- 427 ಅ, XXII 3. ವಸ್ತಿರ್ವಾತೇ ಚ ಪಿತ್ತೇ ಚ ಕಫೇ ರಕ್ತ ಚ ಶಸ್ಯತೇ | ಎಲ್ಲಾ ದೋಷಗಳ ಸಂಸರ್ಗೇ ಸನ್ನಿಪಾತೇ ಚ ವರೇವ ಹಿತಃ ಸದಾ || (ಸು. 559, ಗೂ ವಸ್ತಿಯು ಹಿತ ವಸ್ತಿಯು ವಾತದಲ್ಲಿಯೂ, ಪಿತ್ತದಲ್ಲಿ ಯೂ, ಕಫದಲ್ಲಿಯೂ, ರಕ್ತದೋಷದಲ್ಲಿಯೂ, ಪ್ರಶಸ್ತವಾಗಿರುತ್ತದೆ, ಮತ್ತು ದೋಷಗಳ ಸಂಸರ್ಗದಲ್ಲಿಯೂ, ಸನ್ನಿಪಾತದಲ್ಲಿಯೂ ಸದಾ ವಸ್ತಿಯೇ ಹಿತವಾದದ್ದು. 4. ನೇತ್ರಂ ಕಾರ್ಯ೦ ಸುವರ್ಣಾದಿಧಾತುರ್ಭಿಕ್ಷವೇಣುಭಿಃ | ನಿರ್ದಂತೈರ್ವಿಪಾಣಾಗ್ರೆರ್ಮಣಿಭಿರ್ವಾ ವಿಧೀಯತೇ || ಏಕವರ್ಷಾತ್ತು ಷಡರ್ಷ ಯಾವತ್ಮಾನಂ ಷಡಂಗುಲಂ | ತತೋ ದ್ವಾದಶಕಂ ಯಾವನ್ನಾನಂ ಸ್ವಾದಷ್ಟಸಮ್ಮಿತಂ || ತತಃ ಪರಂ ದ್ವಾದಶಭಿರಂಗುಲೈರ್ನೇತ್ರದೀರ್ಘತಾ | ವಸ್ತಿಯ ನಳಿಗೆ ಮುದ್ಧ ಛಿದ್ರಂ ಕಲಾಯಾಛಂ ಛಿದ್ರಂ ಕೂಲಾಸ್ಥಿರಂಧ್ರಕಂ | ಯಧಾಸಂಖ್ಯಂ ಭವೇನ್ನೇತ್ರಂ ಶಕ್ಟಂ ಗೋಪ್ರಚ್ಛಸನ್ನಿಭಂ || ಆತುರಾಂಗುಷ್ಠ ಮಾನೇನ ಮೂಲೇ ಸ್ಫೂ ಒ೦ ವಿಧೀಯತೇ | ಕನಿಪ್ಪಿ ಕಾಪರೀಣಾಹಮಿ ಚ ಗುಟಿಕಾಮುಖಂ | ತನ್ಮೂಲೇ ಕರ್ಣಿಕೇ ದ್ವೇ ಚ ಕಾರ್ಯೇ ಭಾಗಾಚ್ಚ ತುರ್ಯಕಾತ್ ! - (ಶಾ 149.) ಸುವರ್ಣಾದಿ ಲೋಹಗಳಿಂದ, ಮರದ ತಿರುಳಿನಿಂದ, ಓಟೆಗಳಿಂದ, ಬಿದುರುಗಳಿಂದ, ದಂತ ಗಳಿಂದ, ಕೊಂಬುಗಳ ತುದಿಯಿಂದ, ಅಧವಾ (ಸ್ಪಟಿಕಾದಿ) ಮಣಿಗಳಿಂದ ಒಂದು ನಳಿಗೆ ಯನ್ನು ಮಾಡಬೇಕು ಅದು ಒಂದು ವರ್ಷದಿಂದ ಆರು ವರ್ಷದ ವರೆಗಿನ ಪ್ರಾಯದವನಿ ಗಾದರೆ ಆರು ಅಂಗುಲ, ಅದರ ಮೇಲೆ 12 ವರ್ಷಗಳ ವರೆಗೆ ಎಂಟು ಅಂಗುಲ, ಅದಕ್ಕೂ ದೊಡ್ಡವರಿಗೆ 12 ಅಂಗುಲ, ಉದ್ದವಿರಬೇಕು ಅದರ ತೂತು ಹೆಸರುಗಾತ್ರ, ಪುಟಾಣಿ ಕಡಲೆ ಗಾತ್ರ, ಅಧವಾ ಬೊಗರಿ ಬೀಜದ ಗಾತ್ರ, ಆಯಾ ಪ್ರಾಯ ವರ್ಗಕ್ಕೆ ಸರಿಯಾಗಿ ಇರಬೇಕು; ಮತ್ತು ಆ ನಳಿಗೆಯು ನುಣುಪಾಗಿ ಗೋವಿನ ಬಾಲದ ಆಕಾರದಲ್ಲಿರಬೇಕು ಅದು ಬುಡ ದಲ್ಲಿ ರೋಗಿಯ ಹೆಬ್ಬೆಟ್ಟಿನಷ್ಟು ಮತ್ತು ತುದಿಯಲ್ಲಿ ಕಿರೀಬೆರಳಿನಷ್ಟು ತೋರವಾಗಿದ್ದು , ಮುಖದಲ್ಲಿ ಗುಳಿಗೆಯಂತೆ ಗೋಲಾಕಾರವಾಗಿರಬೇಕು. ಅದರ ಬುಡದಲ್ಲಿ ಎರಡು, ಮತ್ತು ತುದಿಯಿಂದ ನಾಲ್ಕನೇ ಒಂದು ಅಂಶದ ದೂರದಲ್ಲಿ ಒಂದು, ಹೀಗೆ ಮೂರು ಕಿವಿಗಳಿರಬೇಕು. ಷರಾ ಬುಡದ ಎರಡು ಕಿವಿಗಳು ವಸ್ತಿಯನ್ನು ಕಟ್ಟುವ ಉದ್ದಿತ್ಯ, ಮೂರನೇದು ಆಸನದೊಳಗೆ ಹೋಗತಕ್ಕ ನಳಿಗೆಯ ಅಂಶವನ್ನು ತೋರಿಸುವ ಉದ್ದಿಶ್ಯ ಎಂತ ತಿಳಿಯಬೇಕು” ಸುಶ್ರುತನು ನಳಿಗೆಗೆ ಲೋಹಗಳೊಳಗೆ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, wತ್ತಾಳೆ, ಇವುಗಳನ್ನು ಹೇಳಿದ್ದಾನೆ, ಮತ್ತು ಮೇಲೆ ಹೇಳಿದ ನಳಿಗೆಯ ತೋರದ ಪ್ರಮಾಣ ವನ್ನು 25 ವರ್ಷ ಪ್ರಾಯದ ಮೇಲಿನವರಿಗೆ ಮಾತ್ರ ವಿಧಿಸಿದ್ದಾನೆ ಮುಂದಿನ ಸಂ 5 ನೋಡಿರಿ 5. ಪಂಚವಿಂಶತೇರೂರ್ಧ್ವಂ ದ್ವಾದಶಾಂಗುಲಂ ಮೂಲೇ೦ಗುಷ್ಪದರಪರಿ ಸಾಹಮಿ ಕನಿಷ್ಠ ಕೋದರಪರಿಣಾಹಮಿ ತಂಗುಲಸನ್ನಿವಿಷ್ಟಕ 54*
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.