ಈ ಪುಟವನ್ನು ಪ್ರಕಟಿಸಲಾಗಿದೆ

25

ಬಿದ್ದಿತ್ತು. ಆದರೂ ದೇವಿಯು ಅವನಲ್ಲಿ ಪ್ರಸನ್ನಳಾಗಲಿಲ್ಲ ಆದಿಪ್ರನು ಏಕಕಿಯಾಗಿ, ಯಾರೊಂದಿಗೂ ಮಾತನಾಡದೆ ಒಣಗಿದ ದೇಹದಿಂದಲೂ ಕುಗ್ಗಿದ ಮನಸ್ಸಿನಿಂದಲೂ ಹೋಮ ಮಾಡುತ್ತಲೇ ಇದ್ದನು. ಈ ಸಮಾಚಾರವು ಚಾರರಮೂಲಕ ವಿಕ್ರಮಾದಿತ್ಯನ ಕಿವಿಯನ್ನು ಮುಟ್ಟಿತು. ಆತನು ಕೂಡಲೇ ಹೊರಟು, ಆದಿಪ್ರನಬಳಿ ಸೇರಿ, ತಾನೂ ದೇವಿಯನ್ನು ಪ್ರಾರ್ಥಿಸಿ ಕಡೆಗೆ ಆಕೆಯು ಪ್ರತ್ಯಕ್ಷಳಾಗುವುದಕ್ಕೋಸ್ಕರ ತನ್ನ ದೇಹವನ್ನೆ ಹೋಮದಲ್ಲಿ ಅರ್ಪಿಸುವುದಾಗಿ ಹೇಳಿ, ಕತ್ತಿಯನ್ನೆಳೆದು ತನ್ನ ಕೊರಳಮೇಲೆ ಹೊಡೆದುಕೊಂಡನು. ಏಟು ತಾಕುವುದರೊಳಗಾಗಿ ದೇವತೆಯು ಸಾಕ್ಷಾತ್ಆಗಿ ನಿಂತು " ರಾಜನೆ, ನಿನ್ನ ದೃಢ ಮನಸ್ಸಿಗೆ ಮೆಚ್ಚಿದೆನು. ಈ ಬ್ರಾಹ್ಮಣನಿಗೆ ಭಕ್ತಿಯಿದ್ದರೂ ಅದು ಚಂಚಲವಾದುದು, ನಿನಗಿರುವ ಧಿರಬುದ್ಧಿಯು ಅವನಿಗಿಲ್ಲ ಆದುದರಿಂದಲೇ ನಾನು ಅವನಲ್ಲಿ ಒಲಿಯಲಿಲ್ಲ. ನಿನಗೆ ಬೇಕಾದ ವರವನ್ನು ಕೇಳು?"ಎಂದಳು. ವಿಕ್ರಮನು ತಾಯಿ, ಈ ಬ್ರಾಹ್ಮಣನ ಇಷ್ಟವನ್ನು ನೆರವೇರಿಸಿ, ಕಷ್ಟವನ್ನು ನೀಗು. ಅದೆ ನನ್ನಿಷ್ಟವು "ಎಂದನು, ಅಂಬಿಕೆಯು ವಿಕ್ರಮನ ಪರೋಪಕಾರ ಬುದ್ದಿಯಿಂದ ಮತ್ತಷ್ಟು ಸಂತುಷ್ಟಳಾಗಿ ಆತನನ್ನಾಶೀರ್ವದಿಸಿ, ವಿಪ್ರನಲ್ಲಿಯೂ ಅನುಗ್ರಹಿಸಿದಳು, ಏಕಮನಲ್ಲಿದ್ದ ಇಂತಹ ಧೈರ್ಯ ಔದಾರ್ಯಗಳು ನಿನ್ನಲ್ಲಿರುವುದೆ?

ಭೋಜನು ನಿರುತ್ತರನಾದನು.

ಇನ್ನೊಂದುಸಲ ಭೋಜನು ವಿಕ್ರಮಪೀಠರೋಹಿಸ ಬಂದಾಗ ಮೂರನೆಯ ಸೋಪಾನದ ಮೇಲಿನ ಪಾಂಚಾಲಿಕೆಯು ಹೀಗೆಂದಿತು:

"ಎಲೈ ರಾಜನೆ, ವಿಕ್ರಮರಾಜನು ಒಂದು ಕಾಲದಲ್ಲಿ

4