ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXII. - 444 - 49. ತತ್ರ ನೇತ್ರಂ ಚಲಿತಂ ವಿವರ್ತಿತಂ ಪಾರ್ಶ್ವಾಪೀಡಿತಮತ್ತು ನಳಿಗೆ ನಡಿಸುವ ಮನಸನ್ನಂ ತಿರ್ಯಕ್ ಕಿಪ್ತ ಮಿತಿ ಷಟ್ಟಣಿಧಾನದೋಷಾಃ | (ಸು, 562.) ದೋಷಗಳು ನಳಿಗೆಯನ್ನು ಅಲ್ಲಾಡಿಸಿದ್ದು, ತಿರುಗಿಸಿದ್ದು, ಪಾರ್ಶ್ವಕ್ಕೆ ಒತ್ತಿದ್ದು, ಅತಿಯಾಗಿ ಮೇಲಕ್ಕೆ ದೂಡಿದ್ದು, ಕೆಳಗೆ ಮಾಡಿ ಕಳುಹಿಸಿದ್ದು, ಅಡ್ಡವಾಗಿ ದೂಡಿದ್ದು, ಎಂಬವು ಆರು ವಸ್ತಿನಳಿಗೆ ಯನ್ನು ನಡೆಸುವ ದೋಷಗಳು, ನಳಿಗೆಯ ದೋಷಗಳು 50. ಅತಿಸ್ತೂಲಂ ಕರ್ಕಶಮವನತಮಣು ಭಿನ್ನಂ ಸನ್ನಿಕೃಷ್ಟವಿಪ್ರಕೃಷ್ಟ ಕರ್ಣಿ ನಳಿಗೆಯ ಕಂ ಸೂಕ್ಷಾತಿಛಿದ್ರಮತಿದೀರ್ಘವತಿಪ್ರಸ್ವಮಿತ್ಯೇಕಾದಶ ನೇತ್ರದೋ ಪಾಃ | (ಸು. 562.) ನಳಿಗೆಯು ಅತಿತೋರ, ದರಗು, ಬೊಗ್ಗಿ ದ್ದು, ಸಪೂರ, ಅಧವಾ ಒಡಕುಳ್ಳದ್ದಾಗಿರು ವದು, ಅದರ ಕಿವಿಯು ಯುಕ್ತಸ್ಥಾನಕ್ಕೆ ಸಮೀಪದಲ್ಲಿ ಅಥವಾ ದೂರದಲ್ಲಿ ರುವದು, ಅದರ ತೂತು ಅತಿಸೂಕ್ಷ, ಅಥವಾ ಅತಿದೊಡ್ಡದಾಗಿರುವದು, ಮತ್ತು ನಳಿಗೆಯು ಅತಿಉದ್ದ ಅಧವಾ ಅತಿಗಿಡು ಆಗಿರುವದು, ಇವು ಹನ್ನೊಂದು ವಸ್ತಿ ನಳಿಗೆಯ ದೋಷಗಳು. 51. ಬಹಲತಾಕ್ಷತಾ ಸಛಿದ್ರತಾ ಪ್ರಸ್ತೀರ್ಣತಾ ದುರ್ಬದ್ದತೇತಿ ಪಂಚ ವಸ್ತಿ ವಸ್ತಿ ಚೀಲದ ದೋಷಾಃ | (ಸು. 562 ) ದೋಷಗಳು ವಸ್ತಿಯು ದೊಡ್ಡದಾಗಿರುವದು (ಅಧವಾ ಮಾಂಸಯುಕ್ತವಾಗಿ ಗಟ್ಟಿಯಾಗಿರುವದು), ಚಿಕ್ಕದಾಗಿರುವದು, ರಂಧ್ರಯುಕ್ತವಾಗಿರುವದು, ಬಹಳ ವಿಶಾಲವಾಗಿರುವದು, ಸರಿಯಾಗಿ ಕಟ್ಟಲ್ಪಡದಿರುವದು, ಇವು ಐದು ವಸ್ತಿ (ಚೀಲದ) ದೋಷಗಳು. 52. ಅತಿಪೀಡಿತ ತಾ ಶಿಧಿಲಪೀಡಿತತಾ ಭೂಯೋ ಭೂಯೋವಪೀಡನಂ ವಸ್ತಿ ಹಿಂಡುವ ಕಾಲಾತಿಕ್ರಮ ಇತಿ ಚತ್ತಾರಃ ಪೀಡನದೋಷಾಃ | (ಸು. 562.) ದೋಷಗಳು ಅತಿಯಾಗಿ ಹಿಂಡಿದ್ದು, ಸಡಿಲಾಗಿ ಹಿಂಡಿದ್ದು, ಪದೇಪದೇ ಹಿಂಡುವದು, ಕಾಲ ನಿಯಮ ತಪ್ಪು ವದು, ಇವು ನಾಲ್ಕು ವಸ್ತಿಯನ್ನು ಹಿಂಡುವಲ್ಲಿ ದೋಷಗಳು. ಗಳು 53, ಆಮತಾ ಹೀನತಾತಿಮಾತ್ರತಾತಿಶೀತತಾತ್ಯುಷ್ಣತಾತಿತೀಕ್ಷತಾತಿಮ್ಮ ದ್ರವ್ಯದೋಷ ದುತಾತಿಸ್ನಿಗ್ಧತಾತಿರೂಕ್ಷತಾತಿಸಾಂದ್ರತಾದ್ರವತೇಕಾದಶ ದ್ರವ್ಯ ದೋಷಾಃ | (ಸು. 562.) (ಸ್ನೇಹವು) ಹಸಿಯಾಗಿರುವದು, ಪ್ರಮಾಣದಲ್ಲಿ ಹೀನವಾಗಿರುವದು, ಪ್ರಮಾಣದಲ್ಲಿ ಅತಿಯಾಗಿರುವದು, ಅತಿಶೀತವಾಗಿರುವದು, ಅತ್ಯುಷ್ಣ ವಾಗಿರುವದು, ಅತಿತೀಕವಾಗಿರು ವದು, ಅತಿಮೃದುವಾಗಿರುವದು, ಅತಿಸ್ನಿಗ್ಧವಾಗಿರುವದು, ಅತಿರೂಕ್ಷವಾಗಿರುವದು, ಅತಿ ದಪ್ಪವಾಗಿರುವದು, ಅತಿ ತೆಳ್ಳಗಾಗಿರುವದು, ಇವು ಹನ್ನೊಂದು ದ್ರವ್ಯದೋಷಗಳು.