ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-

                             -433-
                                                       ಅ XXII             
                                                       
                                                          
              ನ ವಾಭುಕ್ತವತಃ ಸ್ನೇಹಃ ಪ್ರಣಿಧೇಯಃ ಕಧಂಚನ |
              ಶುದ್ಧತ್ವಾಚ್ಛೂನ್ಯಕೋಷ್ಠಸ್ಯ  ಸ್ನೇಹ ಊರ್ಧ್ವಮಧೋತ್ಪತೇತ್ || (ಸು. 571.) 
      ಖಾಲಿ ಹೊಟ್ಟೆಯು ಶುದ್ಧವಾಗಿರುವ ದೆಸೆಯಿಂದ ಸ್ನೇಹವು ಮೇಲಕ್ಕೆ ಏರುವದಾದ್ದ
  ರಿಂದ, ಉಣ್ಣದೆ ಹಸಿದಿರುವವನಿಗೆ ಅನುವಾಸನವನ್ನು ಹ್ಯಾಗೂ ಕೊಡಬಾರದು.
 18.           ದತ್ವಾದೌ ಸೈಂಧವಸ್ಯಾಕ್ಷಂ ಮಧುನಃ ಪ್ರಸೃತಿದ್ವಯಂ |
               ವಿನಿರ್ಮಧ್ಯ ತತೋ ದದ್ಯಾತ್ ಸ್ನೇಹಸ್ಯ ಪ್ರಸೃತಿತ್ರಯಂ ||
               ಎಕೀಭೂತೇ ತತಃ ಸ್ನೇಹೇ ಕಲ್ಕಸ್ಯ ಪ್ರಸೃತಿಂ ಕ್ಷಿಪೇತ್ |
               ಸಮೂರ್ಚ್ಛಿತೇ ಕಷಾಯಂ ತು ಚತುಃಪ್ರಸೃತಿಸಮ್ಮಿತಂ ||
ನಿರೂಹೌಷಧ      ವಿತರೇಚ್ಚ ತದಾವಾಪಮಂತೇ ದ್ವಿಪ್ರಸೃತೋನ್ಮಿತಂ | 

ವನ್ನು ಸಿದ್ದ ಪಡಿ ಏವಂ ಪ್ರಕಲ್ಪಿತೋ ವಸ್ತಿರ್ದ್ವಾದಶಪ್ರಸೃತೋ ಭವೇತ್ ||

ಸುವ ಕ್ರಮ       ಜೇಷ್ಠಾಯಾಃ ಖಲು ಮಾತ್ರಾಯಾಃ ಪ್ರಮಾಣಮಿದಮಿರಿತಂ |
             ಅಫಹ್ರಾಸೇ ಭಿಷಕ್ಕುರ್ಯಾತ್ ತದ್ವತ್ ಪ್ರಸೃತಿಹಾಪನಂ ||
             ಯಧಾವಯೋ ನಿರೂಹಾಣಾಂ ಕಲ್ಪನೇಯಮುದಾಹೃತಾ |
             ಸೈಂಧವಾದಿದ್ರವಾಂತಾನಾಂ ಸಿದ್ದಿಕಾಮೈರ್ಭಿಷಗ್ಯರೈಃ || (ಸು, 581.)
 ಸೈಂಧವಲವಣ ಕಾಲು ಪಲ, ಜೇನು ನಾಲ್ಕು ಪಲ, ಸ್ನೇಹ ಆರು ಪಲ, ಕಲ್ಕ ಎರಡು 

