Lxxii ಉಪೋದ್ಘಾತ ನಿರರ್ಧಕ, ಆದಾಗ್ಯೂ, ಈ ಜಗತ್ತಿನಲ್ಲಿರುವ ಅನಂತವಾದ ಪಧಾರ್ಥಗಳ ಉಪಯೋಗ ವನ್ನು ಕ್ರಮಪಡಿಸುವದಕ್ಕೂ, ಸಂಖ್ಯಾತೀತವಾದ ಪ್ರಾಣಿಗಳ ಸುಖದುಃಖಗಳನ್ನು ಗೊತ್ತು ಮಾಡಿ, ದುಃಖವನ್ನು ಪರಿಹರಿಸಿ, ಸುಖಾಭಿವೃದ್ಧಿಯನ್ನು ಸಂಪಾದಿಸುವದಕ್ಕೂ ಸಾಧನವಾಗಿ ರುವ ಅತಿಮಹತ್ತಾದ ತ್ರಿದೋಷನ್ಯಾಯವು ಎಂಥಾ ಮನುಷ್ಯನಿಗಾದರೂ ಕಲ್ಪನೆಮಾಡು ವದಕ್ಕೆ ಸಾಧ್ಯವಾದ್ದಲ್ಲಿ ಎಂತಲೂ, ಅಂಧಾ ನ್ಯಾಯವನ್ನು ಸೃಷ್ಟಿಸುವ ಅಚಿಂತನೀಯವಾದ ಶ್ರಮವನ್ನು ಪಡಕೊಳ್ಳಲಿಕ್ಕೆ ಯಾವನಿಗಾದರೂ ನಿಮಿತ್ತವಿಲ್ಲ ಎಂತಲೂ, ಆ ನ್ಯಾಯವು ಸಿದ್ದಾಂತವಲ್ಲ ವಾಗಿದ್ದರೆ ಇಂಧಾ ಜನನಿಬಿಡವಾದ ಮಹಾ ದ್ವೀಪದಲ್ಲಿ ಅನಾದಿಯಿಂದ ಈ ವರೆಗೂ ಸರ್ವ ಪೂಜ್ಯವಾಗಿ ಆಚರಣದಲ್ಲಿರುತಿದಿರಲಿಲಾ ಎಂತಲೂ ವಿಚಾರವಂತರಾದ ಸರ್ವ ರಿಗೂ ತೋರಬೇಕು. ಜಗತ್ಪ್ರಸಿದ್ದವಾದ ವೇದಾಂತತತ್ವ ವಿಚಾರಕ್ಕೆ ಜನ್ಮಭೂಮಿಯಾದ ಈ ಭರತವರ್ಷದಲ್ಲಿ, ಆ ವಿಚಾರದಲ್ಲಿ ಬಹುಪಕ್ಷಗಳು ಇದ್ದೇ ಇದ್ದವಾದರೂ, ಈ ಆಯುರ್ವೇ ದೀಯ ತ್ರಿದೋಷನ್ಯಾಯಕ್ಕೆ ವಿಪಕ್ಷ ಎಂದೂ ಇರಲಿಲ್ಲ ಎಂಬ ತಧ್ಯವನ್ನು ಸಹ ಈಗಿನ ವಿಪಕ್ಷವಾದಿಗಳು ಆಲೋಚಿಸತಕ್ಕದ್ದು. ಆಯುರ್ವೇದವನ್ನು ಶೋಧಿಸಿ, ದೋಷಗಳನ್ನು ಹೊಗಗೊಳಿಸಿ ಪರಿಷ್ಕಾರಮಾಡಲಿಕ್ಕೆ ಬೇಕಾದಷ್ಟು ಬುದ್ಧಿ ಶಕ್ತಿಯುಳ್ಳ ಪಂಡಿತರು ಈ ದೇಶೀಯರಲ್ಲಿ ಚರಕಾದಿಗಳ ಕಾಲದನಂತರ ಜನಿಸದೆ ಅದರಲ್ಲಿ ದೋಷಗಳು ಉಳಿದಿರಬಹು ದೆಂತ ಕೆಲವರು ನೆನಸಬಹುದು. ಆದರೆ ರಸ, ಲೋಹ ಮುಂತಾದವುಗಳ ಭಸ್ಮಕ್ರಮ, ಮಾತ್ರಾದಿಗಳ ಉಪಯೋಗಕ್ರಮ, ನಾಡೀಪರೀಕ್ಷೆ, ಅರ್ಕ (arrack, splits) ಗಳಾಗಿ ಔಷಧಗಳನ್ನು ಉಪಯೋಗಿಸುವ ವಿಧಾನ ಮುಂತಾದ ಸೂಕ್ಷ್ಮ ವಿಚಾರಪರವಾದ ಅನೇಕ ಉಪಯುಕ್ತ ಅವಯವಗಳನ್ನು ಆಯುರ್ವೇದಕ್ಕೆ ಕಾಲಾಂತರಗಳಲ್ಲಿ ಕೂಡಿಸಿ, ಅದನ್ನು ಅಭಿವೃದ್ಧಿಗೊಳಿಸಿದ್ದು ಕಾಣುತ್ತದೆ. ಹಸ್ತಿನಾಪುರದ ಸಮೀಪದಲ್ಲಿರುವ ಕುತುಬ್ ಎಂಬ ಮಹಜೀದಿಯಲ್ಲಿ ನೆಲದಿಂದ ಮೂವತ್ತು ಅಡಿ ಎತ್ತರವಾದ ಸ್ಥಾನದಲ್ಲಿ ಸ್ಥಾಪಿತವಾದ ಆರ್ವತ್ತು ಅಡಿ ಎತ್ತರದ ಪರಿಷ್ಕೃತ ಕಬ್ಬಿಣದ ಕಂಬದಲ್ಲಿ ಸಂಸ್ಕೃತಭಾಷೆಯಲ್ಲಿ ನಾಲ್ಕನೇ *Article by 1 ಶತಮಾನದ ಶಾಸನವಿರುತ್ತದೆಂತಲೂ, ಅಂಧಾ ಕಂಬವನ್ನು ಈಗಿನ ಮಹ S Natarajan, ದ್ಯಂತ್ರಗಳ ಸಹಾಯದಿಂದಲೂ ತಯಾರಿಸುವದು ಸುಲಭವಲ್ಲ ಎಂತಲೂ M A , New Indtd 811pqyle ತಿಳಿದು, ಪಾಶ್ಚಾತ್ಯ ರಸಾಯನಶಾಸ್ತ್ರ ವಿದ್ವಾಂಸರಾದ ಸರ್ ಎಚ್, ಇ. ment of ರೊಸೊ ದೊರೆಗಳು ಆಗಿನ ಹಿಂದುಗಳ ಬುದ್ದಿ ಚಮತ್ಕಾರಕ್ಕೆ ಆಶರ್ಯ 18 8 1921 ಪಡುತ್ತಿದ್ದಾರೆಂತ ಒಂದು ವರ್ತಮಾನಪತ್ರಪ್ರಕಟಿತವಾದ ಲೇಖನದಿಂದ ಕಾಣುತ್ತದೆ. ಅಂಕಗಣಿತ, ಬೀಜಗಣಿತ, ಲೀಲಾವತಿ ಮುಂತಾದ ಮಹಾ ಗಣಿತಶಾಸ್ತ್ರ ಗಳನ್ನು ಪರಿಷ್ಕರಿಸಿ, ಅವುಗಳಿಂದ ತಿಳಿಯತಕ್ಕ ಚಂದ್ರಾದಿ ಗ್ರಹಗಳ ಗತಿಕ್ರಮಗಳ ಫಲವಾದ ಮಹಾನಕ್ಷತ್ರ, ನಿತ್ಯ ನಕ್ಷತ್ರ, ಶುಕ್ರಾದಿ ಗ್ರಹಗಳ ಉದಯಾಸ್ತಗಳ, ಗ್ರಹಣ ಮುಂತಾದ ಯೋಗಗಳನ್ನು ವಿದ್ಯಾವಂತರೆನಿಸಿಕೊಳ್ಳದ ಪಂಚಾಂಗಕಾರರು, ಅಗತ್ಯವುಳ್ಳ ಗಣಿತವನ್ನು ಕವಡೆಗಳಿಂದಲೇ ಮಾಡಿ, ನಿಶ್ಚಯಿಸಿ, ಜನಸಾಮಾನ್ಯದ ಉಪಯೋಗಕ್ಕೆ ಬೇಕಾದ ವಿವರ ಗಳನ್ನೆಲ್ಲಾ ತಿಳಿಸುವ ಹಾಗಿನ ಮಹಚ್ಚಮತ್ಕಾರದ ಕ್ರಮವನ್ನು ಕಂಡುಹಿಡಿದ ನಮ್ಮ ಪೂರ್ವಿಕರ ಪಾಂಡಿತ್ಯ ವಿಶೇಷ ವನ್ನು ನಮ್ಮ ವಾಚಕರ ನೆನಪಿಗೆ ತರಬಹುದು. ಮೇಲೆ ಪ್ರಸ್ತಾಪಿಸಿದ ಮಾತ್ರಾಕ್ರಮದ ನಿರ್ಮಾಣವೇ ನಮ್ಮ ಪೂರ್ವಿಕರ ಮಹತ್ಪಾಂಡಿತ್ಯವನ್ನು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.