ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 426 426 - XXIIನೇ ಅಧ್ಯಾಯ. ವಸ್ತಿವಿಧಿ, 1. ತತ್ರ ಸ್ನೇಹಾದೀನಾಂ ಕರ್ಮಣಾಂ ವಸ್ತಿಕರ್ಮ ಪ್ರಧಾನತಮಮಾಹು ರಾಚಾರ್ಯಾಃ | ಕನ್ಯಾದನೇಕಕರ್ಮಕರಾದ ಸೈರಿಹ ವರ್ನಾನಾ ವಿಧದ್ರವ್ಯಸಂಯೋಗಾದ್ಯೋಪಾಣಾಂ ಸಂಶೋಧನಸಂಶಮನಸಂಗ್ರಹ ವಸ್ತಿಯ ಗುಣ ಣಾನಿ ಕರೋತಿ | ಕ್ಷೀಣಶುಕ್ರಂ ವಾಜೀಕರೋತಿ ಕೃಶಂ ಬೃಂಹಯತಿ ಸ್ಕೂಲಂಕರ್ಷಯತಿ ಚಕ್ಷುಕ ಪ್ರೀಣಯತಿ ವಲೀಪಲಿತಮುಪಹಂತಿ ವಯಃ ಸ್ಥಾಪಯತಿ | ಶರೀರೋಪಚಯಂ ವರ್ಣಬಲವಾರೋಗ್ಯ ಮಾಯಷಃ ಪರಿವೃದ್ಧಿಂ ಚ ಕರೋತಿ ವಸ್ತಿಃ ಸಮ್ಯಗುಪಾಸಿತಃ | (ಸು. 558.) ಸ್ನೇಹಾದಿ ಕರ್ಮಗಳೊಳಗೆ ವಸ್ತಿಕರ್ಮವು ಅತ್ಯಂತ ಪ್ರಧಾನವೆಂತ ಆಚಾರ್ಯರು ಹೇಳುತ್ತಾರೆಯಾಕೆಂದರೆ ವಸ್ತಿಯು ಅನೇಕ ಕೆಲಸಗಳನ್ನು ಸಾಧಿಸುತ್ತದೆ. ನಾನಾ ವಿಧ ವಾದ ದ್ರವ್ಯಗಳನ್ನು ಕೂಡಿಸಿ ತಯಾರಿಸಿದ ವಸ್ತಿಯು ದೋಷಗಳ ಸಂಶೋಧನವನ್ನೂ, ಸಂಶ ಮನವನ್ನೂ, ಸಂಗ್ರಹಣವನ್ನೂ (ತಡೆದು ನಿಲ್ಲಿಸುವಿಕೆಯನ್ನೂ ), ಸಿದ್ದಿಸುತ್ತದೆ. ಸರಿಯಾಗಿ ಉಪಯೋಗಿಸಲ್ಪಟ್ಟ ವಸ್ತಿಯು ಶುಕ್ರಕೀಣನಾದವನಿಗೆ ವಾಜೀಕರಶಕ್ತಿಯನ್ನು ಕೊಡು ಇದೆ, ಕೃಶನಾದವನನ್ನು ಪುಷ್ಟಿ ಮಾಡುತ್ತದೆ, ಸ್ಫೂಲನನ್ನು ಕೃಶಮಾಡುತ್ತದೆ, ಕಣ್ಣುಗಳ ಪ್ರಸನ್ನತೆಯನ್ನುಂಟುಮಾಡುತ್ತದೆ, ನೆರಿನರೆಗಳನ್ನು ನಾಶಮಾಡುತ್ತದೆ, ವಯಸ್ಸನ್ನು ನಿಲ್ಲಿಸು ಇದೆ (ಮುದಿತನವನ್ನು ದೂರ ಮಾಡುತ್ತದೆ), ಮತ್ತು ಮೈಕೂಡುವಿಕೆಯನ್ನೂ, ವರ್ಣವನ್ನೂ, ಬಲವನ್ನೂ, ಆರೋಗ್ಯವನ್ನೂ, ಆಯುಸ್ಸಿನ ವೃದ್ಧಿಯನ್ನೂ, ಸಂಪಾದಿಸುತ್ತದೆ. 2. ತಧಾ ಜ್ವರಾತಿಸಾರ-ತಿಮಿರ-ಪ್ರತಿಶ್ಯಾಯ-ಶಿರೋರೋಗಾಧಿಮಂಧಾರ್ದಿ ತಾಕ್ಷೇಪಕ - ಪಕ್ಷಘಾತೈಕಾಂಗಸರ್ವಾಂಗರೋಗಾಧ್ಯಾನೋದರ - ಶರ್ಕ ರಾ- ಶೂಲ- ವೃದ್ದುಪದಂಶಾನಾಹ-ಮೂತ್ರ ಕೃಕ್ರ-ಗುಲ್ಮ ವಾತಶೋಣಿ ವಸ್ತಿ ಪ್ರಶಸ್ತಿ ವ್ಯಾಧಿಗಳು ತ-ವಾತಮೂತ್ರ- ಪುರೀಷೋದಾವರ್ತ - ಶುಕ್ರಾರ್ತನಸ್ತನ್ಯನಾಶ - ಹೃದ್ದ ನುಮನ್ಯಾಗ್ರಹಾರ್ಶೋತ್ಮರೀ - ಮೂಢಗರ್ಭಪ್ರಕೃತಿಷು ಚಾತ್ಯರ್ಧ ಮುಪಯುಜ್ಯತೇ ! (ಸು. 558-59.) ಆದ್ದರಿಂದ ಜ್ವರ, ಅತಿಸಾರ, ತಿಮಿರ, ನೆಗಡಿ, ಶಿರೋರೋಗ, ಅಧಿಮಂಧ, ಅರ್ದಿತ, ಆಕ್ಷೇಪಕ, ಪಕ್ಷಘಾತ, ಏಕಾಂಗರೋಗ, ಸರ್ವಾಂಗರೋಗ, ಆಧ್ಯಾನ, ಉದರ, ಶರ್ಕರಾ, ಶೂಲ, ವೃಷಣವೃದ್ಧಿ, ಉಪದಂಶ, ಆನಾಹ, ಮೂತ್ರಕೃಛ, ಗುಲ್ಮ, ವಾತಶೋಣಿತ, ವಾತ ಮೂತ್ರ, ವಾತಪುರೀಷ, ಉದಾವರ್ತ, ಶುಕ್ರನಾಶ, ಆರ್ತನನಾಶ, ಸನ್ಯನಾಶ, ಹೃದ್ಧಹ, ಹನುಗ್ರಹ, ಮನ್ಯಾಗ್ರಹ, ಅರ್ಶಸ್ಸು, ಅಸ್ಮರೀ, ಮೂಢಗರ್ಭ, ಮುಂತಾದವುಗಳಲ್ಲಿ ವಸ್ತಿಯು ಬಹಳವಾಗಿ ಉಪಯೋಗಿಸಲ್ಪಡುತ್ತದೆ.