆ, ಅವುಗಳನ್ನು ವಮನಪಾನಕ್ಕೆ ಮುಂಚಿತವಾಗಿ ಕುಡಿಸಬೇಕಾಗಿ ಸಿ ಸಂ ವ್ಯಾ
5.ವಮನಾರಂಭದಲ್ಲಿ ಮಾಡಬೇಕಾದದ್ದು
ತಸ್ಯ ಚ ಸ್ವೇದಪ್ರಾದುರ್ಭಾವೇಣ ಶಿಧಿಲತಾಮಾಪನ್ನಂ ಸ್ವೇಭ್ಯಃ ಸ್ಥಾನೇಭ್ಯಃ ಪ್ರಚಲಿತಂ ಕುಕ್ಷಿಮನುಸೃತಂ ಜಾನೀಯಾತ್ತತಃ ಪ್ರವೃತ್ತ ಹೃಲ್ಲಾಸಂ ಜ್ಞಾತ್ವಾ ಜಾನುಮಾತ್ರಾಸನೋಪವಿಷ್ಟಮಾಪ್ತೈರ್ಲಲಾಟೇ ಪೃಷ್ಠೇ ಪಾರ್ಶ್ವಯೋಃ ಕಂರೇ ಚ ಪಾಣಿಭಃ ಸುಪರಿಗೃಹೀತಮಂಗು ಲೀಗಂಧರ್ವಹಸ್ತೋತ್ಸಲನಾಲಾನಾಮನ್ಯತಮೇನ ಕಂರಮಭಿಸ್ಸೃ ಶಂತಂ ವಾಮಯೇತ್ತಾವದ್ಯಾವತ್ಸಮ್ಯಗ್ವಾಂತಲಿಂಗಾನೀತಿ|(ಸು.547.) ಆತಗೆ ಬೆವರು ಹೊರಗೆ ಕಂಡ ಕೂಡಲೇ, (ದೋಷಗಳು) ಸಡಿಲಾಗಿ ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟು ಹೊಟ್ಟೆಗೆ ಬಂದು ಸೇರಿದವೆಂತ ತಿಳಿಯಬೇಕು. ಆಮೇಲೆ ಬಿಕ್ಕಟ್ಟು (ವಾಂತಿ ಬರುವ ಲಕ್ಷಣ) ಹುಟ್ಟಿದ್ದು ತಿಳಿದು, ಕಾಲ ಮೊಣಗಂಟಿನಷ್ಟು ಎತ್ತರವಾದ ಆಸನದ ಮೇಲೆ ರೋಗಿಯನ್ನು ಕೂತುಕೊಳ್ಳಿಸಿ, ಅವನ ಆಪ್ತರು ಅವನ ಹಣೆಯಲ್ಲಿ, ಬೆನ್ನಿನಲ್ಲಿ, ಪಕ್ಕೆಗಳಲ್ಲಿ, ಮತ್ತು ಕಂರದಲ್ಲಿ, ಕೈಗಳಿಂದ ಚೆನ್ನಾಗಿ ಹಿಡಕೊಂಡು, ರೋಗಿಯ ಬೆರಳಿನಿಂದ, ಅಧವಾ ಬಿಳೇ ಹರಳೆಲೆಯ ದಂಟಿನಿಂದ, ಅಧವಾ ನೈದಿಲೆದಂಟಿನಿಂದ, ಗಂಟಲನ್ನು ಮುಟ್ಟಿಸಿ, ಒಳ್ಳೇದಾಗಿ ವಾಂತಿಯಾದ ಲಕ್ಷಣಗಳು ಕಾಣುವವರೆಗೆ, ವಾಂತಿಮಾಡಿಸಬೇಕು.
6. ವಮನ ಸರಿಯಾದ್ದರ ಲಕ್ಷಣಗಳು
ಪಿತ್ತೇ ಕಫಸ್ಯಾನು ಸುಖಂ ಪ್ರವೃತ್ತೇ ಶುದ್ಧೇಷು ಹೃತ್ಕಂರಶಿರಸ್ಸು ಚಾಪಿ | ಲಘೌ ಚ ದೇಹೇ ಕಫಸಂಸ್ರವೇ ಚ ಸ್ದಿತೇ ಸುವಾಂತಂ ಪುರುಷಂ ವ್ಯವಸ್ಯೇತ್ || (ಸ. 548.) ಕಫದ ಹಿಂದೆ ಪಿತ್ತವು ಸುಖವಾಗಿ ಹೊರಟು ಹೋಗಿ, ಹೃದಯ, ಕಂರ ಮತ್ತು ತಲೆ ಸಹ ಶುದ್ಧವಾಗಿ, ದೇಹವು ಲಘುವಾಗಿ, ಕಫ ಹೊರಗೆ ಸ್ರವಿಸುವದು ನಿಂತಾಗ್ಗೆ, ಆ ಪುರುಷನು ಒಳ್ಳೇದಾಗಿ ವಾಂತಿ ಮಾಡಿದನೆಂದು ನಿಶ್ಚಯಿಸಬೇಕು.