ಈ ಪುಟವನ್ನು ಪ್ರಕಟಿಸಲಾಗಿದೆ

46

ಶಿಷ್ಟಾನಗಕ್ಕೂ ಬಂದು, ಪುನಃ ಹೇಳಿಕಳುಹಿಸಿದನು. ಶಾಲೀವಾಹನನು ನಾನು ಒಬ್ಬಂಟಿಗನಾಗಿ ರಾಜನನ್ನು ಕಾಣುವುದಿಲ್ಲ. ಚತುರಂಗ ಬಲದೊಡನೆ ಕಾಣುವನು. " ಎಂದು ಹೇಳಿ ಯುದ್ದಕ್ಕೆ ಕಾಲಕೆರೆದನು. ವಿಕ್ರಮನು ಹಾಗೆಯೇ ಆಗಲೆಂದು ತನ್ನ ಸೈನ್ಯವನ್ನು ಯುದ್ಧಕ್ಕೆ ಜಡೆಗೊಳಿಸಿದನು. ಕಾಲೀವಾಹನನು ತನ್ನ ಮನೆಯಲ್ಲಿದ್ದ ಮಣ್ಣಿನ ಆನೆ, ಕುದುರೆ, ರಥ, ಪದಾತಿಗಳಿಗೆ ಜೀವವನ್ನು ಕೊಟ್ಟು, ಅವುಗಳನ್ನು ಕರೆತಂದನು. ವಿಕ್ರಮನ ಸೈನ್ಯಕ್ಕೂ ಶಾಲಿವಾಹನನ ಕೃತಕಸೈನ್ಯಕ್ಕೂ ಘೋರಯುದ್ಧವಾಗಿ, ಶಾಲೀ ವಾಹನನ ಸೇನೆಯು ನಾಶವಾಯಿತು, ಆಗಲವನು ಆದಿಶೇಷನನ್ನು ಕುರಿತು ಪ್ರಾರ್ಧಿಸಲು ಆತನು ಸರ್ವಗಳನ್ನು ಕಳುಹಿಸಿ, ವಿಕ್ರ ಮನಸೇನೆಯನ್ನು ನಾಶಪಡಿಸಿದನು. ಆಗ ವಿಕ್ರಮನೂ ವಾಸುಕಿಯನ್ನು ಪ್ರಾರ್ಥಿಸಿ, ತನ್ನ ಸೇನೆಯನ್ನು ಬದುಕಿಸಲು ಆಮೃತವು ಬೇಕೆಂದು ಬೇಡಿದನು, ವಾಸುಕಿಯು ಅದರಂತೆ ಅಮೃತ ಕುಂಭವನ್ನು ವಿಕ್ರಮನಿಗೆ ಕೊಟ್ಟನು, ಆ ವೇಳೆಗೆ ಸರಿಯಾಗಿ ಬ್ರಾಹ್ಮಣನೊಬ್ಬನು ವಿಕ್ರಮನ ಬಳಿಗೆ ಬಂದು 'ಎಲೈ ರಾಜನೆ, ನೀನು ದಾನಕರ್ಣನಂದು ಪ್ರಸಿದ್ದನಲ್ಲವೆ? ಈಗಲೀ ಅಮೃತಕಲಶವನ್ನು ನನಗೆ ಕೊಡುವೆಯಾ? " ಎಂದನು. ವಿಕ್ರಮನು ನಿನಗೀ ಸಮಾಚಾರವು ಹೇಗೆ ತಿಳಿಯಿತು? ಎಂದು ಕೇಳಲು, ಬ್ರಾಹ್ಮಣನು "ಶಾಲಿವಾಹನನಿಂದ' ಎಂದು ಹೇಳಿದನು ಆದರೂ ವಿಕ್ರಮನು ತನ್ನ ಶತೃವನ್ನು ಗಣಿಸದೆ, ಬ್ರಾಹ್ಮಣನಿಗೆ ಆಸವಯದಲ್ಲಿ ಅಮೃತಕಲಶವನ್ನು ಕೊಟ್ಟೀಕೊಟ್ಟನು. ಇಂತಹಧಾರಾಳವಾದ ಹೃದಯವು ತಮಗುಂಟೆ?"

ಭೋಜನು ಏನೂ ಹೇಳಲಾರದವನಾಗಿದನು.

***

ಇಪ್ಪತ್ತೈದನೆಯ ಸಾಲಭಂಜಿಕೆಯು ಹೀಗೆಂದಿತು: