- 465 465 - ಆ XXIV. 8 ಅದು ಎಂಟಂಗುಲ ಉದ್ದವಿರಬೇಕು. ತಾಮ್ರದಿಂದಾಗಲಿ, ಶಿಲೆಯಿಂದಾಗಲಿ, (ಕೊಂಬು ಮುಂತಾದ) ಶರೀರಾವಯವದಿಂದಾಗಲಿ, ತಯಾರಿಸಲ್ಪಟ್ಟ ಶಲಾಕೆಯು ಹಿತವಾಗುವದು. - ಷರಾ ಸದೃಶಗುಣಗಳೆಂದರೆ ಚಿನ್ನದಲ್ಲಿ ಸೀ, ಬೆಳ್ಳಿಯಲ್ಲಿ ಹುಳಿ, ಕೊಂಬಿನಲ್ಲಿ ಉಪ್ಪು, ತಾಮ್ರ ಮತ್ತು ಕಬ್ಬಿಣ ದಲ್ಲಿ ಚೊಗರು, ವೈಡೂರ್ಯದಲ್ಲಿ ಖಾರ, ಕಂಚಿನಲ್ಲಿ ಕಹಿ, ಇರುವದರಿಂದ ಅಂಜನದ ಗುಣಕ್ಕೆ ಸದೃಶವಾದ ಗುಣವುಳ್ಳ ಪಾತ್ರವಾಗಬೇಕೆಂತ ನಿ ಸಂ ವ್ಯಾ ಆದರೆ ವಾಗ್ಭಟನು ಲೇಖನಕ್ಕೆ ತಾಮ್ರದ ಶಲಾಕೆ, ರೋಪಣಕ್ಕೆ ಕಾಲಲೋಹದ್ದು ಮತ್ತು ಕೈಬೆರಳು, ಮತ್ತು ಪ್ರಸಾದನಕ್ಕೆ ಚಿನ್ನ ಅಥವಾ ಬೆಳ್ಳಿಯ ಶಲಾಕೆ ಪ್ರಶಸ್ತವೆಂತಲೂ, ಶಲಾಕೆಯ ಉದ್ದ ಹತ್ತಂಗು ಲವಿರಬೇಕೆಂತಲೂ, ಹೇಳುತ್ತಾನೆ ಶಾರೀರಿ ಎಂಬದಕ್ಕೆ ಬೆರಳು ಎಂಬ ಅರ್ಥ ಸರಿಯಲ್ಲ ಎಂಬ ಪಕ್ಷ ಉಂಟು 20. ವಾಮೇನಾಕ್ಷಿ ಎನಿರ್ಭುಜ್ಯ ಹಸ್ತೇನ ಸುಸಮಾಹಿತಃ | ಶಲಾಕಯಾ ದಕ್ಷಿಣೇನ ಕ್ಷಿಪೇತ್ಕಾನೀನಮಂಜನಂ || ಅಪಾಂಗ್ಯಂ ವಾ ಯಧಾಯೋಗ್ಯಂ ಕುರ್ಯಾಚ್ವಾಪಿ ಗತಾಗತಂ | ವರ್ತ್ಮೋಪಲೇs ಪಿ ವಾ ಯತ್ತದಂಗುಲ್ಯೈವ ಪ್ರಯೋಜಯೇತ್ || ಅಂಜನ ಕಡ್ಡಿಯನ್ನು ಉಪಯೋಗಿ ಅಕ್ಷಿ ನಾತ್ಯಂತಯೋರಂಜ್ಯಾದ್ ಬಾಧಮಾನೋSಪಿ ವಾ ಭಿಷಕ್ | ಸುವ ಕ್ರಮ ನ ವಾ ನಿರ್ವಾಂತದೋಷೇsಕ್ಷ್ಲಿ ಧಾವನಂ ಸಂಪ್ರಯೋಜಯೇತ್ || ದೋಷಃ ಪ್ರತಿನಿವೃತ್ತಃ ಸನ್ ಹನ್ಯಾದ್ ದೃಷ್ಟೇರ್ಬಲಂ ತಧಾ || ಗತದೋಷಮಪೇತಾಶ್ರು ಪಶ್ಯೇದ್ಯತ್ ಸಮ್ಯಗಂಭಸಾ || ಪ್ರಕ್ಷಾಲ್ಯಾಕ್ಷಿ ಯಧಾದೋಷಂ ಕಾರ್ಯಂ ಪ್ರತ್ಯಂಜನಂ ತತಃ | (ಸು. 