- 471 - ಆ Xxy ವ್ರಣಧೂಮವನ್ನು ಚಟ್ಟಿಯ ಮುಚ್ಚಳದಲ್ಲಿ ನೆಟ್ಟ ನಳಿಗೆಯಿಂದ ವ್ರಣಕ್ಕೆ ಒಯ್ಯಬೇಕು. ಹಾಗೆ ಹೊಗೆ ಕೊಡುವದರಿಂದ ನೋವು ಶಾಂತವಾಗುವದಲ್ಲದೆ, ವ್ರಣವು ಶುದ್ಧವಾಗಿ, ಅದ ರಿಂದ ಬರುವ ಸ್ರಾವವು ನಿಲ್ಲುವದು. 12. ತತ್ರ ಶೋಕಶ್ರಮಭಯಾಮರ್ಪೌಹ್ಮವಿಷರಕ್ತಪಿತ್ತಮದಮರ್ಚ್ಚಾ ದಾಹಪಿಪಾಸಾಪಾಂಡುರೋಗತಾಲುಶೋಷಛರ್ದಿಶಿರೋಭಿಘಾತೋ ದ್ವಾರಾವತರ್ಪಿತತಿ ಮಿರಪ್ರಮೇಹೋದರಾಧ್ಯಾನೋರ್ವ್ವವಾತಾರ್ತಾ ಧೂಮಪಾನಕ್ಕೆ ಅಯೋಗ್ಯರು ಬಾಲವೃದ್ದ ದುರ್ಬಲವಿರಿಕ್ತಾಸ್ಥಾಪಿತಚಾಗರಿತಗರ್ಭಿಣಿರೂ ಕ್ಷಣ ಕ್ಷ ತೋರಸ್ಕಮಧುಚ್ಛತದಧಿದುಗ್ಗಮತೃಮದ್ಯಯವಾಗೂ ಪೀತಾ ಕಫಾ ಶ್ವ ನ ಧೂಮಮಾಸೇವೆರನ್ | (ಸು 593.) ಶೋಕ, ಶ್ರಮ, ಭಯ, ಸಿಟ್ಟು, ಉಷ್ಣತೆ, ವಿಷ, ರಕ್ತಪಿತ್ತ, ಮದ, ಮರ್ಚ್ಛೆ, ಉರಿ, ಬಾಯಾರಿಕೆ, ಪಾಂಡುರೋಗ, ತಾಲು ಒಣಗುವಿಕೆ, ವಾಂತಿ, ತಲೆಬಡತ, ತೇಗು, ಲಂಘನ, ತಿಮಿರ, ಪ್ರಮೇಹ, ಉದರವ್ಯಾಧಿ, ಹೊಟ್ಟೆಯುಬ್ಬರ, ಊರ್ಧ್ವವಾತ, ಇವುಗಳಿಂದ ಪೀಡಿತ ರಾದವರೂ, ಬಾಲರೂ, ಮುದುಕರೂ, ಬಲಹೀನರೂ, ವಿರೇಚನ ಮಾಡಿಸಿಕೊಂಡವರೂ, ಆ ಸ್ಥಾಪನ ವಸ್ತಿ ಸೇವಿಸಿದವರೂ, ಜಾಗರಮಾಡಿದವರೂ, ಗರ್ಭಿಣಿಯರೂ, ರೂಕ್ಷ ರೂ, ಕ್ಷೀಣ ರಾದವರೂ, ಉರಕ್ಷತರೂ, ಜೇನು, ತುಪ್ಪ, ಮೊಸರು, ಹಾಲು, ಮಾನು, ಮದ್ಯ, ಮತ್ತು ಯವಾಗು ಗಂಜಿ, ಇವುಗಳನ್ನು ಸೇವಿಸಿದವರೂ ಮತ್ತು ಅಲ್ಪವಾದ ಕಫವುಳ್ಳವರು, ಇವ ರೆಲ್ಲಾ ಧೂಮವನ್ನು ಪಾನಮಾಡಬಾರದು. ಚನ-ಪ್ರಾಯೋ 13. ತತ್ರ ಸ್ನೇಹನೋ ಮಾತಂ ಶಮಯತಿ, ಸ್ನೇಹಾದುಪಲೇವಾಚ್ಚ | ವೈರೇ ಸ್ನೇಹನ-ವೈರೇ ಚನಃ ಶ್ಲೇಷ್ಯಾಣಮುಶ್ಯಾಪಕರ್ಷತಿ, ರೌಕ್ಷಾಕ್ಕಾದೌಜ್ಞಾ ಈ ಭೂಮಿಗಳ ದೈಶದ್ಯಾಚ್ಚ | ಪ್ರಾಯೋಗಿಕಃ ಕ್ಲಿಷ್ಮಾಣಮುತ್ತೈಶಯತ್ಯುತ್ಕೃಷ್ಟಂ ಕರ್ಮ ಚಾಪಕರ್ಷತಿ, ಸಾಧಾರಣತ್ವಾತ್ ಪೂರ್ವಾಭ್ಯಾಮಿತಿ | (ಸು. 593.) ಅವುಗಳೊಳಗೆ ಸ್ನೇಹನ ಧೂಮವು ತನ್ನ ಜಿಡ್ಡಿನಿಂದಲೂ, ಲೇಪವಾಗಿ ಹಿಡಿಯುವ ಸ್ವಭಾವದಿಂದಲೂ, ವಾತವನ್ನು ಶಮನಮಾಡುತ್ತದೆ. ವೈರೇಚನವು ತನ್ನ ರೂಕ್ಷ, ತೀಕ್, ಉಷ್ಣ ಮತ್ತು ವಿಶದಗುಣಗಳಿಂದ ಕಫವನ್ನು ಕಿತ್ತು. ಹೊರಗೆ ಹಾಕುತ್ತದೆ ಪ್ರಾಯೋಗಿಕವು ಮೇಲಿನ ಎರಡಕ್ಕೆ ಸಮಾನಗುಣವುಳ್ಳದ್ದಾದ್ದರಿಂದ ಕಫವನ್ನು ಕೀಳುತ್ತದೆ ಮತ್ತು ಸಡಿಲಾ ಗಿರುವ ಕಫವನ್ನು ಹೊರಗೆ ಹಾಕುತ್ತದೆ. 14. ನರೋ ಧೂಮೋಪಯೋಗಾಚ್ಚ ಪ್ರಸನ್ನೇಂದ್ರಿಯವಾದ್ಮನಾಃ | ಧೂಮೋಪಯೋಗದ ದೃಢಕೇಶದ್ವಿಜಲ್ಮಶುಸುಗಂಧಿವಿಶದಾನನಃ || (ಸು. 593.) ಸಾಮಾನ್ಯ ಗುಣ ಮನುಷ್ಯನು (ಪ್ರಾಯೋಗಿಕ) ಧೂಮವನ್ನು ಉಪಯೋಗಿಸುವದರಿಂದ, ಅವನ ಇಂದ್ರಿಯಗಳು, ಮಾತು ಮತ್ತು ಮನಸ್ಸು ಪ್ರಸನ್ನವಾಗುವದಲ್ಲದೆ, ಅವನ ಕೂದಲು, ಹಲ್ಲು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.