32
ಳನ್ನು ನೀನಲ್ಲದೆ ಮತ್ತಾರೂ ಹೋಗಲಾಡಿಸಲಾರರು, ಈಗ ನಾನು ಮಹಾ ವ್ಯಾಧಿಯಲ್ಲಿ ನರಳುತ್ತಿರುವೆನು. ನನ್ನ ದೇಹವು ಯಾವ ಕಾರ್ಯಕ್ಕೂ ಉಪಯೋಗವಿಲ್ಲದೆ ಇದೆ. ನನ್ನ ಕಷ್ಟವನ್ನು ನೀಗಲು ನೀನೊಬ್ಬನೇ ಶಕ್ತನು "ಎಂದು ಮೊರೆಯಿಟ್ಟನು, ವಿಕ್ರಮನು ತಾನು ಸಂಪಾದಿಸಿದ್ದ ದಿವ್ಯಫಲವನ್ನು ತಡಮಾಡದೆ ಅವನಿಗೆ ಕೊಟ್ಟುಬಿಟ್ಟನು. ಭೋಜಮಹಾರಾಜರು ಹಾಗೇನಾದರೂ ಮಾಡಿರುವರೋ?"
ಭೋಜನು ತಲೆಬಾಗಿದನು, - ನಾಚಿಕೆಯಿಂದ ಲೋ ಏನೋ!
ಹನ್ನೊಂದನೆಯ ಸಂಚಾಲಿಕೆಯ ಹೇಳಿದುದೇನಂದರೆ
"ಪಲಾಶ ನಗರವೆಂಬ ಊರಿನ ಬಳಿ ಶೈವಾಲಕವೆಂಬ ಬೆಟ್ಟವಿರುವುದು. ಅದರಲ್ಲಿ ಒಬ್ಬ ರಾಕ್ಷಸನು ವಾಸವಾಗಿದ್ದು, ಆ ಊರಿನಲ್ಲಿದ್ದವರನ್ನು ಬೇಕಾದಂತೆ ಭಕ್ಷಿಸುತ್ತಿದ್ದನು. ಆ ಜನರು ಅವನಿಗೆ ಏನುಮಾಡುವುದಕ್ಕೂ ಶಕ್ತಿಯಿಲ್ಲದೆ, ತಮ್ಮನ್ನೆಲ್ಲರನ್ನೂ ರಾಕ್ಷಸನು ಸಿಕ್ಕಿದಂತೆ ಕೊಲ್ಲದಿರಬೇಕೆಂದೂ, ತಾವೇ ದಿನಕ್ಕೂನಂತೆ ಸರದಿಯ ಮೇರೆಗೆ ಅವನ ಆಹಾರಕ್ಕಾಗಿ ಹೋಗುವಂತೆಯ ಅವನಿಗೆ ಹೇಳಿಕಕ್ಕೊಂಡರು. ಅವನು ಹಾಗೆಯೇ ಒಪ್ಪಲು ಕೆಲವುದಿನ ಹಾಗೆಯೇ ನಡೆಯಿತು;-ಒಂದೊಂದು ದಿನ ಒಂದೊಂದು ಮನೆಯವರು ಕಳುಹುತ್ತಿದ್ದರು, ಒಂದು ದಿನ ಒಬ್ಬ ಮುದುಕನ ಮನೆಯ ಸರದಿ ಬಂತು, ಆ ಮನೆಯಲ್ಲಿದ್ದವರು ಒಬ್ಬ ಮುದುಕ, ಅವನ ಹೆಂಡತಿ ಮುದುಕಿ, ಅವನ ಮಗ ಹುಡುಗ ಮುದುಕನೇ ರಾಕ್ಷಸನಿಗೆ ಆಹಾರವಾಗಿ ಹೋದರೆ, ಮುದಕಿಯಾದ ಹೆಂಡತಿಯು ವಿಧವೆಯಾಗುವಳು ಮುದುಕಿಯು ಹೋದರೆ ಮಗನಿಗೆ ರಕ್ಷಕರಿಲ್ಲದೆ ಹೊಗುವರು, ಮಗನು ಹೋದರೆ