ಈ ಪುಟವನ್ನು ಪ್ರಕಟಿಸಲಾಗಿದೆ

34

ಗಸು ರಾಕ್ಷಸಸಂಹಾರದಿಂದ ಸಂತೋಷಿಸಿ ತನ್ನವತ್ತಂತಾವನ್ನು ರಾಜನಿಗೆ ತಿಳಿಸಿದಳು" ನಾನು ನನ್ನ ಪತಿಯನ್ನು ಪ್ರೀತಿಸದೆ ಆತನ ಇಷ್ಟಕ್ಕೆ ವಿರೋಧವಾಗಿ ನಡೆಯುತ್ತಿದ್ದ ಕಾರಣ, ಆತನು ಸಾಯುವ ಕಾಲದಲ್ಲಿ ನನ್ನನ್ನು ಈ ವನದಲ್ಲಿ ರಾಕ್ಷಸನ ಬಾಧೆಗೆ ಗುರಿಯಾಗುವಂತೆ ಶಪಿಸಿದನು. ಆಗ ನಾನು ಭಯಪಟ್ಟು ಆತನ ಪಾದಗಳಿಗೆ ರಗಿ ಮನ್ನಣೆಯನ್ನ ಬೇಡಿದೆನು, ಆತನು ಒಬ್ಬ ಮಹಾಪುರುಷನಿಂದ ನನಗೆ ಶಾಪವಿಮೋಚನೆ ಯಾದಿ ತೆಂದು ಹೇಳಿದನು. ಈಗ ನೀನು ರಾಕ್ಷಸಭಯದಿಂದ ನನ್ನನ್ನು ತಪ್ಪಿಸಿದೆ. ನೀನು ಮಹಾಪುರುಷನೇ ಸರಿ ಇನ್ನು ನಾನು ಈ ಹಾಳು ದೇಹವನ್ನು ಬಿಡುವೆನು. ನನ್ನಲ್ಲಿ ಚಿನ್ನದಿಂದ ತುಂಬಿದ ಒಂಭತ್ತ ದೊಡ್ಡ ಕೊಪ್ಪರಿಗೆಗಳಿವೆ, ಅದನ್ನು ನೀನೇ ದಯೆಯಿಂದ ಸ್ವೀಕರಿಸು" ಎಂದು ಅವಳು ಹೇಳುತ್ತಾ ಹರಣವನ್ನು ಬಿಟ್ಟಳು. ವಿಕ್ರಮನು ವಿಸ್ಮಿತನಾಗಿ, ಆ ಹೊನನ್ನೆಲ್ಲಾ ಧರ್ಮಕಾರ್ಯಗಳಿಗೆ ವಿನಿಯೋಗಿಸಿ, ಉಜ್ಜಯಿನಿಗೆ ಹಿಂದಿರುಗಿದನು"

ಈ ಕಥೆಯನ್ನು ಕೇಳಿ ಭೋಜನು ಅಂತಃಪುರಕ್ಕೆ ಹಿಂದಿರುಗಿದನು.

***

ಹದಿಮೂರನೆಯ ಪುತ್ಥಳಿಯ ಭೋಜನೊಡನೆ ಹೀಗೆಂದಿತು:____

"ಒಂದಾನೊಂದು ಸಲ ವಿಕ್ರಮರಾಜನು ತನ್ನ ರಾಜ್ಯದ ನಿಜ ಸ್ಥಿತಿಯನ್ನರಿಯಲು ವೇಷಧಾರಿಯಾಗಿ ದೇಶಸಂಚಾರ ಮಾಡುತ್ತಿದ್ದಾಗ, ಒಂದೂರಿನಲ್ಲಿ ಬಂದು ನದೀತೀರದಲ್ಲಿ ಕೆಲವು ಜನರು ಸೇ