ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXII – 428 - ರ್ಣಕಂ ಗೃಧ್ರಸತ್ರನಾಡೀತುಲ್ಯಪ್ರವೇಶಂ ಕೋಲಾಸ್ಥಿ ಮಾತ್ರಂ ಛಿದ್ರಂ ಭಿನ್ನ ನಳಿಗೆಯ ಪ್ರಮಾ

  • ಕಲಾಯಾಮಾತ್ರಂ ಛಿದ್ರಮಿತ್ಯೇಕೇ | ಸರ್ವಾಣಿ ಮೂಲೇ ವಸ್ತಿನಿಬಂಧ ಣದ ವ್ಯವಸ್ಥೆ

ನಾರ್ಧ೦ ದ್ವಿಕರ್ಣಿಕಾನಿ | (ಸು. 559.) | 25 ವರ್ಷ ಪ್ರಾಯದ ಮೇಲೆ ನಳಿಗೆಯು ಹನ್ನೆರಡಂಗುಲ ಉದ್ದ, ಮೂಲದಲ್ಲಿ ಹೆಬ್ಬೆ ಟಿನಷ್ಟು ತೋರ, ತುದಿಯಲ್ಲಿ ಕಿರಿಬೆರಳಿನಷ್ಟು ತೋರ, ಇರಬೇಕು. ನಳಿಗೆಯ ತುದಿಯಿಂದ ಮೂರು ಅಂಗುಲ ದೂರದಲ್ಲಿ ಒಂದು ಕಿವಿ, ಹದ್ದಿನ ರೆಕ್ಕೆಯ ಗರಿಯಷ್ಟು ಪ್ರವೇಶ (ಅಂದರೆ ತುದಿಯ ರಂಧ್ರ), ಬೊಗರಿಬೀಜದಷ್ಟು, ಕೆಲವರ ಪಕ್ಷದಲ್ಲಿ ನೆನೆದ ಬಟಾಣಿಕಡಲೆಯಷ್ಟು, ಒಳಗಿನ ಟೊಳ್ಳು ಸಹ ಇರತಕ್ಕದ್ದು. ಎಲ್ಲಾ ನಳಿಗೆಗಳಿಗೂ ಬುಡದಲ್ಲಿ ವಸ್ತಿಯನ್ನು ಕಟ್ಟುವ ದಕ್ಕೋಸ್ಕರ ಎರಡು ಕಿವಿಗಳಿರಬೇಕು. ಷರಾ ಸುಶ್ರುತದಲ್ಲಿ ಕಡಿಮೆ ಪ್ರಾಯದವರಿಗೆ ಕಡಿಮೆ ಪ್ರಮಾಣಗಳು ಹೇಳಲ್ಪಟ್ಟಿವೆ ಪ್ರಾಯದಲ್ಲಿ ಒಂದು ವರ್ಷ, 8 ವರ್ಷ 16 ವರ್ಷ ಎಂಬ ಮೂರು ವರ್ಗ ಮಾಡಿ, ಆ ವರ್ಗಗಳಿಗೆ ಕ್ರಮವಾಗಿ 6, 8, 10 ಅಂಗುಲ ಉದ್ದ, ಕಿರಿಬೆರಳಷ್ಟು, ಅದರ ಒತ್ತಿನ ಉಂಗುರದ ಬೆರಳಿನಷ್ಟು, ಮಧ್ಯದ ಬೆರಳಿನಷ್ಟು ತೂರ, 12 ಅಂಗುಲ, 2 ಅಂಗುಲ, 28 ಅಂಗುಲದಲ್ಲಿ ತುದಿಯ ಕಿವಿ, ಕಂಕಪಕ್ಷಿ (ಸಣ್ಣ ಹದ್ದು), ಶೇನ ಪಕ್ಷಿ (ಗಿಡಗ) ಮತ್ತು ನವಿಲು, ಇವುಗಳ ಗರಿಯಷ್ಟು ಬುಡದ ಟೊಳ್ಳು ಮತ್ತು ಹೆಸರು, ಉದ್ದು, ಪುಟಾಣಿ ಕಡಲೆಯಷ್ಟು ತುದಿಯ ರಂಧ, ಹೇಳಲ್ಪಟ್ಟಿವೆ 16 ವರ್ಷದ ಮೇಲೆ 25 ವರ್ಷದ ಒಳಗಿನವರಿಗೆ ಪ್ರಾಯ, ಬಲ, ಮತ್ತು ಶರೀರ ನೋಡಿಕೊಂಡು ನಳಿಗೆಯ ಮತ್ತು ವಸ್ತಿಯ ಪ್ರಮಾಣವನ್ನೇರಿಸಿಕೊಳ್ಳಬೇಕಾಗಿಯೂ ಎಪ್ಪತ್ತು ವರ್ಷ ಪ್ರಾಯದ ಮೇಲಿನವರಿಗೆ 16 ವರ್ಷ ಪ್ರಾಯದವರಿಗೆ ಹೇಳಿದ ನಳಿಗೆಯ ಮತ್ತು ದ್ರವ್ಯದ ಪ್ರಮಾಣಗಳನ್ನೇ ಯೋಚಿಸಬೇಕಾಗಿ ಸಹ ಹೇಳಲ್ಪಟ್ಟಿದೆ (ಪು 559 ) 6. ಮೃಗಾಜಶೂಕರಗವಾಂ ಮಹಿಷಸ್ಯಾಪಿ ವಾ ಭವೇತ್ | ವಸ್ತಿ ಚೀಲ, ಮೂತ್ರಕೋಶಸ್ಯ ವಸ್ತಿಸ್ತು ತದಲಾಭೇ ಚ ಚರ್ಮಜಃ || (ಶಾ: 149.) ವಸ್ತಿಯು (ಚೀಲವು) ಜಿಂಕೆಯ, ಆಡಿನ, ಹಂದಿಯ, ಗೋವಿನ, ಅಧವಾ ಕೋಣನ, ಮೂತ್ರಕೋಶದ್ದಾಗಿರಬೇಕು; ಅದು ಸಿಕ್ಕದಾಗ್ಗೆ ಚರ್ಮದ್ದಾಗಬಹುದು. ದೃಢಸ್ತನುರ್ನಷ್ಟ ಶಿರೋವಿಗಂಧ ಕಷಾಯರಕ್ತ ಸುಮೃದುಃ ಸುಶುಪ್ತಃ | ನೃಣಾಂ ವಯೋ ವೀಕ್ಷ ಯಧಾನುರೂಪಂ ನೇತ್ರೇಷು ಯೋಜ್ಯಸ್ತು ಸುಬದ್ಧ ಸೂತ್ರ || ವಸ್ತೆರಭಾವೇ ಪ್ಲವಜೋ ಗಲೋ ವಾ ಸ್ವಾದಂಕಪಾದಃ ಸುಘನಃ ಪಟೋ ವಾ || (ಚ. 876.) ವಸ್ತಿಯು ಬಲವುಳ್ಳದ್ದಾಗಿಯೂ, ತೆಳ್ಳಗಾಗಿಯೂ, ಬಹು ಮೃದುವಾಗಿಯೂ, ಬಹು ಶುದ್ಧವಾಗಿಯೂ, ಕಲೆ ಮತ್ತು ದುರ್ಗಂಧ ಇಲ್ಲದ್ದಾಗಿಯೂ, ಕಷಾಯದ ಕೆಂಪುವರ್ಣವುಳ್ಳ ದ್ದಾಗಿಯೂ, ಇರಬೇಕು; ಮತ್ತು ಜನರ ಪ್ರಾಯ ನೋಡಿಕೊಂಡು, ಅದಕ್ಕೆ ತಕ್ಕ ಪ್ರಮಾ ಣದ ನಳಿಗೆಗಳಿಗೆ ಅದನ್ನು ಸೂತ್ರಗಳಿಂದ ಗಟ್ಟಿಯಾಗಿ ಬಿಗಿಯಬೇಕು. ಮೂತ್ರಕೋಶವು ದೊರೆಯದ ಸಂಗತಿಯಲ್ಲಿ, ಕಪ್ಪೆಯ ಕುತ್ತಿಗೆಯನ್ನು, ಅಥವಾ ಅದರ ಶರೀರ ಮತ್ತು ಪಾದ ವನ್ನು, ಅಧವಾ ಬಹಳ ದಪ್ಪದ ವಸ್ತ್ರದ ತುಂಡನ್ನು, ಉಪಯೋಗಿಸಬಹುದು.