ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ.

                                                                 LXV

ಪ್ರಮಾಣದಲ್ಲಿ ಕ್ವಿನೀನನ್ನು ಕೊಡಬೇಕು, ಆ ಮೇಲೆ ಮೂರು ವರ್ಷಗಳ ವರೆಗೆ ವರ್ಷಕ್ಕೆ ಎರಡು ಸರ್ತಿ ಕ್ವಿನೀನ್ ಪ್ರದಾನದ ಕ್ರಮ ನಡಿಸುವದು ಪ್ರಶಸ್ತ, ಇವು ಎಲ್ಲಾ ಕಳೆದ ವರ್ಷದ ಪುಸ್ತಕದಲ್ಲಿ ಕಾಣುವ ನಿಶ್ಚಿತಗಳು, 1903ನೇ ಇಸವಿಯಲ್ಲಿ ಜ್ವರ ಏರಿ, ಮೈ ಒಣಗಿದ ಕೂಡಲೆ ಕ್ಲಿನೀನ್ ಕೊಡುವದನ್ನು ನಿಲ್ಲಿಸಬೇಕು ಮತ್ತು ರೋಗಿಯ ಮೆದುಳಿನಲ್ಲಿ ಅಕ್ರಮ ಇದ್ದರೆ, ಅಧವಾ ಉಪದ್ರವಕರವಾದ ಅತಿಸಾರ ಇದ್ದರ, ಕ್ವಿನೀನನ್ನು ಕೊಡಬಾರದು ಎಂತ ಇತ್ತು. ಈ ಸಂಗತಿ ಹೊಸ ನಿರ್ಣಯಗಳಲ್ಲ ಕಾಣುವದಿಲ್ಲ. ಬಹುಶಃ ಅಂಧಾ ಸಂಗತಿಗಳಲ್ಲಿಯೂ, ವಾಂತಿಯ ದೆಸೆಯಿಂದ ಕ್ವಿನೀನು ಹೊಟ್ಟೆಯಲ್ಲಿ ನಿಲ್ಲದಾಗಲೂ, ಕ್ವಿನೀನ್ನೀರನ್ನು, ಮೈ ಚುಚ್ಚಿ, ನಳಿಗೆಯಿಂದ ಮಾಂಸದೊಳಗೆ, ಅಧವಾ ಶಿರೆಗಳೊಳಗೆ, ಹೊಗಿಸಬೇಕೆಂತ ಅಭಿಪ್ರಾಯ ವಿದ್ದ ಹಾಗೆ ಕಾಣುತ್ತದೆ. ಅಶಕ್ತಿ ಹೆಚ್ಚು ಇದ್ದರೆ ರೋಗಿಗೆ ಬ್ರಾಂಡಿ ಕೊಡುವದೂ, ಅವನು ನಿದ್ರೆಯಿಲ್ಲದೆ ಪೇಚಾಡುತ್ತಾನಾದರ ಆಧೀಮನ್ನು ಕೊಡುವದೂ, ಬಿಸಿ ಹೆಚ್ಚು ಇದ್ದಾಗ್ಗೆ ತಣ್ಣೀ ರಿನ ಒತ್ತಡ ಕೊಡುವದೂ ಮುಂತಾದ್ದೆಲ್ಲ ಅವರ ಪ್ರಕಾರ ಶಾಸ್ತ್ರಸಮ್ಮತ. ತಲೆನೋವು ಮುಂತಾದ ಲಕ್ಷಣಗಳನ್ನು ಕಂಡು ಡಾಕ್ಟರರು ರಕ್ತಮೋಕ್ಷಣವನ್ನು ಮಾಡಿಸುವದು ಸರಿಯಲ್ಲ ಎಂತ 1876ನೇ ಇಸವಿಯ ಗ್ರಂಧದಲ್ಲಿ ಎಚ್ಚರಿಸಿದ್ದಾರೆ, ಆದರೆ 1903ನೇ ಇಸವಿಯ ಗ್ರಂಧದಲ್ಲಿ ತಲೆನೋವು ಹೆಚ್ಚು ಇದ್ದರೆ ಕೆನ್ನೆಗಳಲ್ಲಿ, ಅಥವಾ ಕಿವಿಗಳ ಹಿಂಭಾಗದಲ್ಲಿ, ಒಂದೆರಡು ಜಿಗಳೆಗಳನ್ನು ಕಚ್ಚಿಸಿದರೆ ಕ್ಷೇಮವಾಗುತ್ತದೆಂತ ಒರೆದಿದ್ದಾರ. ಇತ್ತಲಾಗಿನ ಗ್ರಂಧದಲ್ಲಿ ಆ ಪ್ರಸ್ತಾಪವಿಲ್ಲ. ಮಲೇರಿಯದಲ್ಲಿ ಕ್ವಿನೀನಿನ ಉಪಯೋಗದಂತೆ, ಎಲ್ಲಾ ಜ್ವರಗಳಲ್ಲಿಯೂ ಮೈಬಿಸಿಯು 102 1/2 ಅಧವಾ 103 ಡಿಗ್ರಿಗೆ ಮಿಕ್ಕಿರುವದಾದರೆ, ರೋಗಿಗೆ 3 ಘಂಟೆಗೆ ಒಂದಾ ವರ್ತಿ ತಲೆ ವಿನಾ ಸರ್ವಾಂಗ ಶರೀರವು ತಣ್ಣೀರಿನಲ್ಲಿ 15 ಅಧವಾ 20 ಮಿನಿಟುಕಾಲ ಮುಳುಗಿ ಇರುವಂತೆ ಸ್ನಾನ ಮಾಡಿಸುವ ಕ್ರಮವು ಬಲಪಡುತ್ತಲೇ ಬಂದದೆ 1920ನೇ ಇಸವಿಯ ಗ್ರಂಧದಲ್ಲಿ, ಆಸ್ಪತ್ರಿಗಳಲ್ಲಯ 100 ರೋಗಿಗಳೊಳಗೆ 6ರಿಂದ 8ರ ವರೆಗಿನವರು ಈ ಸ್ನಾನದಿಂದ ಬದುಕಿದ್ದಾರೆಂತಲೂ, ಆ ಸ್ನಾನದ ಕ್ರಮವನ್ನು ಸಂಪೂರ್ಣವಾಗಿ ಉಪಯೋಗಿಸಿದ ಒಂದು ಆಸ್ಪತ್ರಿಯಲ್ಲಿ ಮರಣದ ಪುಮಾಣವು 14.8 ಶತಾಂಶಗಳಿಂದ 7 1/2 ಶತಾಂಶಗಳಿಗೆ ಇಳಿದದ್ದು ಕಂಡದೆಂತ ಸಹ ಒರೆಯಲ್ಪಟ್ಟದೆ. ಆ ಗುಣಗಳು ತಣ್ಣೀರಿನ ಉಪಯೋಗದಿಂದಲೇ ಉಂಟಾದ್ದೆಂತ ಹ್ಯಾಗೆ ನಿಶ್ಚಯಿಸಿದ್ದೆಂಬದು ವಿವರಿಸಲ್ಪಡಲಿಲ್ಲ.

