ಈ ಪುಟವನ್ನು ಪ್ರಕಟಿಸಲಾಗಿದೆ

36

ಹದಿನಾಲ್ಕನೆಯ ಸಾಲಭಂಜಿಕೆಯು ಹೇಳಿದವೃತ್ತಾಂತ. "ಒಂದು ಸಂದರ್ಭದಲ್ಲಿ ಒಬ್ಬ ಯೋಗಿಶ್ವರನು ವಿಕ್ರಮರಾಜನಿಗೆ ಬಂದು ಶಿವಲಿಂಗವನ್ನು ಕೊಟ್ಟು ಇದನ್ನು ಭಕ್ತಿಯಿಂದ ಪೂಜಿಸು. ನಿನಗೆ ಬೇಕಾದ ವಸ್ತುಗಳೆಲ್ಲವನ್ನೂ ಇದುಕೊಡುವುದು' ಎಂದು ಹೇಳಿದನು ರಾಜನು ಅದನ್ನು ಸ್ವೀಕರಿಸಿದ ಕೆಲವು ಕಾಲದ ಮೇಲೆ ಒಬ್ಬ ಬ್ರಾಹ್ಮಣನು ಆತನಲ್ಲಿಗೆ ಬಂದು "ಅಯ್ಯಾ ನಾಲ್ಕೈದು ದಿನಗಳ ಕೆಳಗೆ ಯಾರೊ ನನ್ನ ಇಷ್ಟದೇವತಾ ಮೂರ್ತಿಯಾದ ಶಿವಲಿಂಗವನ್ನು ಅಪಹರಿಸಿದರು. ಆಗಿನಿಂದಲೂ ನಾನು ಉಪವಾಸವಾಗಿದ್ದೇನೆ . 'ಎಂದನು. ಕೂಡಲೆ ವಿಕ್ರಮನು ತನ್ನಲ್ಲಿದ್ದ ಈಶ್ವರಲಿಂಗವನ್ನು ಆತನಿಗೆ ಕೊಟ್ಟುಬಿಟ್ಟನು'.

ಭೋಜನು ಮನಸ್ಸಿನಲ್ಲಿ 'ವಿಕ್ರಮನೆಲ್ಲಿ ನಾನಿಲ್ಲಿ?' ಎಂದು ಅಂದುಕ್ಕೊಂಡು ಹಿಂದಿರುಗಿದನು.

***

ಹದಿನೈದನೆಯ ಪ್ರತಿಮೆಯು ಕಥಿಸಿದ ಬಗೆ:__

"ಒಂದು ನಗರದಲ್ಲಿ' ಒಬ್ಬ ಪ್ರಾಯದ ಹೆಂಗಸು ರಾಜ್ಯಭಾರ ಮಾಡುತ್ತಿದ್ದಳು, ಆಕೆಗಿನ್ನೂ ಮದುವೆಯಾಗಿರಲಿಲ್ಲ. ಆಕೆಯು ಚೆಲ್ವಿಕೆಗೆ ತೌರುಮನೆಯಿಂದ ಎಲ್ಲರೂ ಹೇಳುತ್ತಿದ್ದರು. ಆಕೆಯು ಒಂದು ದೊಡ್ಡ ಕಬ್ಬಿಣದ ಕೊಪ್ಪರಿಗೆಯಲ್ಲಿ ಎಣ್ಣೆಯನ್ನು ಕಾಸಿಸಿ, ಯಾರು ಅದರೊಳಕ್ಕೆ ಧೆರ್ರ್ಯದಿಂದ ಬೀಳುವನೋ? ಅವನನ್ನೆ ತಾನು ಮದುವೆಯಾಗುವುದಾಗಿ ಸಾರುತ್ತಿದ್ದಳು, ಈವರ್ತ ಮಾನವು ವಿಕ್ರಮನಿಗೆ ತಿಳಿಯಿತು, ಆತನು ಬಂದು ಆಕೆಯ ಮಾತಿನಂತೆ ಕಾದಣ್ಣೆಯ ಕಟಾಹದೊಳಕ್ಕೆಬಿದ್ದನು. ಅರೆಗಳಿಗೆ ಯೊಳಗಾಗಿ ಆತನ ದೇಹವೆಲ್ಲವೂ ಬೆಂದು ಮಾಂಸದ ಮುದ್ದೆಯಾ