22
ವಾದ ವಿಕ್ರಮವೀರವು ಅಲ್ಲಿಯೇ ಗೋಚರವಾಯಿತು. ಇನ್ನು ಭೋಜನ ಸಂತೋಷಕ್ಕೆ ಸೀಮೆಯೆಲ್ಲಿಯದು? ಕೂಡಲೆ ಪುರೋಹಿತರನ್ನು ಕರೆಯಿಸಿ ಆಭದ್ರಪೀಠಕ್ಕೆ ಪೂಜೆಮಾಡಿಸಿ, ಶುಭಮುಹೂರ್ತದಲ್ಲಿ ವಾದ್ಯ ವೈಭವಗಳೊಡನೆ ಅದನ್ನು ತನ್ನೂರಿಗೆ ಹೊರೆಸಿಕೊಂಡು ಹೋದನು. ಅಲ್ಲಿ ಅದನ್ನು ಭದ್ರವಾದ ಸ್ಥಳದಲ್ಲಿರಿಸಿ, ಬಲು ಜಾಗಗೂಕರಾದ ಕಾವಲುಗಾರರು ಅದನ್ನು ಕಾದಿರುವಂತೆ ನಿಯಮಿಸಿದನು. ***
ಧಾರಾನಗರದಲ್ಲಿ ಈದಿನ ಮಹೋತ್ಸವ. ಊರನ್ನೆಲ್ಲಾ ತೋರಣಗಳಿಂದಲೂ ಧ್ವಜಪತಾಕೆಗಳಿಂದಲೂ ಸಿಂಗರಿಸಿರುವರು. ಎಲ್ಲಿನೋಡಿದರೂ ಉತ್ಸಾಹ, ಎಲ್ಲಿ ನೋಡಿದರೂ ಕೋಲಾಹಲ. ಜನರು ಒಳ್ಳೆಯ ಉಡುಪು ತೊಡಪುಗಳನ್ನಿಟ್ಟುಕೊಂಡು, ಸಡಗರದಿಂದ ತಿರುಗುತಲಿರುವರು. ಹುಡುಗರು ಗುಂಪು ಗಟ್ಟಿಕ್ಕೊಂಡು ಹಾಡುತ್ತಾ, ಓಡುತ್ತಾ, ಕುಣಿಯುತ್ತಾ, ಗದ್ದಲ ಮಾಡುತ್ತಿರುವರು. ರಾಜಬೀಧಿಯಲ್ಲಿ ಜನರು ಇಕ್ಕಟ್ಟಾಗಿ ಸೇರಿ, ಕಿಕ್ಕರಿಸುತ್ತಿರುವರು. ಅರಮನೆಯ, ಮುಂದಂತೂ ಸೂಜಿಯ ಮೊನೆಯಷ್ಟು ಸ್ಥಳವೂ ಬಿಡುವಿಲ್ಲ. ಜನರು ಒಳಕ್ಕೆ ಹೋಗುತ್ತಲೇ ಇರುವರು. ಇಷ್ಟೊಂದು ಸಂಭ್ರಮಕ್ಕೆ ಕಾರಣವೇನೆಂದರೆ, ಈದಿನ ಭೋಜಮಹಾರಾಜನು ನೂತನ ಸಿಂಹಾಸನವನ್ನು ಹತ್ತವನು. ಇದಕ್ಕಾಗಿ ದೇಶದೇಶಗಳಿಂದ ರಾಜಾಧಿರಾಜರುಗಳು, ಮಹಾರಾಜರೂ, ಕವಿಗಳೂ ಗಾಯ