ಈ ಪುಟವನ್ನು ಪ್ರಕಟಿಸಲಾಗಿದೆ

26

ಮಹಾಯಜ್ಞವೊಂದನ್ನು ಉಪಕ್ರಮಿಸಿ ಆ ಸಮಯಕ್ಕೆ ಸಮುದ್ರ ರಾಜನನ್ನು ಕರೆತರಲು ಒಬ್ಬ ಬ್ರಾಹ್ಮಣನನ್ನು ಕಳುಹಿಸಿ ಕೊಟ್ಟನು. ಆ ಬ್ರಾಹ್ಮಣನು ಸಮುದ್ರ ತೀರವನ್ನು ಸೇರಿ, ಸಮುದ್ರನನ್ನು ಸ್ತುತಿಸಿ, ವಿಕ್ರಮನ ಬಿನ್ನಪವನ್ನು ವಿವರಿಸಿದನು. ಸಾಗರನು ವಿಕ್ರಮನನು ಮಾಡಿದ ಮರ್ಯಾದೆಯಿಂದ ಸಂತೋಷ ಹೊಂದಿ, ತನ್ನ ಅನುಗ್ರಹವನ್ನು ತೋರಿಸುವುದಕ್ಕಾಗಿ ನಾಲ್ಕು ರತ್ನಗಳನ್ನು ಬ್ರಾಹ್ಮಣನ ಕೈಯಲ್ಲಿ ಕೊಟ್ಟು ಆತನಿಗೆ ಕಳುಹಿಸಿದನು, ಅವುಗಳಲ್ಲಿ ಒಂದು ಬೇಕಾದ ಚಿನ್ನ ರನ್ನಗಳನ್ನು ಕೂಡ ಬಲ್ಲುದು; ಎರಡನೆಯದು ತಿಂಡಿತೀರ್ಥಗಳನ್ನು ಕೊಡಬಲ್ಲುದು; ಮೂರನೆಯದು ಆನೆ ಕುದರೆ ಮುಂತಾದುವುಗಳನ್ನು ಕೊಡತಕ್ಕುದು; ನಾಲ್ಕನೆಯದು ಒಡವೆ ವಸ್ತ್ರ ಧನ ಕೊಡಬಲ್ಲುದು. ಈರ ಮಣಿಗಳನ್ನು ಬ್ರಾಹ್ಮಣನು ತರುವವೇಳೆಗೆ ಯಜ್ಞವು ಮು ಗಿದುಹೊತ್ತು: ವಿಕ್ರಮನು ಆಬ್ರಾಹ್ಮಣನಿಗೆ "ಮತ್ತೇನ ಕೊಡುವುದಕ್ಕೂ ತೋರದೆ, ಆತ್ಮಗಳಲ್ಲಿ ಬೇಕಾದಒಂದನ್ನು ತೆಗೆದುಕೊಳ್ಳ ಹೇಳಿದನು. ಆಬ್ರಾಹ್ಮಣನ ಮನೆಯವರಾದರೋ ಒಬ್ಬೊಬ್ಬರು ಒಂದೊಂದು ಬೇಕೆಂದು ಮುಷ್ಕರ ಹಿಡಿದರು. ಇದುವಿಕಮನಿಗೆ ತಿಳಿಯಲು ಆತನು ಆ ನಾಲ್ಕು ಮಣಿಗಳನ್ನೂ ಬ್ರಾಹ್ಮಣಸಿಗೆ ಕೊಟ್ಟುಬಿಟ್ಟನು. ಹೇಭೋಜಪ್ರಭೆ ಇಂತಹ ಔದಾರ್ಯವು ನಿನ್ನಲ್ಲುಂಟೆ? "

ಭೋಜನಿಂದ ಮಾತೇ ಹೊರಡಲಿಲ್ಲ.

ಭೋಜನು ನಾಲ್ಕನೆಯಸಾರಿ ವಿಕ್ರಮಪೀಠವನ್ನಾಕ್ರಮಿಸಲು ಉಜ್ಜುಗಿಸಿದನು. ಆಗ ನಾಲ್ಕನೆಯ ಪುತ್ಥಳಿಯು ಹೀಗೆಂದಿತು

ವಿಕ್ರಮನೊಂದುವೇಳೆ ಬೇಟೆಗೆ ಹೋಗಿ, ಅಡವಿಯಲ್ಲಿ