- 431 - ಆ XXII. ಯಾವಾಗಲೂ ಮಾತ್ರಾವಸ್ತಿಯು ಯುಕ್ತವಾದದ್ದು. ಸ್ನೇಹಪಾನಕ್ಕೆ ಉಕ್ತವಾದ ಪ್ರಮಾಣ ಗಳೊಳಗೆ ಕಡಿಮೆಯಾದ ಪ್ರಮಾಣಕ್ಕೆ ತುಲ್ಯವಾಗಿ ಸ್ನೇಹವನ್ನು ಉಪಯೋಗಿಸುವ ಅನು ವಾಸನಕ್ಕೆ ಮಾತ್ರಾವಸ್ತಿ ಎನ್ನುವದಾಗಿರುತ್ತದೆ. ಅದು ಆಹಾರಚೇಷ್ಟೆಗಳಲ್ಲಿ ಇಷ್ಟ ಕಂಡಂತೆ ನಡಕೊಳ್ಳುವವನಿಗೆ ಸರ್ವಕಾಲದಲ್ಲಿಯೂ ದೋಷಕರವಲ್ಲದ್ದಾಗಿರುತ್ತದೆ. ಈ ಸ್ನೇಹ ಮಾತ್ರಾಕ್ರಮವು ಸುಖವಾಗಿ ಉಪಯೋಗಿಸಬಹುದಾದದ್ದು, ಬಲಕರ, ಸುಖಕರ, ಮಲ ವನ್ನು ಸಡಿಲಿಸತಕ್ಕಂಧಾದ್ದು, ಪುಷ್ಟಿಕರ ಮತ್ತು ವಾತರೋಗಹರ. ಷರಾ ಈ ಮಾತ್ರಾವಸ್ತಿಯು ಬಾಲರಿಗೆ, ವೃದ್ಧರಿಗೆ, ಅಲ್ಪ ವಾದ ಅಗ್ನಿ ಬಲವುಳ್ಳವರಿಗೆ, ಅರಸರಿಗೆ ಮತ್ತು ಸುಖ ಜೀವಿಗಳಿಗೆ ಸಹ ಶೀಲಮಾಡಬೇಕಾದ್ದೆಂತ ವಾ (ಪು 93 ) ಗುಣ 12. ನಿರೂಹಃ ಶೋಧನೋ ಲೇಖೀ ಸ್ನೇಹನೋ ಬೃಂಹಣೋ ಮತಃ | ನಿರೂಹಶೋಧಿತಾನ್ಮಾರ್ಗಾನ್ ಸಮ್ಯರ್ಹೋನುಗಚ್ಛತಿ || ಸಿರೂಹವಸ್ತಿಯ ಅಪೇತಸರ್ವದೋಷಾಸು ನಾಡೀಮಿವ ವಹಜಲಂ | ಸರ್ವದೋಷಹರಶ್ಚಾಸೌ ಶರೀರಸ್ಯ ಚ ಜೀವನಃ || ತಸ್ಮಾದ್ವಿಶುದ್ದ ದೇಹಸ್ಯ ಸ್ನೇಹವಸ್ತಿರ್ವಿಧೀಯತೇ | (ಸು. 560-61.) ನಿರೂಹವು ಶೋಧನ ಮತ್ತು ಲೇಖನಗುಣಗಳುಳ್ಳದ್ದು. ಸ್ನೇಹನವು (ಅನುವಾಸನ ವಸ್ತಿಯು) ಬೃಂಹಣ. ಸರ್ವ ಕಲ್ಮಷವನ್ನು ತೆಗೆದುಬಿಟ್ಟ ನಳಿಗೆಗಳಲ್ಲಿ ನೀರು ಹ್ಯಾಗೆ ಸರಿ ಯಾಗಿ ಸಂಚರಿಸುತ್ತದೋ, ಹಾಗೆ ನಿರೂಹದಿಂದ ಶುದ್ದ ಮಾಡಲ್ಪಟ್ಟ ಮಾರ್ಗಗಳಲ್ಲಿ ಸ್ನೇಹವು ಚೆನ್ನಾಗಿ ಅನುಸರಿಸುತ್ತದೆ ಮತ್ತು ಅದು ಶರೀರದ ಸರ್ವ ದೋಷಗಳನ್ನು ಪರಿಹರಿಸಿ ಬದು ಕಿಸುವಂಥಾದ್ದು, ಆದ್ದರಿಂದ ದೇಹ ಶುದ್ದಿಯಾದ ಮೇಲೆ ಸ್ನೇಹವಸ್ತಿಯು ಕೊಡಲ್ಪಡುತ್ತದೆ. ಷರಾ ಸಿದ್ಧವಲ್ಲದ ದೇಹಕ್ಕೆ ಅನುವಾಸನವೇ ಹಿತ ಮತ್ತು ಮೂರು, ನಾಲ್ಕು ಸರ್ತಿ ಅನುವಾಸನ ಮಾಡಿ ದೇಹವು ಸಿಗೆ ವಾದ ಮೇಲೆ, ಮಾರ್ಗಗಳ ಸುದ್ದಿಗಾಗಿ, ಶೋಧನರೂಪವಾದ ಸಿರಹವನ್ನು ಕೊಡತಕ್ಕದ್ದು ಎಂತ ನಾ (ಪು 90 ) 13. ಪಕ್ಷಾದ್ವಿರೇಕೋ ವಾಂತಸ್ಯ ತತಶ್ಚಾಪಿ ನಿರೂಹಣಂ | ವಮನ ವಿರೇಚನ ಸದ್ಯೋನಿರೂರ್ಥೋನುವಾಸ್ಯ ಸಪ್ತರಾತ್ರಾದ್ವಿರೇಚಿತಃ || ವಸ್ತಿಗಳಿಗೆ ಕಾ cಾಂತರ ನಿಯಮ (ಸು. 567.) ವಾಂತಿಮಾಡಿಸಿಕೊಂಡು ಒಂದು ಪಕ್ಷದಲ್ಲಿ ವಿರೇಚನ ಯುಕ್ತ; ಅದರನಂತರ ನಿರೂಹ ವಸ್ತಿ; ನಿರೂಹದ ಮೇಲೆ ಕೂಡಲೇ ಮತ್ತು ವಿರೇಚನ ಮಾಡಿಸಿಕೊಂಡನಂತರ ಏಳು ರಾತ್ರಿ ಗಳಲ್ಲಿ ಅನುವಾಸನ ಮಾಡಿಸಿಕೊಳ್ಳಬಹುದು. ದೈಹೇ ತ್ರಹೇ ಚಾಹ್ಮಧ ಪಂಚಮೇ ಚ ದದ್ಯಾನ್ನಿರೂಹಾದನುವಾಸನಂ ಚ | (ಚಿ. ಸಾ. ಸಂ. 942.) ನಿರೂಹ ಸೇವಿಸಿದ 3ನೇ, 4ನೇ ಮತ್ತು 5ನೇ ದಿವಸಗಳಲ್ಲಿ ಅನುವಾಸನ ಸಹ ಕೊಡಬೇಕು. 14. ಸ್ನೇಹವಸ್ತ್ರವಿಧಾನೇನ ಬುಧಃ ಕುರ್ಯಾಸ್ನರೂಹಣಂ | ನಿರೂಹವಸ್ತಿ ವಿಧಾನ, (ಶಾ. 152) 5 2
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.