ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXII - - 432 ಸ್ನೇಹವಸ್ತಿ (ಅನುವಾಸನ) ಕೊಡುವ ಕ್ರಮದಲ್ಲಿ ಯೇ ನಿರೂಹವಸ್ತಿಯನ್ನು ಬುದ್ದಿ ವಂತನು ಕೊಡತಕ್ಕದ್ದಾಗಿರುತ್ತದೆ. 15. ಪಕ್ವಾಶಯೇ ತಧಾ ಶ್ರೇಣ್ಯಾಂ ನಾಭ್ಯಧಾಶ್ಚ ಸರ್ವತಃ || ಸಮ್ಯಕ್ಷಣಿಹಿತೋ ವಃ ಸ್ಥಾ ನೇತೇಷು ತಿಷ್ಠತಿ || ವಸ್ತಿಯು ಮಾ ಡುವ ಕೆಲಸ ಪಕ್ವಾಶಯಾಸ್ತ್ರವೀರ್ಯೆ೦ ಸ್ವದೇಹಮುಪಸರ್ಪತಿ || ವೃಕ್ಷಮೂಲೇ ನಿಷಿಕ್ತಾನಾಮಪಾಂ ವೀರ್ಯಮಿವ ದ್ರುಮಂ || (ಸು. 561) ಸರಿಯಾಗಿ ಕೊಡಲ್ಪಟ್ಟ ವಸ್ತಿಯು ಪಕ್ವಾಶಯದಲ್ಲಿಯೂ, ಶ್ರೇಣಿಯಲ್ಲಿಯೂ, ನಾಭಿಯ ಕೆಳಗಿನ ಎಲ್ಲಾ ಎಡೆಗಳಲ್ಲಿಯೂ ನಿಂತು ಕೆಲಸ ಮಾಡುತ್ತದೆ. ಆ ಪಕ್ವಾಶಯದಿಂದ ವಸ್ತಿಯ ವೀರ್ಯವು, ಮರದ ಬುಡದಲ್ಲಿ ಹೊಯಿದ ನೀರಿನ ವೀರ್ಯವು ಮರದೊಳಗೆ ಸೇರುವ ಹಾಗೆ, ಆತನ ದೇಹವನ್ನೆಲ್ಲಾ ವ್ಯಾಪಿಸುತ್ತದೆ. ಸ ಚಾಪಿ ಸಹಸಾ ವಸ್ತಿ ಕೇವಲಃ ಸಮಲೋSಪಿ ವಾ | ಪ್ರತ್ಯೇತಿ ತನಿಲೈರ್ವೀಯ್ರಮಪಾನಾದ್ಯೆರ್ವಿನೀಯತೇ !! ವೀರ್ಯೇಣ ವಸ್ತಿರಾದ ದೋಷಾನಾಪಾದಮಸ್ತಕಾತ್ || ಪಕ್ವಾಶಯಖೇಟೆಂಬರಗೋ ಭೂಮೇರರ್ಕೋ ರಸಾನಿವ || (ಸು. 561.) ಆ ವಸ್ತಿಯು ಕೇವಲವಾಗಿ, ಅಧವಾ ಮಲದಿಂದ ಕೂಡಿಕೊಂಡು, ಬೇಗನೇ ಹೊರಗೆ ಹಿಂದೆ ಬಂದಾಗ, ಅಪಾನಾದಿ ವಾಯುಗಳು ಅದರ ವೀರ್ಯವನ್ನು ಶರೀರದ ಎಲ್ಲಾ ಭಾಗಗಳಿಗೂ ಒಯ್ಯುತ್ತವೆ. ಮತ್ತು ಆಕಾಶದಲ್ಲಿ ನಿಂತಿರುವ ಸೂರ್ಯನು ಭೂಮಿಯ ರಸ ಗಳನ್ನು ಹೀರಿದ ಹಾಗೆ, ಪಕ್ಕಾಶಯದಲ್ಲಿ ನಿಂತ ಆ ವಸ್ತಿಯು ತನ್ನ ವೀರ್ಯದಿಂದ ಮಸ್ತಕ ದಿಂದ ಪಾದದ ವರೆಗಿನ ದೋಷಗಳನ್ನು ಎಳೆದು ತೆಗೆದುಕೊಳ್ಳುತ್ತದೆ. 16, ಯಧಾವಯೋ ನಿರೂಹಾಣಾಂ ಯಾ ಮಾತ್ರಾಃ ಪರಿಕೀರ್ತಿತಾಃ | ನಿರೂಹಸ್ನೇಹವಸ್ತಿ ಪಾದಾವಕೃಪ್ಲಾಸ್ತಾಃ ಕಾರ್ಯಾಃ ಸ್ನೇಹವಸ್ತಿಷು ದೇಹಿನಾಂ | ಗಳಲ್ಲಿ ಮಾತ್ರಾ ಭೇದ (ಸು. 567.) ನಿರೂಹಗಳಿಗೆ ಮನುಷ್ಯನ ಪ್ರಾಯದ ಮೇಲೆ ಯಾವ ಪ್ರಮಾಣಗಳು ಹೇಳಲ್ಪಟ್ಟವೋ, ಅವುಗಳನ್ನು ಸ್ನೇಹವಸ್ತಿಗಳಲ್ಲಿ ಕಾಲಂಶಕ್ಕೆ ತಗ್ಗಿಸಿ ಉಪಯೋಗಿಸತಕ್ಕದ್ದು. 17. ಯೂಷಕ್ಷೀರರಸೈಸ್ತಸ್ಮಾದ್ಯಧಾವ್ಯಾಧಿಮವೇಕ್ಷ ವಾ || ಅನುವಾಸನಕ್ಕೆ ಯಥೋಚಿತಾತ್ಪಾದಹೀನಂ ಭೋಜಯಿತ್ವಾನುವಾಸಯೇತ್ || ಪೂರ್ವ ಭೂ (ಸು. 571.) ಅನುವಾಸನಕ್ಕೆ ಮೊದಲು ರೋಗಿಯನ್ನು ಸಾರಿನಿಂದ, ಹಾಲಿನಿಂದ, ಮಾಂಸರಸದಿಂದ, ಅಧವಾ ವ್ಯಾಧಿಗೆ ಯುಕ್ತವಾದ ಬೇರೆ ವಿಧದಿಂದ, ಉಣ್ಣಿಸುವಲ್ಲಿ ಉಚಿತಪ್ರಮಾಣಕ್ಕೆ ಕಾಲಂಶ ಕಡಿಮೆ ಮಾಡಬೇಕು. ಷರಾ ಕಫಕ್ಕೆ ಹೆಸರಿನ ಸಾರು, ಪಿತ್ತಕ್ಕೆ ಹಾಲು ಮತ್ತು ವಾತಕ್ಕೆ ಮಾ೦ಸರಸ ಯುಕ್ತ (ನಿ ಸಂ, ವ್ಯಾ) ಜನನಿಯಮ