Lxvi ಉಪೋದ್ಘಾತ ಮಲೇರಿಯ ಎಂಬ ಜ್ವರಗಳು ನಾಲ್ಕು ಬೇರೆಬೇರೆ ಜೀವಬೀಜ ಅಧವಾ ಕ್ರಿಮಿಗಳಿಂದ ಹುಟ್ಟು ವಂಧವು ಮತ್ತು ಬೇರೆಬೇರೆ ಲಕ್ಷಣಗಳುಳ್ಳವು ಎಂತ ವರ್ಣಿಸಿ, ಅವುಗಳಿಗೆಲ್ಲಾ ಕ್ವಿನೀನು ಒಂದೇ ಔಷಧ ಎಂತ ಸಾಧಿಸುವದು ಅಸಂಬದ್ಧವಲ್ಲವೋ? ಟಾಯ್ಫೆಯ್ಡಿನಲ್ಲಿಯೂ, ರೆಮಿ ಟ್ವೆಂಟ ಎಂಬ ಸಂತತಜ್ವರದಲ್ಲಿಯೂ, ಜ್ವರ ಹಿಂದಲ್ಲದೆ ಬೇರೆ ಯಾವ ಲಕ್ಷಣವಾದರೂ ಸ್ಥಿರವಲ್ಲ ಎಂದ ಮೇಲೆ ರೋಗವು ಜ್ವರವೇ ಎಂತ ಆಗಲಿಲ್ಲವೇ? ರೋಗದ ಹೆಸರು ಲಕ್ಷಣ ಖ್ಯಾಪಕವೋ, ನಿದಾನಖ್ಯಾಪಕವೋ? ನಿದಾನಖ್ಯಾಪಕವಾದರೆ ಆಲ್ಬ್ಯುಮೆನ್ಯುರಿಯ(albumenuria), ಡಾಯಬೆಟಿಸ್ (diabetes), ಗೌಟ್ (gout), ಜ್ಯೋಂಡಿಸ್ (Jaundice),ಮುಂತಾದ ಹೆಸರುಗಳ ಉಪಯೋಗವಿರುವದು ಯಾವ ನ್ಯಾಯದ ಮೇಲೆ? ಟಾಯ್ಫೆಯ್ಡ್ ಜ್ವರವು ಒಂದು ಜೀವಬೀಜ ಅಧವಾ ಕ್ರಿಮಿಯಿಂದ ಉಂಟಾಗುವಂಧಾದ್ದು ಮತ್ತು ಅದಕ್ಕೆ ಔಷಧವಿಲ್ಲ, ಆದರೆ ಆ ರೋಗದಿಂದ ಪೀಡಿತರಾದ ನೂರು ಮಂದಿಗಳಲ್ಲಿ 5 ಮಂದಿ, ಅಧವಾ ಅತ್ಯಂತ ಅಧಿಕವಾದರೆ 2೦ ಮಂದಿಗಿಂತ ಹೆಚ್ಚು ಸತ್ತದ್ದು ಯಾವ ಲೆಕ್ಕದಲ್ಲಿಯೂ ಕಂಡು ಬಂದದ್ದಿಲ್ಲ ಎಂದ ಮೇಲೆ ಸರಾಸರಿ ಮೇಲೆ 88 ಶತಾಂಶದ ರೋಗಿಗಳು ಔಷಧವಿಲ್ಲದೇನೇ ಮತ್ತು ಕ್ರಿಮಿ ಸಾಯದೆನೇ ಆ ರೋಗದಿಂದ ವಿಮೋಚನೆ ಹೊಂದುತ್ತಾರೆಂಬ ಊಹೆ ಸಹಜ ವಾಗಿ ಹುಟ್ಟತಕ್ಕದ್ದಲ್ಲವೋ? ಅದು ಅಹುದಾದರೆ ವಿಷಮಜ್ವರದಲ್ಲಿ ಮಾತ್ರ ಕ್ವಿನೀನನ್ನು ಕೊಟ್ಟು ನಿದಾನರೂಪವಾದ ಕ್ರಿಮಿಗಳನ್ನು ಸಂಹರಿಸದ ವಿನಾ ಜ್ವರ ಪರಿಹಾರವಾಗುವದಿಲ್ಲ ಎಂಬದಕ್ಕೆ ಏನು ಆಧಾರ? ವಿಷಮಜ್ವರವು ಸುಶ್ರುತಾದಿಗಳ ಕಾಲದಿಂದ ಇದ್ದದ್ದು ಮತ್ತು ಕ್ವಿನೀನಿನ ಉಪಯೋಗ ಇತ್ತೀಚೆಗೆ ಆರಂಭವಾದದ್ದು ಆಗಿರುತ್ತಾ, ಕ್ವಿನೀನು ಎನಾ ಆ ಜ್ವರವು ವಾಸಿ ಯಾಗುವದಿಲ್ಲ ಎಂಬದು ನಿಜವಾದರೆ, ಕ್ವಿನೀನನ್ನು