711.) ವೈದ್ಯನು ಏಕಾಗ್ರಚಿತ್ತನಾಗಿ, ಎಡದ ಕೈಯಿಂದ ಕಣ್ಣನ್ನು ಬಿಡಿಸಿ ಹಿಡಿದು, ಬಲದ ಕೈಯಿಂದ ಶಲಾಕೆ ದ್ವಾರ ಅಂಜನವನ್ನು ಕಣ್ಣಿನ ಮೂಗಿನಕಡೆ ತುದಿ ಸಮೀಪ, ಅಥವಾ ಹೊರ ಮೂಲೆ ಸಮೀಪ, ಹಾಕಿ ಯುಕ್ತರೀತಿಯಲ್ಲಿ ಇನ್ನೊಂದು ತುದಿ ವರೆಗೆ ಎಳೆದು ಹಿಂದೆ ತರಬೇಕು. ರೆಪ್ಪೆಗೆ ಹಚ್ಚತಕ್ಕದ್ದನ್ನು ಬೆರಳಿನಿಂದಲೇ ಪ್ರಯೋಗಿಸಬೇಕು. ಕಣ್ಣಿನ ಬಹಳ ತುದಿ ವರೆಗೆ ಆಗಲಿ, ನೋವಾಗುವ ಹಾಗೆ ಆಗಲಿ, ಅಂಜನ ಮಾಡಬಾರದು. ಕಣ್ಣಿನ ದೋಷವು ಹೊರಗೆ ಹೋಗುವ ವರೆಗೆ ಕಣ್ಣನ್ನು ತೊಳೆಯಬಾರದು; ಹಾಗೆ ತೊಳೆದರೆ ದೋಷವು ಹಿಂತಿರುಗಿ ನಿಂತು, ದೃಷ್ಟಿಯ ಬಲವನ್ನು ಕೆಡಿಸೀತು, ಕಣ್ಣಿನ ದೋಷ ಹೋಗಿ, ನೀರು ಬರುವದು ನಿಂತ ಕೂಡಲೇ, ನೀರಿನಿಂದ ಕಣ್ಣನ್ನು ಚೆನ್ನಾಗಿ ತೊಳೆದು, ಆ ಮೇಲೆ ದೋಷಕ್ಕೆ ತಕ್ಕ ಹಾಗೆ ಪ್ರತ್ಯಂಜನ ಮಾಡತಕ್ಕದ್ದು. 21. ಶ್ರಮೋದಾವರ್ತರುದಿತಮದ್ಯಕ್ರೋದಭಯಜ್ವರೈಃ | ಅಂಜನಕ್ಕೆ ವೇಗಾಘಾತಶಿರೋದೋಪೈಶ್ಚಾರ್ತಾನಾಂ ನೇಷ್ಯತೇsಂಜನಂ || ಅಯೋಗ್ಯರು ರಾಗರುಕ್ತಿಮಿರಾಸ್ರಾವಶೂಲಸಂರಂಭಸಂಭವಾತ್ | (ಸು. 711) ಶ್ರಮ, ಉದಾವರ್ತ, ಶೋಕ, ಮದ್ಯ, ಸಿಟ್ಟು, ಭಯ, ಜ್ವರ, ವೇಗಗಳ ತಡೆ, ಶಿರೋ ದೋಷ, ಇವುಗಳಿಂದ ಪೀಡಿತರಾದವರಿಗೆ ಅಂಜನದಿಂದ ಕಣ್ಣು ಕೆಂಪು, ನೋವು, ತಿಮಿರ, ನೀರು ಸುರಿಯುವಿಕೆ, ಶೂಲೆ ಮತ್ತು ಬಾಕು, ಈ ದೋಷಗಳುಂಟಾಗುವದರಿಂದ ಅಂಜನವು ಹಿತವಲ್ಲ. 59
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.