ಪಲ, ಕಷಾಯ ಎಂಟು ಪಲ, ಸ್ವರಸ, ಹಾಲು, ಹುಳಿಗಂಜಿನೀರು, ಮೂತ್ರಗಳ ಆವಾಸ ನಾಲ್ಕು ಪಲ, ಹೀಗೆ ಸೈಂಧವಲವಣ ಬಿಟ್ಟು ಇಪ್ಪತ್ತನಾಲ್ಕು ಪಲ (ಹನ್ನೆರಡು ಪ್ರಸೃತಿ). ಇದು ದೊಡ್ಡವರಿಗೆ ಯುಕ್ತವಾದ ನಿರೂಹದ ಪ್ರಮಾಣ; ಕಡಿಮೆ ಪ್ರಾಯದವರಿಗೆ ಹಾಗೆಯೇ ಪ್ರಾಯಕ್ಕೆ ತಕ್ಕವಾಗಿ ವೈದ್ಯನು ಪ್ರಸೃತಿಯಲ್ಲಿ ಕಡಿಮೆಮಾಡಿಕೊಂಡು ಉಪಯೋಗಿಸಬೇಕು. ಸೈಂಧವ ಮೊದಲುಗೊಂಡು ದ್ರವಾಂತ ವರೆಗಿನ ಈ ನಿರೂಪಕಲ್ಪನವು ಉದಾಹರಣಾರ್ಧ ವಾಗಿ ಸಿದ್ದಿಯನ್ನು ಬಯಸುವ ಪಂಡಿತೋತ್ತಮರಿಂದ ಹೇಳಲ್ಪಟ್ಟಿದೆ. ಆರಂಭದಲ್ಲಿ ಸೈಂಧವ ಲವಣವನ್ನೂ ಜೇನನ್ನೂ ಒಂದು ಪಾತ್ರೆಯಲ್ಲಿ ಹಾಕಿ, ಅಂಗೈಯಿಂದ ಸ್ನೇಹವನ್ನು ಸ್ವಲ್ಪ ಸ್ವಲ್ಪ ವಾಗಿ ಕೂಡಿಸಿಕೊಂಡು ಉಜ್ಜಬೇಕು, ಅದೆಲ್ಲಾ ಸರಿಯಾಗಿ ಕೂಡಿ ಒಂದೇಯಾದ ಮೇಲೆ ನುಣ್ಣಗಾಗಿ ಪುಡಿಮಾಡಿದ ಕಲ್ಕವನ್ನು ಕಲಸಿ, ಕಷಾಯವನ್ನು ಸೇರಿಸಿ, ಮಂತಿನಿಂದ ಕಡೆದು, ತೆಳ್ಳಗೂ ಅಲ್ಲದೆ ದಪ್ಪವೂ ಅಲ್ಲದೆ ಸರಿಯಾಯಿತೆಂತ ತಿಳಿದು, ಸ್ವರಸಾದಿ ಆವಾಸಗಳನ್ನು ಕೂಡಿಸತಕ್ಕದ್ದಾಗಿರುತ್ತದೆ.

 ಷರಾ ಸಿರೂಹವು ಕೈಗೆ ಹಿಡಿಯಬೇಕು ಆದರೆ ಲೇಪವಾಗಿ ನಿಲ್ಲಬಾರದು ಮತ್ತು ಭಕ್ತಲೆಯಂತ ವಿಂಗಡವಾಗ ದಾರದು “ಧಾರಯೇದೌಷಧಂ ಪಾಣಿಂ ನ ತಿಷ್ಠತ್ಯವಲಿಪ್ಯ ಚ | ನ ಕರೋತಿಚ ಸೀಮನ್ತಂ ಸುನಿರೂಪಃ ಪ್ರಯೋಜಿತಃ” | (ಚಿ ಸಾ ಸಂ 943)
 19.       ಸ್ವಸ್ಥೇ ಕ್ವಾಧಸ್ಯ ಚತ್ವಾರೋ ಭಾಗಾಃ ಸ್ನೇಹಸ್ಯ ಪಂಚಮಃ |

ದೋಷಭೇದದ ಕ್ರುದ್ದೇನಿಲೇ ಚತುರ್ಧಸ್ತು ಷಷ್ಟಃ ಪಿತ್ತೇ ಕಥೇಷ್ಟಮಃ || ಮೇಲೆ ನಿರೂಹ ಸರ್ವೇಷು ಚಾಷ್ಟಮೋ ಭಾಗಃ ಕಲ್ಯಾನಾಂ ಲವಣಂ ಪುನಃ || ಕಲ್ಪನೆ

                                                       55