ಈ ಪುಟವನ್ನು ಪ್ರಕಟಿಸಲಾಗಿದೆ

39

ತಲಿದೆ. ಸೂರ್ಯನು ತನ್ನ ಮನೆಯಿಂದ ಹೊರಗೆ ಹೊರಡುವ ವೇಳೆಗೆ ಸರಿಯಾಗಿ ಗಂಗಾನದಿಯಲ್ಲಿ ಒಂದು ಚಿನ್ನದ ಕಂಬವು ಉತ್ಪತ್ತಿಯಾಗುವುದು. ಅದರ ಮೇಲುಗಡೆ ಒಂದು ನವರತ್ನ ಖಚಿತ ಸಿಂಹಾಸನವಿರುವುದು. ಸೂರ್ಯನು ಮೇಲೆ ಹೋದ ಹಾಗೆಲ್ಲಾ ಕಂಬವೂ ಬೆಕಿದು ಸೂರ್ಯಮಂಡಲವನ್ನು ಸಾರುವುದು, ಆಮೇಲೆ ಸೂರ್ಯನು ಇಳಿದ ಹಾಗೆಲ್ಲಾ ಕಂಬವೂ ಇಳಿದು, ಸೂರ್ಯಸ್ತ ಮಾಯವಾಗುತ್ತಲೇ ಅದು ನದಿಯಲ್ಲಿ ಮುಳುಗಿ ಹೋಗುವುದು. ನಾನು ನೋಡಿರುವುದರಲ್ಲೆಲ್ಲಾ ಇದೆ ಪರಮಾಶ್ಚರ್ಯವು." ಈ ಮಾತನ್ನು ಕೇಳಿದ ವಿಕ್ರನುನು ತತ್‌ಕ್ಷಣವೇ ಹೊರಟು ಉದಯಾದ್ರಿಯನ್ನು ಸೇರಿ, ಸೂರ್ಯೋದಯ ಸಮಯವನ್ನು ಕಾದಿದ್ದು ಕಂಬವು ಕಾಣಿಸಿಕೊಂಡ ಕೂಡಲೇ ಅದನ್ನು ಹಿಡಿದು, ಅದರ ಮೇಲಿನ ಸಿಂಹಪೀಠದ ಮೇಲೆ ಕುಳಿತು, ಕಂಬವು ಮೇಲು ಮೇಲಕ್ಕೆ ಹೋದಹಾಗೆಲ್ಲ ಸೂರ್ಯನ ತಾಪವು ಹೆಚ್ಚಾಯಿತು. ಮಧ್ಯಾಹ್ನದ ವೇಳೆಗೆ ಆತನ ಶರೀರವು ಸುಟ್ಟು ಇದ್ದಲಿನಂತೆ ಆಗಿತ್ತು ಸೂರ್ಯನು ಅದನ್ನು ಕಂಡು, ಅವನಾರೋ ಮಹಾಧೀರನೇ ಎಂದು ನಿಶ್ಚಯಿಸಿ, ಆ ಶರೀರದ ಮೇಲೆ ಅಮೃತದ ಮಳೆಯನ್ನು ಸುರಿಸಿದನು. ಕೂಡಲೆ ವಿಕ್ರಮನು ಚೇತರಿಸಿಕೊಂಡು ಭಗವಂತನಾದ ಆದಿತ್ಯನನ್ನು ಬಹುವಾಗಿ ಸ್ತೋತ್ರಮಾಡಿದನು. ಕರ್ಮ ಸಾಕ್ಷಿಯಾದ ರವಿಯು ವಿಕ್ರಮನ ಮನೋದಾರ್ಢ್ಯವನ್ನು ಕೊಂಡಾಡಿ, ಆತನಿಗೆ ಎರಡು ರತ್ನ ಕುಂಡಲಗಳನ್ನು ಕೊಟ್ಟು, ಅವು ದಿನಕ್ಕೆ ಎಂಭತ್ತುಮಣ ಸುವರ್ಣವನ್ನು ಕೊಡತಕ್ಕವೆಂದು ಹೇಳಿದನು. ರಾಜನು ಅದನ್ನು ಪಡೆದು ಹಿಂದಿರುಗಿದನು. ದಾರಿಯಲ್ಲಿ ಒಬ್ಬ ದರಿದ್ರನು ವಿಕ್ರಮನಲ್ಲಿಗೆ ಬಂದು, ತನ್ನದು ಬಲುದೊಡ್ಡ ಈ ಸಂಸಾರವೆಂದೂ, ತಾನು ತುಂಬಾಬಡವನೆಂದೂ ಹೇಳಿಕೊಂಡನು.