ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXY - 470 - 9. ಇತರಯೋರ್ವ್ಯಸೇತಧಮಾಂಗಾರೇ ಸ್ಥಿರೇ ಸಮಾಹಿತೇ ಶರಾವೇ ಕಾಸಪ್ಪ -ವಾಮನೀಯ ಪ್ರಕ್ಷಿಪ್ಯ ವರ್ತಿಂ ಮೂಲಚ್ಚಿದ್ರೇಣಾನೈನ ಶರಾವೇಣ ಪಿದಾಯ ವರ್ತಿಗಳನ್ನು ಉಪ ಯೋಗಿಸುವ ಕನ ತಸ್ಮಿನ್ ಛಿದ್ರೇ ನೇತ್ರಮೂಲಂ ಸಂಯೋಜ್ಞ ಧೂಮಮಾಸೇವೇತ | (ಸು. 592-93.) ಕಾಸಪ್ಪ ಮತ್ತು ವಾಮನೀಯ ಎಂಬ ಧೂಮಗಳ ಸಂಗತಿಯಲ್ಲಿ , ವರ್ತಿಯನ್ನು (ಅಥವಾ ಚೂರ್ಣವನ್ನು) ಹೊಗೆಯಿಲ್ಲದ ಬೆಂಕಿಕೆಂಡಗಳುಳ್ಳ ಮತ್ತು ಗಟ್ಟಿಯಾಗಿಯೂ, ಸರಿಯಾಗಿ ಯೂ ಇರಿಸಲ್ಪಟ್ಟ ಚಟ್ಟಿಯೊಳಗೆ ಹಾಕಿ, ಅಡಿಯಲ್ಲಿ ರಂಧ್ರವುಳ್ಳ ಬೇರೊಂದು ಚಟ್ಟಿಯಿಂದ ಮುಚ್ಚಿ, ಆ ರಂಧ್ರದಲ್ಲಿ ಧೂಮದ ನಳಿಗೆಯ ಬುಡವನ್ನು ನಿಲ್ಲಿಸಿ, ಹೊಗೆಯನ್ನು ಸೇವಿಸಬೇಕು. ಸರ್ತಿ ನಿಯಮ 10 ಪ್ರಶಾಂತೇ ಧೂಮೇ ವರ್ತಿಮವಶಿಷ್ಟಾಂ ಪ್ರಕ್ಷಿಪ್ತ ಪುನರಪಿ ಧೂಮಂ ಧೂಮಪಾನಗಳ ಪಾಯಯೇದಾದೋಷಶುದ್ದೇರೇಷ ಧೂಮಪಾನೋಪಾಯವಿಧಿಃ | (ಸು. ಸ93.) ಹೊಗೆಯ ಶಾಂತವಾದ ಮೇಲೆ, ಉಳಿದ ವರ್ತಿಯನ್ನು ತೆಗೆದು ಬಿಸಾಕಿ, ಪುನಃ ಅದೇ ರೀತಿ ದೋಷಗಳು ಶುದ್ಧವಾಗುವ ವರೆಗೆ ಹೊಗೆಯನ್ನು ಸೇರಿಸಬೇಕು. ಇದು ಧೂಮಪಾನ ಮಾಡುವ ಉಪಾಯವನ್ನು ಕುರಿತಾದ ವಿಧಿಯಾಗಿರುತ್ತದೆ ಪ್ರಾಯೋಗಿಕಂ ಶ್ರೀಂಝೀನುಚ್ಚಾಸಾನಾದದೀತ | ಮುಖನಾಸಿಕಾ ಬ್ಯಾಂ ಚ ಪರ್ಯಾಯಾಂಝೀಂಶ್ಚತುರೋ ವೇತಿ | ಸೈಹಿಕಂ ಯಾವ ದಶ್ರಪ್ರವೃತ್ತಿಃ | ವೈರೇಚನಿಕವಾದೋಷದರ್ಶನಾತ್ | ತಿಲತಂಡುಲ ಯವಾಗೂ ಪೀತೇನ ಪಾತವೋ ವಾಮನೀಯಃ | ಗ್ರಾಸಾಂತರೇಷು ಕಾ ಸಮ್ಮ ಇತಿ | (ಸು. 594 ) . ಪ್ರಾಯೋಗಿಕದ ಹೊಗೆಯನ್ನು ಮೂರುಮೂರು ಸರ್ತಿ ಎಳೆಯಬೇಕು. ಹೀಗೆ ಬಾಯಿ ಯಿಂದ ಮತ್ತು ಮೂಗಿನಿಂದ ಮೂರು ಅಥವಾ ನಾಲ್ಕು ಆವರ್ತಿ, ಸ್ನೇಹಿಕ ಹೊಗೆಯನ್ನು ಕಣ್ಣ ನೀರು ಬರುವ ಪರ್ಯಂತ ಮತ್ತು ವೈರೇಚನದ ಹೊಗೆಯನ್ನು ದೋಷವು ಕಾಣುವ ವರೆಗೆ ಸೇದುವದು. ವಮನಧೂಮವನ್ನು ಕೊಡುವದಕ್ಕೆ ಮೊದಲು ರೋಗಿಗೆ ಎಳ್ಳು ಮತ್ತು ಅಕ್ಕಿಯಿಂದ ಮಾಡಿದ ತೆಳ್ಳಗಿನ ಗಂಜಿಯನ್ನು ಕುಡಿಸಬೇಕು. ಕಾಸಮ್ಮ ಧೂಮವನ್ನು ಆಹಾರಗಳ ತುತ್ತುಗಳ ಮಧ್ಯ ಉಪಯೋಗಿಸತಕ್ಕದ್ದು. ಷರಾ ಮೂರು ಸರ್ತಿಗಳಿಂದ ಸೇದಿ ಹೊರಗೆ ಬಿಡುವುದು ಒಂದು ಆವರ್ತಿ ಹಾಗಿನ 3 ಅಥವಾ 4 ಆವರ್ತಿ ಧೂಮಪಾನವನ್ನು ಮಾಡಬೇಕಂತ ಅಭಿಪ್ರಾಯ 11. ವ್ರಣಧಮಂ ಶರಾವಸಂಪುಟೋವನೀತೇನ ನೇತ್ರೇಣ ವ್ರಣಮಾನ ಯೇತ್ | ಧೂಮನಾದನೋಪಶಮೋ ವ್ರಣವೈಶದ್ಯಮಾಸ್ರಾವೋ ವ್ರಣಧೂಮ ವಿಧಿ ಪಶಮಶ್ಚ ಭವತಿ | (ಸು. 594.)