ಈ ಪುಟವನ್ನು ಪ್ರಕಟಿಸಲಾಗಿದೆ

28

"ಒಂದು ಸಮಯದಲ್ಲಿ ವಿಕ್ರಮಭೂಪನು ಬಹುಬೆಲೆಯುಳ ಹತ್ತು ರತ್ನಗಳನ್ನು ಎಂಟು ದಿನಗಳೊಳಗಾಗಿ ಕೋಡುತಾರೆಂದು ತನ್ನ ಭ್ರತ್ಯನೊಬ್ಬನನ್ನು ದೂರದೇಶದಲ್ಲಿದ್ದ ರತ್ನ ವ್ಯಾಪಾರಿಯ ಬಳಿಗೆ ಕಳುಹಿಸಿದನು. ಆಭ್ರತ್ಯನುಹೊಗಿ ರತ್ನಗಳನ್ನು ಕೊಂಡು ಹಿಂದಿರುಗಿ ಬರುವಾಗ”, ವಿಶೇಷ ಮಳೆ ಬಿದ್ದು ದಾರಿಯಲ್ಲಿ ಅಡ್ಡವಾಗಿದ್ದ ನದಿಯು ಉಕ್ಕಿ ಹರಿಯುತ್ತಿತ್ತು. ಹೊಳೆಯನ್ನು ದಾಟಿಸೆಂದು ಅಂಬಿಗನನ್ನು ಕೇಳಿದನು. ಅವನು ಆಗಲಾರದೆಂದು ಹೇಳಿದನು, ಬೃತ್ಯನು ತಾನು ವಹಿಸಿದ್ದ ರಾಜಕಾರ್ಯವನ್ನು ವಿವರಿಸಿದನು. ಅದಕ್ಕವನು ಹತ್ತುರತ್ನಗಳಲ್ಲಿ ಐದನ್ನು ತನಗೆ ಕೊಟ್ಟರೆ ಹರಿಗೊಲ ನಡಿಸುವದಾಗಿ ಹೇಳಿದನು. ಕಾಲವು ಮಿಂಚಿ ಹೋಗುವುದೆಂಬ ಭಯದಿಂದ ರಾಜಭ್ಯತ್ಯನು ಅದಕೊಪ್ಪಿ, ಅಂಬಿಗರವನಿಗೆ ಐದು ಮನೆಗಳನ್ನು ಕೊಟ್ಟು ಉಳಿದವನ್ನು ದೊರೆಗೊಪ್ಪಿಸಿ, ಆದಸಂಗತಿಯನ್ನು ಹೇಳಿದನು. ವಿಕ್ರಮನು ಅವನ ಕಾಲ'ನಿಯಮವನ್ನು ಮುಚ್ಚಿ ಆ ಐದು ರತ್ನಗಳನ್ನು ಬೃತ್ಯನಿಗೆ ಬಹುಮಾನವಾಗಿ ಕೊಟ್ಟುಬಿಟ್ಟನು. ಹೇಳೋ ಜಭೂ ಕತೆ, ಈಬಗೆಯ ಗುಣವು ತಮ್ಮಲ್ಲಿರುವುದೋ ? ?

ಯಥಾ ಪ್ರಕಾರ ಭೋಜನು ಅವಾಕ್. ಆರನೆಯ ಗೊಂಬೆಯು ಭೋಜನಿಗೆ ಹೇಳಿದ ಕಥೆ ಯೆಂತೆಂದರೆ:

"ವಿಕ್ರಮನು ಒಂದಾನೊಂದುವೇಳೆ ವನವಿಹಾರದಲ್ಲಿದ್ದಾಗ ಒಬ್ಬಾನೊಬ್ಬ ಬ್ರಹ್ಮಚಾರಿಯು ಅದನ್ನು ಕಂಡು ರಾಜನಲ್ಲಿಗೆ ಹೋಗಿ, '"ಎಲೈ ರಾಜನ, ಹುಟ್ಟಿದಾಗಿನಿಂದಲೂ ವ್ರತೋಪವಾಸಗಳನ್ನು ಮಾಡಿ ಬಳಲಿರುವೆನು' ಸಂಸಾರಸುಖದಲ್ಲಿ ನನಗೆ ಈಗ ಅಪೆಕ್ಷೆ ಹುಟ್ಟಿರುವುದು, ಅದನ್ನಿಡೇರಿಸಲು ನಿನಗಿಂತಲೂ