  20. ಜ್ವರವು ಪ್ರತ್ಯೇಕ ರೋಗವಲ್ಲ ಎಂದುಕೊಳ್ಳುವ ಈ ಪಾಶ್ಚಾತ್ಯ ಪಂಡಿತರು ತಮ್ಮ ಔಷಧವರ್ಗಗಳಲ್ಲಿ ಎಂಟಿಪೈರೆಟಿಕ್ಸ್ (Antipyretics) ಅಂದರೆ ಜ್ವರಹರವಾದ ಔಷಧಗಳು, ಮತ್ತು ಫಿವೇರ್ ಮಿಕ್ಸ್‌ಚರ್ (fever mixture), ಅಂದರೆ ಜ್ವರಹರವಾದ ಮಿಶ್ರಗಳು, ಎಂಬ ವಿಭಾಗಗಳನ್ನಿಟ್ಟುಕೊಂಡು ಉಪಯೋಗಿಸುತ್ತಿರುವದು ಅಸಂಬದ್ಧವಲ್ಲವೇ? ಒಂದು ರೋಗಕ್ಕೆ ವಿಧಿಸಲ್ಪಟ್ಟ ಔಷಧದಿಂದಲೇ ಒಹು ರೋಗಗಳು ವಾಸಿಯಾಗುತ್ತವೆಂಒದು ಮತ್ತು ಅಣಿಲೆಕಾಯಿಯ ಗುಣವನ್ನು ವರ್ಣಿಸುವಲ್ಲಿ ನಾಮತಃ ನಿರ್ದೇಶಿಸಲ್ಪಟ್ಟ ಸುಮಾರು 35 ರೋಗಗಳಲ್ಲದೆ, ಇನ್ನು ವಾತ ಮತ್ತು ಕಫಸಂಬಂಧವಾದ ಅನೇಕ ರೋಗಗಳು ಅದರಿಂದ ವಾಸಿಯಾಗುತ್ತದೆಂತ  ವಾಗ್ಭಟನ ಅಷ್ಟಾಂಗಹೃದಯದಲ್ಲಿ ಉಕ್ತವಾದದ್ದು ಹಾಸ್ಯಾಸ್ಪದ ಸಂಗತಿ ಎಂಬಂತೆ ಡಾಕ್ಟರ ಕೋಮನ್‌ನವರು ಎತ್ತಿಕೊಂಡಿದ್ದಾರೆ ಅಂಧವರ ಪಕ್ಷದವರು ತ್ರ್ಯಾಹಿಕ, ಚಾತುರ್ಧಿಕ, ಸಂತತ ಮತ್ತು ದುಷ್ಟ ಅಧವಾ ಕರಿಣರೂಪವಾದ (pernicious)