ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LXXI ಉಪೋದ್ಘಾತ ಪ್ರಶಸ್ತ, ಜ್ವರಾರಂಭದಲ್ಲಿ ರೋಗಿಯು ಬಲಿಷ್ಠನಾಗಿದ್ದರೆ ಒಂದು ರಾತ್ರಿ, ಮೂರು ರಾತ್ರಿ, ಅಧವಾ ಒಂದು ಹಗಲೂರಾತ್ರಿ ಬಾಯಾರಿಕೆಗೆ ಮಾತ್ರ ಕುಡಿಯುತ್ತಾ, ಲಂಘನಮಾಡುವದ ರಿಂದ ಜರರಾಗ್ನಿಯು ಆಹಾರವಿಲ್ಲದೆ ದೋಷಗಳನ್ನೇ ಪಚನಮಾಡಿ ಅನೇಕ ಜ್ವರಗಳಲ್ಲಿ ಆರೋ ಗ್ಯವನ್ನುಂಟುಮಾಡುವದು. ಆದರೆ ಲಂಘನವು ವಾತವನ್ನು ಪ್ರಕೋಪಮಾಡುತ್ತದಾದ್ದರಿಂದ, ವಾತದೋಷವೇ ಪ್ರಧಾನವಾಗಿದ್ದ ರೋಗಿಗೆ, ಮತ್ತು ಬಸುರಿ, ಬಾಲ, ವೃದ್ದ, ದುರ್ಬಲ ಮುಂತಾದ ವರ್ಗಗಳಿಗೆ ಸೇರಿದ ರೋಗಿಗಳಿಗೆ ಲಂಘನವು ಹಿತವಲ್ಲ. ಲಂಘನದಿಂದ ರೋ ಗಿಯ ಬಲ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಇಷ್ಟೇ ಅಲ್ಲದೆ ಸಾಮ (ಅಜೀರ್ಣ ವುಳ್ಳ), ನಿರಾಮ ಎಂಬ ಜ್ವರಭೇದವನ್ನೂ, ದೀಪನ, ಪಾಚನ, ಶಮನ ಎಂಬ ಔಷಧಭೇದ ಗಳನ್ನೂ, ಅವುಗಳನ್ನುಪಯೋಗಿಸುವದಕ್ಕೆ ಯುಕ್ತಕಾಲವನ್ನು ರೋಗಿಯ ಪರೀಕ್ಷೆಯಿಂದ ತಿಳಿ ಯುವ ಕ್ರಮವನ್ನೂ, ಇವೇ ಮುಂತಾದ ಅನೇಕ ಸೂಕ್ಷ್ಮ ವಿಚಾರಗಳನ್ನು ಸೂಚಿಸಿ, ಪ್ರತಿ ವರ್ಗದ ಜ್ವರಕ್ಕೆ ಪ್ರತ್ಯಪ್ರತ್ಯೇಕ ಔಷಧಯೋಗವನ್ನು ಬಹುವಿಧವಾಗಿ ಆಯುರ್ವೇದವು ಹೇಳುತ್ತದೆ ತರುಣಜ್ವರದಲ್ಲಿ ಔಷಧ ಕೊಡುವ ಅವಶ್ಯವಿದ್ದಲ್ಲಿ ಅದಕ್ಕೆ ಯುಕ್ತವಾಗಿ ಹೇಳಲ್ಪಟ್ಟ ಔಷಧಗಳೊಳಗೊಂದನ್ನೇ ಕೊಡತಕ್ಕದ್ದೆಂತಲೂ, ತರುಣಜ್ವರದಲ್ಲಿ ತೊಗರುರುಚಿ ಯುಳ್ಳ ಎಲ್ಲ ಕಷಾಯಗಳು ನಿಷಿದ್ದ ಮೆಂತಲೂ, ಜೈರಾತಿಸಾರದಲ್ಲಿ ಜ್ವರಕ್ಕೂ ಅತಿಸಾರಕ್ಕೂ ಪ್ರತ್ಯ ಪ್ರತ್ಯೇಕ ಚಿಕಿತ್ಸೆ ಮಾಡದೆ ಆ ಎರಡು ಲಕ್ಷಣಗಳಿಗೂ ಪ್ರತೀಕಾರವಾದ ಕಪಾಯಾದಿ ಯೋಗಗಳನ್ನೇ ಉಪಯೋಗಿಸತಕ್ಕದ್ದೆಂತಲೂ ಆಯುರ್ವೇದಗ್ರಂಧಗಳು ಹೇಳುತ್ತವೆ. ಜ್ವರವು ಎಲ್ಲಾ ರೋಗಗಳೊಳಗೆ ಅತಿ ಕಠಿನವಾದ್ದಾಗಿ ತಿಳಿದು, ಆಯುರ್ವೇದಗ್ರಂಧಕಾರರು ಅದರ ಚಿಕಿತ್ಸೆಯಲ್ಲಿ ಬಹು ಸೂಕ್ಷ್ಮ ವಿಚಾರಗಳನ್ನು ಮಾಡಿ, ಬಹು ಎಸ್ತಾರವಾಗಿ ಬರ ದಿದ್ದಾರೆ. ಒಟ್ಟಾರೆ ಜ್ವರದ ಚಿಕಿತ್ಸೆಯಲ್ಲಿ ನಮ್ಮ ಪಂಡಿತರು ತಮ್ಮ ಗ್ರಂಥಗಳಲ್ಲಲ್ಲದೆ ಪಾಶ್ಚಾತ್ಯ ವೈದ್ಯರಿಂದ ಕಲಿತುಕೊಳ್ಳಬೇಕಾದ ಅಂಶ ಯಾವದೂ ಕಾಣುವದಿಲ್ಲ. ಸನ್ನಿಪಾತಜ್ವರದ ಚಿಕಿತ್ಸೆಯಲ್ಲಿ ಬಹು ನಿಪುಣರೆಂತ ಪ್ರಸಿದ್ದಿ ಹೊಂದಿದ ಒಬ್ಬರು ಆಯುರ್ವೇದ ಪಂಡಿತರು ಸ್ವಲ್ಪ ಕಾಲಕ್ಕೆ ಪೂರ್ವದಲ್ಲಿ ಇದೇ ಊರಲ್ಲಿ ಇದ್ದ ಸಂಗತಿ ನಮಗೆ ಸ್ವತ: ತಿಳಿದದ್ದು. ಈಗಲೂ ಅಂಧಾ ಬುದ್ದಿಶಾಲಿಗಳು ಅಲ್ಲಲ್ಲಿಯಾದರೂ ಇಲ್ಲದೆ ಇರಲಾರರು. 24. ಆಯುರ್ವೇದಕ್ಕೆ ತ್ರಿದೋಷನ್ಯಾಯದ ಯಧಾರ್ಧತೆಯು ಬುನಾದಿಯಾಗಿದೆ ಎಂಬದು ನಿಸ್ಸಂಶಯವಾದ್ದು. ರೋಗಗಳ ಪರೀಕ್ಷೆ, ಔಷಧಗಳ ಜ್ಞಾನ, ಚಿಕಿತ್ಸಾ ಕ್ರಮ ಮುಂತಾದ ವೈದ್ಯದ ಎಲ್ಲಾ ಅಂಗಗಳ ವಿಚಾರದಲ್ಲಿ ಯೂ ಅದು ವ್ಯಾಪಿಸಿಕೊಂಡು ಉಂಟು. ತ್ರಿದೋಷವಿಯುಕ್ತವಾದ ಆಯುರ್ವೇದ ಎಂದರೆ ವರ್ಣಾಶ್ರಮಧರ್ಮವನ್ನೊ ಸ್ಪದ ಹಿಂದು ಎಂದಂತೆ ಅಸಂಗತ ವಚನವಾಗುವದು. ಅಂಧಾ ತ್ರಿದೋಷನ್ಯಾಯವು ಅಶಾಸ್ತ್ರೀಯ ಎಂತ ಪಾಶ್ಚಾತ್ಯ ಪಂಡಿತರು ಮಾತ್ರವಲ್ಲ, ಅವರ ಮತವನ್ನೇ ಆಧಾರವಾಗಿಟ್ಟುಕೊಂಡ ಕೆಲವರು ಭಾರತೀಯರು ಸಹ ಹೇಳತೊಡಗಿದ್ದಾರಾದ್ದರಿಂದ, ಅದರ ಕುರಿತು ಸ್ವಲ್ಪ ವಿಚಾರಮಾಡು ವದು ಅತ್ಯಗತ್ಯವಾಗಿದೆ. ತ್ರಿದೋಷನ್ಯಾಯದ ಪ್ರತಿಪಾದನಕ್ಕೆ ಉಪದೇಶ, ಪ್ರತ್ಯಕ್ಷ, ಉಪ ಮಾನ ಅನುಮಾನ, ಇವು ನಾಲ್ಕು ಸಾಧನಗಳೆಂತ ಉಕ್ತವಾಗಿದೆ. ಉಪದೇಶ ಎಂಬದು ವೇದ ಮತ್ತು ಸತ್ಯಕ ಗುಣಾಡ್ಯರೂ, ತ್ರಿಕಾಲಜ್ಞಾನಿಗಳೂ ಆಗಿದ್ದ ಮುನಿಗಳ ವಚನ, ಹಿಂದುಮತದಲ್ಲಿ ವಿಶ್ವಾಸವಿಲ್ಲದವರ ಸಮಾಧಾನಕ್ಕೆ ಉಪದೇಶ ಎಂಬ ಪ್ರಧಾನ ಸಾಧನವು