ಈ ಪುಟವನ್ನು ಪ್ರಕಟಿಸಲಾಗಿದೆ

38

ಹದಿನೇಳನೆಯ ಪ್ರತಿಮೆಯು ಈ ಕೆಳಗಣ ಕಥೆಯನ್ನು ವಿಸ್ತರಿಸಿತು:__

"ಒಬ್ಬ ರಾಜನು ವಿಕ್ರಮನಿಗಿಂತಲೂ ಐಶ್ವರ್ಯಶಾಲಿಯಾಗಬೇಕೆಂದೂ, ಅದರಿಂದ ಪರೋಪಕಾರಮಾಡಿ ವಿಕ್ರಮನಿಗಿಂತಲೂ ಕಿರ್ತಿಶಾಲಿಯಾಗಬೇಕೆಂದೂ ಬಯಸಿ, ಒಬ್ಬ ದೇವತೆಯನ್ನು ಉಪಾಸನೆ ಮಾಡುತ್ತಿದ್ದನು. ಎಷ್ಟು ದಿನವಾದರೂ ಅವನ ಕೋರಿಕೆ ಯು ಕೈಗೂಡಲಿಲ್ಲ. ವಿಕ್ರಮನು' ಇದನ್ನರಿತು ಪಶ್ಚಾತ್ತಾಪಗೊಂಡು ಆ ರಾಜನಿದ್ದೆಡೆಗೆ ಬಂದು, ತಾನೇ ಆ ದೇವತೆಗೆ ಆಹುತಿಯಾಗಿ ಅಗ್ನಿ ಕುಂಡದೊಳಕ್ಕೆ ಇಳಿದನು ಕೂಡಲೆ ದೇವಿಯ ಕಣ್ಣಿದಿರಿಗೆ ಬಂದ "ಎಲೈ ಮಹಾಪುರುಷನೆ, ನಿನಗೇನು ಬೇಕು?ಎಂದಳು,ವಿಕ್ರಮನು ತಾಯಿ, ಈ ರಾಜನಿಗೆ ಪ್ರತಿನಿತ್ಯವೂ ಏಳು ಕೊಪ್ಪರಿಗೆಯಷ್ಟು ಧನವನ್ನು ಅನುಗ್ರಹಿಸು, ಎಂದು ಬೇಡಿದನು, ದೇವಿಯು ಅದಕ್ಕೆ ಸಮ್ಮತಿಸಿ ವಿಕ್ರಮನನ್ನು ಆಶೀರ್ವದಿಸಿ ಅಂತರ್ಧಾನವಾದಳು."

ಭೋಹನು ಆಸ್ಥಳದಿಂದ ತೆರಳಿದನು.

***

ಹದಿನೆಂಟನೆಯ ಸಾರಿ ಭೋಜನು ವಿಕ್ರಮಪೀಠದ ಬಳಿ ಸೇರಲು ಮತ್ತೊಂದು ಸಾಲಭಂಜಿಕೆಯು ಹೀಗೆಂದಿತು:___

"ವಿಕ್ರಮರಾಜನು ಒಂದಾವರ್ತಿ ಒಬ್ಬ ದೇಶಸಂಚಾರಿಯನ್ನು ಕಂಡು ಅವನು ನೋಡಿದ ವಿಶೇಷಗಳನೆಂದು ಕೇಳಿದನು, ಅವನು ಹೀಗೆ ಬಿನ್ನಯಿಸಿದನು: "ಉದಯಪರ್ವತದಲ್ಲಿ ಸೂರ್ಯನ ಅರಮನೆಯಿದೆ. ಅದರ ಪಕ್ಕದ ದೇವಗಂಗಾ ನದಿಯುಹರಿಯು