37
ತು, ಆಗ ಕ್ರೂರಹೃದಯಳಾದ ಆ ಸ್ತ್ರೀಯು ಆ ಮುದ್ದೆಯ ನ್ನು ಈಚೆಗೆ ತೆಗೆದು, ಅದರ ಮೇಲೆ ಯಾವುದೋ ನೀರನ್ನು ಚೆ ದಳು, ಕೂಡಲೆ ವಿಕ್ರಮನು ತನ್ನ ಹಿಂದಿನ ಮನೋಹರರೂಪ ದಲ್ಲಿ ನಿಂತನು, ಆಕೆಯು ಆತನ ಧೈರ್ಯವನ್ನು ಕೊಂಡಾಡಿ, ಆತ ಕೊರಳಲ್ಲಿ ಹೂಸರವನ್ನು ಹಾಕಲು ಬಂದಳು. ವಿಕ್ರಮನು ಆಕೆಯನ್ನು ತಡೆಹದು, ತಾನು ಎಕಪಪತ್ನಿ ವ್ರತಸ್ಥನೆಂದು ಹೇಳಿ, ಆಕೆಗೆ ತಕ್ಕವರನನ್ನು ತೋರಿಕೊಟ್ಟನು. ಆಕೆಯ ಆತನ ಮಾ ಗೆಒಡಂಬಟ್ಟಳು, ವಿಕ್ರಮನು ಉಜ್ಜಯಿನಿಗೆ ಬಂದನು?
ಭೋಜನು ಅಂತಃಪುರಕ್ಕೆ ಹೋದನು:__
***
ಹದಿನಾರನೆಯ ಸಾಲಭಂಜಿಕೆಯು ಹೇಳಿದುದೆಂತೆಂದರೆ:
ಒಂದು ದಿನ ಒಬ್ಬ ಬ್ರಾಹ್ಮಣನು ವಿಕ್ರಮಾರ್ಕ ಮಹಾರಾಜ ಬಳಿಗೆ ಬಂದು ಈ ರೀತಿ ಪ್ರಾರ್ಥಿಸಿದನು: "ಪ್ರಭುವೇ' ನನಗೆ ಎಂಟು ಮಂದಿ ಗಂಡುಮಕ್ಕಳು, ಹೆಣ್ಣು ಮಗು ಮಾತ್ರ ಬಹು ಕಾಲದವರೆಗೂ ಅಗಲಿಲ್ಲ, ಆಗ, ನನಗೊಬ್ಬ ಮಗಳಾದರೆ ಅವಳಿಗೆ ಜಗದಂಬೆ"ಎಂದು ಹೆಸರಿಟ್ಟು, ಅವಳಷ್ಟು ಭಾರ ಹೊನ್ನಿನೋವೆ ಅವಳನ್ನು ನಾಲ್ಕು ವೇದಗಳನ್ನು ಅರಿತ ವಿಪ್ರನಿಗೆ ಕೊಟ್ಟಳು ಮದುವೆ ಮಾಡುವೆನೆಂದು ಶ್ರೀಜಗದಂಬೆಗೆ ಹರಸಿಕ್ಕೊಂಡೇನು,ಅನಂತರ ನನಗೊಬ್ಬ ಪುತ್ರಿಯು ಹುಟ್ಟಿದಳು, ಈಗ ಅವಳಿಗೆ ವಿವಾಹ ಕಾಲವು ಸಮೀಪಿಸಿದೆ ಆದರ ನನ್ನ ಹರಕೆಯನ್ನು ಸಲ್ಲಿಸಲು ಸುವರ್ಣವಿಲ್ಲ ಅದನ್ನು ನಿನ್ನಲ್ಲದೆ ಮತ್ತಾರು ಕೊಡಬಲ್ಲರು?" ಎಂದನು. ವಿಕ್ರಮನು ಅವನಿಗೆ ಬೇಕಾದಷ್ಟು ಚಿನ್ನವನ್ನು ಆಗಲೇ ಕೊಡಿಸಿದನು
ಭೋಜನು ಅಚ್ಚರಿಯಿಂದ ತಲೆದೂಗಿದನು.