u XXIV - 466 – 22. ಅಧಾನುನ್ಮೀಲಯನ್ ದೃಷ್ಟಿ ಮಂತಃ ಸಂಚಾರಯೇತ್ ಶನೈಃ | ಅಂಜಿತೇ ವರ್ತ್ಮನೀ ಕಿಂಚಿತ್ ಚಾಲಯೇಚ್ವೈವಮಂಜನಂ || ತೀಕ್ಷ್ಣಂ ವ್ಯಾಪ್ನೋತಿ ಸಹಸಾ ನ ಚೋನ್ಮೇಷನಿಮೇಷಣಂ | ನಿಷ್ಪೀಡನಂ ಚ ವರ್ತ್ಮಭ್ಯಾಂ ಕ್ಷಾಲನಂ ವಾ ಸಮಾಚರೇತ್ || ಅಂಜನ ತಾಗಿಸಿದ ಅಪೇತೌಷಧಸಂರಂಭಂ ನಿರ್ವೃತಂ ನಯನಂ ಯದಾ | ನಂತರದ ಕರ್ತವ್ಯ ವ್ಯಾಧಿದೋಷರ್ತುಯೋಗ್ಯಾಭಿರದ್ಭಿಃ ಪ್ರಕ್ಷಾಲಯೇತ್ತ ದಾ|| ದಕ್ಷಿಣಾಂಗುಷ್ಠ ಕೇನಾಕ್ಷಿ ತತೋ ವಾಮಂ ಸವಾಸಸಾ | ಊರ್ಧ್ವವರ್ತ್ಮನಿ ಸಂಗೃಹ್ಯ ಶೋಧ್ಯಂ ವಾಮೇನ ಚೇತರತ್ || ವರ್ತ್ಮಪ್ರಾಪ್ತಾಂಜನಾದ್ ದೋಷೋ ರೋಗಾನ್' ಕುರ್ಯಾದರ್ತೋsನ್ಯಧಾ | (ವಾ. 105-06.) * ಅಂಜನ ಹಾಕಿದ ಮೇಲೆ, ಕಣ್ಣನ್ನು ಬಿಡಿಸದೆನೇ ಒಳಗೆ ದೃಷ್ಟಿಯನ್ನು ಮೆಲ್ಲಗೆ ತಿರುಗಿಸ ಬೇಕು, ಆ ಮೇಲೆ ರೆಪ್ಪೆಗಳನ್ನು ಸ್ವಲ್ಪವಾಗಿ ಅಲ್ಲಾಡಿಸಬೇಕು. ಹೀಗೆ ಮಾಡುವದರಿಂದ ತೀಕ್ಷ್ಣವಾದ ಅಂಜನವು(ಕಣ್ಣಿನೊಳಗೆ) ವ್ಯಾಪಿಸುವದು. ಘಕ್ಕನೆ ಕಣ್ಣು ತೆರೆದು ಮುಚ್ಚು ವದು, ರೆಪ್ಪೆಗಳಿಂದ ಎಳೆದು ಪೀಡಿಸುವದು, ಅಧವಾ ತೊಳೆಯುವದು, ಗರ್ಹಿತವಾಗಿರುತ್ತದೆ. ಔಷಧಿಯ ಪ್ರತಾಪ ನಿಂತು ಕಣ್ಣು ಯಥಾಸ್ಥಿತಿಗೆ ಬಂದನಂತರ, ಕಣ್ಣನ್ನು ವ್ಯಾಧಿಗೂ, ದೋಷಕ್ಕೂ, ಋತುವಿಗೂ, ತಕ್ಕ ಹಾಗಿನ ನೀರಿನಿಂದ ತೊಳೆಯಬೇಕು. ಆ ಮೇಲೆ ಬಲದ ಕೈಯ ಹೆಬ್ಬೆಟ್ಟಿನಿಂದ ರೋಗಿಯ ಎಡದ ಕಣ್ಣನ್ನೂ, ಎಡದ ಹೆಬ್ಬೆಟ್ಟಿನಿಂದ ರೋಗಿಯ ಬಲದ ಕಣ್ಣನ್ನೂ, ಮೇಲಿನ ರೆಪ್ಪೆಯಲ್ಲಿ ಹಿಡಿದು, ವಸ್ತ್ರದಿಂದ ಒರಸಿ ಶುದ್ದ ಮಾಡತಕ್ಕದ್ದು. ಹಾಗೆ ಶೋಧಿಸದಿದ್ದರೆ, ರೆಪ್ಪೆಗಳಿಗೆ ಹಿಡಿದ ಅಂಜನದ ದೆಸೆಯಿಂದ ದೋಷವು ಕೆದರಿ ಅನೇಕ ರೋಗ ಗಳನ್ನುಂಟುಮಾಡುವದು.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.