ಈ ಪುಟವನ್ನು ಪ್ರಕಟಿಸಲಾಗಿದೆ

41

ಹಸಿವುಗಳಿಲ್ಲದೆ ಇರುವುದು" ಎಂದು ಹೇಳಿ, ಬಲಿಯು ಕೊಟ್ಟಿದ್ದ ವಸ್ತುಗಳನ್ನು ಅವನಿಗೆ ಕೊಟ್ಟನು. ಹೇ ರಾಜನೆ, ಈ ವಿಷಯದಲ್ಲಿ ನೀನೇನ ಹೇಳುವೆ?"

ಭೋಜನು ಏನೂ ಹೇಳಲಿಲ್ಲ.

***

ಇಪ್ಪತ್ತನೆಯ ಪ್ರತಿಮೆಯು ಹೇಳಿದ ವಾರ್ತೆ:-

"ಒಂದಾವರ್ತಿ, ವಿಕ್ರಮನು ದೇಶಾಟನ ಮಾಡುತ್ತಿರುವಾಗ ಕೆಲವು ಮಂದಿ ವಿದೇಶಿಗಳಿಂದ ತ್ರಿಕಾಲನಾಥನೆಂಬ ಮಹಾಯೋಗಿಯು ವಿಷಯವನ್ನು ಕೇಳಿದನು. ಆತನ ದರ್ಶನವನ್ನು ಅಪೇಕ್ಷಿಸಿ, ಕೂಡಲೇ ಅಲ್ಲಿಂದ ಪ್ರಯಾಣಮಾಡಿ, ಹನ್ನೆರಡು ಯೋಜನಗಳನ್ನು ನಡೆದು, ಘೋರವಾದ, ಜನರೆಂದೂ ತಿರುಗದ ಅರಣ್ಯದ ಮಧ್ಯವನ್ನು ಮುಟ್ಟಿ, ಅಲ್ಲಿದ್ದ ಕಡಿದಾದ ಬೆಟ್ಟವನ್ನು ಹತ್ತಿ ದಾರಿಯಲ್ಲಿ ಭಯಂಕರವಾದ ಹಾವಿನಿಂದ ಕಚ್ಚಲ್ಪಟ್ಟವನಾಗಿ, ಕಡೆಗೆ ಆ ಯೋಗಿಯನ್ನು ಕಂಡು ನಮಸ್ಕರಿಸಿದನು. ಆತನು ವಿಕ್ರಮನ ಭಕ್ತಿಗೂ, ದೃಢಭಾವಕ್ಕೂ ಮೆಚ್ಚಿ, ಒಂದು ಗುಳಿಗೆಯನ್ನೂ ಒಂದು ಕಟ್ಟಿಗೆಯನ್ನೂ,ಬಂದು ಬೊಂತೆಯನ್ನೂ ವಿಕ್ರಮನಿಗೆ ಕೂಟ್ಟು, ಅವುಗಳ ಗುಣಗಳನ್ನು ವಿವರಿಸಿ, ಆಶೀರ್ವದಿಸಿ ಕಳುಹಿನು. ರಾಜನು ಹಿಂದಕ್ಕೆಬರುವಾಗ, ರಾಜ್ಯವನ್ನ ಕಳೆದದುಕ್ಕೊಂಡು, ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದ ಒಬ್ಬರಾಜಪುತ್ರನನ್ನು ಕಂಡು, ಆಗುಳಿಗೆಯನ್ನೂ, ಕೋಲನ್ನೂ, ಬೊಂತೆಯನ್ನೂ ಅವನಿಗೆ ಕೊಟ್ಟು "ಎಲೈ, ಈ ಮಾತ್ರೆಯಿಂದ" ಭೂಮಿಯ ಮೇಲೆ ಎಷ್ಟುಸಲ ಗೀಚಿದರೆ ಅಷ್ಟು ಯೋಜನಗಳನ್ನು ಒಂದು ನಿಮಿಷದಲ್ಲಿ ದಾಟುವಿ. ಈ ದಂಡವನ್ನು ಎಡಗೈಲಿ ಹಿಡಿದರೆ ನಿನ್ನ ಸ್ವಂತ ಸೈನ್ಯವೆಲ್ಲವೂ ಬದುಕುವುದು; ಬಲಗೈಲಿ

ಹಿಡಿದರೆ ಶತ್ರುಸೈನ್ಯವು ನಾಶವಾಗುವುದು, ಈ ಕಂತೆಯು ನಿನಗೆ

6