ಈ ಪುಟವನ್ನು ಪ್ರಕಟಿಸಲಾಗಿದೆ

23

ಕರೂ ಬಂದು ಭೋಜಸಭೆಯಲ್ಲಿ ನೆರೆದಿರುವರು. ಬ್ರಾಹ್ಮಣರಿಗೂ ಬಡಬಗ್ಗರಿಗೂ ಯಥೇಚ್ಛವಾಗಿ ಅನ್ನ ದಾನ ವ ಸದಾನಗಳು ನಡೆಯುತ್ತಲಿರುವವು. ಓಲಗದ ವರು ಆದರದಿಂದ ಇಂಪಾದ ವಾದ್ಯಗಳನ್ನು ನುಡಿಯಿ ಸುತಲಿರುವರು.

ಸಿಂಹಾಸನಾರೋಹಣದ ಮುಹೂರ್ತವು ಸಮೀಪಿಸಿತು. ಸಿಂಹಾಸನಕ್ಕೆ ಶಾಸ್ತ್ರನುಸಾರವಾಗಿ ಪೂಜೆ ಪುನಃ ಪೂಜೆಗಳಾದವು. ಬ್ರಾಹ್ಮಣರಿಗೆ ಗೋದಾನ ಭೂದಾನ ಹಿರಣ್ಯದಾನಗಳು ಧಾರಾಳವಾಗಿ ದೊರೆತವು. ಗಂಧ ಪುಷ್ಪ ತಾಂಬೂಲಾದಿಗಳಿಂದ ಸಭೆಯವರೆಲ್ಲರೂ ಸುಂತುಷ್ಟರಾದರು. ಬ್ರಾಹ್ಮಣರಾಶೀರ್ವದಿಸುತ್ತಿರಲು, ವೈತಾಳಕರು ಪರಾಕು ಹೇಳುತ್ತಿರಲು, ವಂದಿಗಳು ಬಿರುದಾವಳಿಗಳನ್ನು ಹಾಡುತ್ತಿರಲು, ಸಾಮಂತರಾಜಗೂ ಪ್ರಜೆಗಳೂ ಜಯಜಯ ವೆನ್ನು ತಿರಲು ಭೋಜಮಹಾರಾಜನ. ಆತುರದಿಂದ ಎದ್ದು, ಸಭೆಯ ಅನುಮತಿಯನ್ನು ಪಡೆದು, ಸಿಂಹಪೀ ಠಕ್ಕೆ ನಮಸ್ಕರಿಸಿ, ಎಲ್ಲರೂ ಎವೆಯಿಕ್ಕದೆ ನೋಡುತ್ತಿಲಾಗಿ ಬಲಗಾಲನ್ನೆತ್ತಿ ಗಂಭೀರ ಭಾವದಿಂದ ಸಿಂಹಾಸನದ ಮೊದಲನೆಯ ಮೆಟ್ಟಲ ಮೇಲಿಟ್ಟನು. ಅಹಹಾ! ಅದೇನಾಶ್ಚರ್ಯ! ಆತನ ಹೆಬ್ಬೆಟ್ಟು ಸೋಸಾನದ ಮೇಲೆ ಕೆತ್ತಲ್ಪಟ್ಟಿದ್ದ ಪ್ರತಿಮೆಗೆ ಸೋಕಿದೊಡನೆಯೆ. ಅದು "ನಿಲ್ಲು" ಎಂದಿತು! ರಾಜನು ಸ್ತಬ್ದನಾದನು: ಎಲ್ಲರೂ ಸ್ಥಬ್ದರಾದರು. ಕೆಲವು ನಿಮಿಷಗ