ಈ ಪುಟವನ್ನು ಪ್ರಕಟಿಸಲಾಗಿದೆ

29

ಶಕ್ತರಾರು? ಎಂದು ವಿನಯದಿಂದ ಬೇಡಿದನು. ವಿಕ್ರಮನು ಆತನಿಗೆ ಒಂದು' ಗ್ರಾಮವನ್ನೇ ದಾನವಾಗಿಕೊಟ್ಟು, ಆತನ ವಿವಾಹಕ್ಕೂ ಸುಖಜೀವನಕ ತಕ್ಕ ಅನುಕೂಲ್ಯಗಳನ್ನು ಒದಗಿಸಿಕೊಟ್ಟನು. ಇಂತಹ ಕಾರ್ಯಗಳನ್ನು ತಾವೆಷ್ಟು ಮಾಡಿರುವಿರಿ?

ಭೋಜನು ಏನೂ ಹೇಳಲಿಲ್ಲ.

ಏಳನೆಯ ಸಲ ಭಂಜಿಕೆಯು ನುಡಿದ ವೃತ್ತಾಂ ತವೇನೆಂದರೆ:

"ಪಶ್ಚಿಮ ಸಮುದ್ರದಲ್ಲೊಂದು ದ್ವೀಪಉಂಟು, ಅದರಲ್ಲೊಂದು ಪರ್ವತದಮೇಲೆ ಭುವನೆಶ್ವರಿ ದೇವಿಯ ಆಲಯ ವುಂಟು ಪೂರ್ವಕಾಲದಲ್ಲಿ, ಅದರಲ್ಲಿನ ದೇವತಾ ವಿಗ್ರಹದ ಪಕ್ಕ ದಲ್ಲಿ, ತಲೆಯಿಲ್ಲದ ಸ್ತ್ರೀದೇಹ ವೊಂದೂ ಪುರುಷ ದೇಹವೊಂದೂ ಇದ್ದುವು. ಅಲ್ಲಿ ಗೋಡೆಯ ಮೇಲೆ "ಪರೋಪಕಾರಿಯಾದ ಮಹಾಪುರುಷನು ತನ್ನ ಕೊರಳ ರಕ್ತದಿಂದ ಇದೇವಿಯನ್ನಾರಧಿಸಿದರೆ ಈ ಶರೀರಗಳು ಸಜೀವವಾಗುವುವು" ಎಂದು ಬರೆಯಲ್ಪಟ್ಟಿತ್ತು, ಈ ಸಂಗತಿಯನ್ನು ವಿಕ್ರಮಾದಿತ್ಯನು ಹೇಗೋ ಕೇಳಿ, ಆದೇವತಾಲಯವನ್ನು ಸೇರಿ, ದೇವತೆಗೆ ನಮಸ್ಕರಿಸಿ ರಕ್ತಕ್ಕೋಸ್ಕರ ಖಡ್ಗವನ್ನು ತನ್ನ ಕಂಠದೊಳಕ್ಕೆ ಹೊಗಿಸಿದನು. ಕೂಡಲೆ ದೇವಿಯು ಪ್ರಸನ್ನಳಾಗಿ, ಆಮುಂಡಗಳಿಗೆ ತಲೆಯನ್ನೂ ಜೀವವನ್ನೂ ಕೊಟ್ಟು, ಅವರನ್ನು ತಮ್ಮ ರಾಜ್ಯಕ್ಕೆ ಬಿಳ್ಕೋಟ್ಟು,ವಿಕ್ರಮನನ್ನೂ ಆಶೀರ್ವದಿಸಿದಳು. ವಿಕ್ರಮನ ಈ ನಾ ಹಸಪರೋಪಕಾರಗಳಿಗೆ ಸಮವಾದ ಗುಣಗಳು ತಮ್ಮಲಾವುವು?"

ಭೋಜನು ಮೂಕನಂತಿದ್ದನು.