ಕಂಡುಹಿಡಿಯುವದಕ್ಕೆ ಪೂರ್ವದಲ್ಲ ಬಹು ಸಹಸ್ರ ವರ್ಷಗಳ ವರೆಗೆ ಜನರು ಹ್ಯಾಗೆ ಆ ರೋಗದಿಂದ ಮುಕ್ತರಾದರು ಮತ್ತು ಕ್ವಿನೀನಿನ ಸಂಚಾರಕ್ಕೊಳಪಡದೆ ಈಗಲೂ ಇರುವ ಬಹು ಪ್ರದೇಶಗಳಲ್ಲಿ ಜನರು ಹ್ಯಾಗೆ ತಮ್ಮನ್ನು ಆ ರೋಗದಿಂದ ಕಾಪಾಡಿಕೊಳ್ಳುತ್ತಾರೆ? ಜ್ವರದ ಕ್ರಿಮಿ ದೇಹದಲ್ಲಿದ್ದಾಗ್ಯೂ ಜ್ವರ ಬಾರದಿರುವದು, ಜ್ವರ ಬಂದು ವಾಸಿಯಾಗಿ ಎಷ್ಟು ಕ್ವಿನೀನನ್ನು ಸೇವಿಸಿದಾಗ್ಯೂ ಆ ಕ್ರಿಮಿ ದೇಹದಲ್ಲಿ ಕಾಣುವದು, ಒಂದು ಸೀಯಾಳವನ್ನು ಕುಡಿದ ದಿವಸ ಅಧವಾ ದೇಹಾಯಾಸ ಮಾಡಿಕೊಂಡ ದಿವಸ, ಅಧವಾ ಅವಲಕ್ಕಿ ಮೊದಲಾದ ಕೆಲವು ಪದಾರ್ಧಗಳನ್ನು ಸೇವಿಸಿದ ದಿವಸ. ಕ್ವಿನೀನಿನಿಂದ ವಾಸಿಯಾದ ವಿಷಮಜ್ವರವು ಪುನಃ ಕಾಣಿಸಿಕೊಳ್ಳುವದು, ಇಂಧಾದ ಕ್ಕೆಲ್ಲ ಸಮಾಧಾನವೇನು? ಕ್ವಿನೀನು ಕ್ರಿಮಿಗಳನ್ನು ನಾಶಮಾಡಿ ಜ್ವರವನ್ನು ಪರಿಹರಿಸುವದು ನಿಶ್ಚಯವಾದರೆ, ಅದನ್ನು ಅದೇ ಜ್ವರದ ಲಕ್ಷಣವಾಗಿ ಕಂಡ ಕೆಲವು ಉಪದ್ರವಗಳು ಇರು ವಾಗ್ಗೆ ಮತ್ತು ಜ್ವರದ ವೇಗ ಹೆಚ್ಚು ಇರುವಾಗ್ಗೆ ಇತ್ಯಾದಿ ಕೆಲವು ಸಂದರ್ಭಗಳಲ್ಲಿ ಕೊಡ ಕೂಡದು, ಮತ್ತು ಪ್ರಮಾಣದಲ್ಲಿ ಹೆಚ್ಚುಕಡಿಮೆ ಮಾಡಬೇಕು, ಎಂಬಂಧಾದ್ದೆಲ್ಲ ಯಾಕೆ? ರೋಗದ ನಿದಾನಕ್ಕೆ ತಕ್ಕ ಪರಿಹಾರ ಮಾಡಿದ ಕೂಡಲೇ ಅದರ ಲಕ್ಷಣಗಳು ಸಹ ವಾಸಿಯಾಗ ಬೇಕಲ್ಲವೋ? ಕ್ವಿನೀನಿನ ಸೇವನದಿಂದ ದೋಷ ಬರುವದುಂಟೋ? ಇದ್ದರೆ, ಯಾವ ದೋಷಗಳು, ಯಾವ ಕಾರಣದಿಂದ ಬರುತ್ತವೆ” ಕ್ವಿನೀನು ಜ್ವರದ ಕ್ರಿಮಿಗಳನ್ನು ಕೊಲ್ಲುವದಲ್ಲದೆ, ಬೇರೆ ಏನು ಕೆಲಸವನ್ನು ಶರೀರದಲ್ಲಿ ಮಾಡುತ್ತದೆ? ಜ್ವರದಿಂದ ಮುಕ್ತನಾದವನು 3 ವರ್ಷಗಳ ವರೆಗೆ ಪ್ರತಿ ಆರು ತಿಂಗಳಲ್ಲಿ ಕೆಲವು ದಿನ ಬಿಡದೆ ಕ್ವಿನೀನನ್ನು ಸೇವಿಸುವದು ಒಳ್ಳೇದು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.