33
ವಂಕವೇನಾಶವಾಗುವುದು. ಈ ದುಃಖದಲ್ಲಿ ಅವರು ಹಿಂದೆ ಹದಿನೈ ದು ದಿನಗಳಿಂದಲೂ ಗೋಳಾಡುತ್ತಿದ್ದರು. ಇದನ್ನ ವಿಕ್ರಮನರಿತು,ಯಾರಿಗೂ ಹೇಳದಂತೆ, ತಾನೇ ಗೊತ್ತಾದ ಹೊತ್ತಿಗೆ ಮುಂಚೆಯೇ ಗೊತ್ತಾದ ಸ್ಥಳಕ್ಕೆ ಹೋಗಿ ರಾಕ್ಷಸನಿಗಾಗಿ ಕಾದಿದ್ದನು . ಅವನು ಬಂದು ಈತನನ್ನು ನೋಡಿ, ಈತನ ಲಕ್ಷಣಗಳಿಂದ ಈ ತನಾರೋ ಮಹಾಪುರುಷನೆಂದು ಬಗೆದು ಮಾತನಾಡಿಸಿದನು. ವಿಕ್ರಮನು ತನ್ನ ಹೆಸರನ್ನು ಹೇಳದೆ ರಾಕ್ಷಸನ ಕ್ರೂರಕರ್ಮವನ್ನು ದೂಪಿಸಿ, ನಡೆದಸಂಗತಿಯನ್ನು ವಿವರಿಸಿದನು ರಾಕ್ಷಸನು ಈತನ ಪರೋಪಕಾರ ಬುದ್ದಿಯಿಂದ ಮನಕರಗಿದವನಾಗಿ, ಅಲ್ಲಿಂದ ಮುಂದಕ್ಕೆ ಎಂದೆಂದಿಗೂ ಪಲಾಶನಗರದವರ ಗೋಚಿಗೇ ಹೋಗದೆ, ಯಾರಿಗೂ ಹಿಂಸೆ ಮಾಡದೆ ಇದ್ದನು.'"
***
ಹನ್ನೆರಡನೆಯ ಬೊಂಬೆಯು ವಿವರಿಸಿದ ಕಥೆ:-
"ಹಿಮಾಚಲದ ತಪ್ಪಲಿನಲ್ಲಿ ಒಂದು ನಗರ. ಆ ನಗರಕ್ಕೆ ಅನತಿದೂರದಲ್ಲಿ ಒಂದು ಬಿದಿರು ಮೆಳೆಗಳ ಕಾಡು, ಆ ಕಾಡಿನ ಮಧ್ಯಭಾಗದಿಂದ ಪ್ರತಿಅರ್ಧರಾತ್ರಿಯೂ ಆರ್ತಸ್ವರವು ಊರಿಗೆ ಕೆಳಬರುವುದು, ಆ ಸ್ವರವು ಒಬ್ಬ ಹೆಂಗಸಿನದು, ಆ ಹೆಂಗಸು ಯಾರೋ ಯಾರಿಗೂ ತಿಳಿಯದು ಯಾರಿಗೂ ಆ ಕಾಡನ್ನು ಬಳ ಹೊಕ್ಕು ನಿಜಸ್ಥಿತಿಯನ್ನು ಕಂಡುಹಿಡಿಯಲು ಧೈರ್ಯವಿಲ್ಲ. ಹೀಗೆ ಕೆಲವು ಕಾಲ ನಡೆದ ಮೇಲೆ, ಈ ಸಂಗತಿಯು ವಿಕ್ರಮನ ಕಿವಿಗೆ ಬಿತ್ತು ಆತನು ಕೂಡಲೆ ಉಜ್ಜಯಿನಿಯಿಂದ ಹೊರಟು ಆ ಅರಣ್ಯ ಮಧ್ಯವನ್ನು ಸೇರಿ, ಅರ್ಧರಾತ್ರಿಯಲ್ಲಿ ಅಲ್ಲಿ ಒಬ್ಬ ಹೆಂಗಸನ್ನು ಒಬ್ಬ ರಾಕ್ಷಸನು ಹಿಂಸಿಸುತ್ತಿದ್ದದ ಕಂಡು, ಆ ರಾಕ್ಷಸನನ್ನು ಕೊಂದನು ದೀನಸ್ವರದಿಂದ ಗೋಳಿಡುತ್ತಿದ್ದ ಆಹಂ