ಈ ಪುಟವನ್ನು ಪ್ರಕಟಿಸಲಾಗಿದೆ

42

ಬೇಕಾದುದನ್ನು ಕೊಡಬಲ್ಲುದು, ಇದನ್ನು ಹೊದ್ದರೆ ನಿನಗೆ ಬೇಕಾದರೂಪವು ಬರುವುದು, ಇವುಗಳ ಸಹಾಯದಿಂದ ನಿನ್ನ ರಾಜ್ಯವನ್ನು ನೀನು ಪಡೆಯುವಿ" ಎಂದು ಹೇಳಿ, ಉಜ್ಜಯಿನಿಗೆ ಬಂದನು, ಆರಾಜಕುಮಾರನು ರಾಜ್ಯಸಂಪಾದನೆ ಮಾಡಿ, ವಿಕ್ರಮನಿಗೆ ಕೃತಜ್ಞನೂ, ಸಾಮಂತ ರಾಜನೂ ಆಗಿದ್ದನು?

ಭೋಜನು ಹಿಂದಿನಂತೆಯೇ ನಿರಂತ್ತರಾಗಿದ್ದನು

***

ಇಪ್ಪತ್ತೊಂದನೆಯ ಸಾಲ ಭಂಜಿಕೆಯು ಹೇಳಿದ ಚರಿತ್ರೆ:-

ಒಂದು ಮಹಾರಣ್ಯದ ನಡವ ಒಂದು ದೇವಾಲಯವಿರು ವುದು, ಅದರ ಮುಂದೆ ಬಂದು ಸರೋವರವಿರುವುದು, ಅದರಲ್ಲಿ ಒಂದು ಕಡೆಯ ನೀರು ಯಾವಾಗಲೂ ಬೆಚ್ಚಗಿರುವುದು. ಆಭಾಗದಿಂದ ಪ್ರತಿರಾತ್ರಿಯ ಎಂಟು ಮಂದಿ ಹೆಂಗಸರು ಹೊರಟುಬಂದು, ಸೂರ್ಯೋದಯದವರೆಗೃತ ಆದೇವತಾಲಯದಲ್ಲಿ ಪೂಜಿಸುತಿರುವರು. ಈ ಸಮಾಚಾರವನ್ನು ವಿಕ್ರಮನು ಕೇಳಿ, ಆ ಸ್ಥಳಕ್ಕೆ ಬಂದು ಆ ಸ್ತ್ರೀಯರು ದೇವತಾಲಯದಿಂದ ಹಿಂದಿರುಗುವ ವೇಳೆಯನ್ನು ಕಾದಿದ್ದು, ಅವರಿಗೆ ಕಾಣಿಸಿಕ್ಕೊಂಡನು, ಅವರಲ್ಲೂ ಬ್ಬಾಕೆಯು ಆತನನ್ನು ಬಾರೆಂದು ಕರೆಯಲು ಆತನು ಅವರ ಹಿಂದೆ ಹೋಗಿ ನಾಗಲೋಕವನ್ನು ಸೇರಿದನು. ಅವರು ಅಲ್ಲಿ ಆತನನ್ನು ಉಪಚರಿಸಿ, ವಿಚಾರಿಸಿ, ತಾವು ಅಷ್ಟ ಸಿದ್ಧಿ ಯರೆಂದು ತಿಳಿಸಿ, ಎಂಟು ರತ್ನಗಳನ್ನು ಆತನಿಗೆ ಕೊಟ್ಟರು. ಆತನು ಅವುಗಳೊ ಡನೆ ತನ್ನೂರಿಗೆ ಬರುತ್ತಿರುವಾಗ ಯಾಚಕನೊಬ್ಬನು ಇದಿರು ಬೀಳಲು, ಅವುಗಳನ್ನವನಿಗೆ ದಾನಮಾಡಿ ಬಿಟ್ಟನು. ಭೋಜನು ವಿಕ್ರಮನ ಈ ವಿಚಿತ್ರ ಚರ್ಯಗಳನ್ನು ಕುರಿತು ಚಿಂತಿಸುತ್ತಿದ್ದನು.