47
"ಒಂದಾನೊಂದು ಕಾಲದಲ್ಲಿ ವಿಕ್ರಮಾದಿತ್ಯನ ರಾಷ್ಟದಲ್ಲಿ ಮಳೆಯಿಲ್ಲದೆ ಹೋಗಿ, ವೀರಕ್ಷಾಮವು ಪ್ರಾಪ್ತವಾಯಿತು. ರಾಜನು ನವಗ್ರಹಹೋಮಾದಿಗಳನ್ನೂ ಬೇಕಾದಷ್ಟು ದಾನಧರ್ಮಗಳನ್ನೂ ಮಾಡಿದನು. ಆದರೂ ಅನಾವೃಷ್ಟಿಯ ಹೋಗಲಿಲ್ಲ. ಒಂದುದಿನ ರಾಜನು ಚಿಂತಾಕ್ರಾಂತನಾಗಿ ಕುಳಿತಿರಲು ಏಲೈ ರಾಜನೆ, ನಿನ್ನ ಮಾಂಸವನ್ನೇ ಆಹುತಿಯಾಗಿ ಅರ್ಪಿಸುವಿಯಾದರೆ ಈ ದುರ್ಭಿಕ್ಷವು ಹೋಗುವುದು "ಎಂದು ಅಶರೀರವಾಣಿಯಾಯಿತು, ವಿಕ್ರಮನು ಕೊಂಚವೂ ತಡಮಾಡದೆ, ತನ್ನ ಖಡ್ಗವನ್ನು ಒರೆಯಿಂದ ತೆಗೆದು ಶಿರಚ್ಛೇದನ ಮಾಡಿಕೊಳ್ಳಲು ಯತ್ನಿಸಿದನು, ಕೂಡಲೆ ಆ ರಾಜ್ಯದ ಅಭಿಮಾನದೇವತೆಯು ಪ್ರಸನ್ನಳಾಗಿ, ರಾಜನಲ್ಲಿ ಅನುಗ್ರಹಿಸಿ, ಸುವೃಷ್ಟಿಯನ್ನು ಕೊಟ್ಟಳು, ಹೇ ಭೋಜ ಮಹಾರಾರ್ಜ, ತಮ್ಮಲ್ಲಿ ಇಂತಹವುಹಿಮಯುಂಟೆ?"
ಉತ್ತರವೇಇಲ್ಲ.
***
ಇಪ್ಪತ್ತಾರನೆಯ ಸಾಲಭಂಜಿಕೆಯು ಕೊಟ್ಟ ಉದಾಹರಣೆ:
"ಒಂದಾನೊಂದುವೇಳೆ ವಿಕ್ರಮನು ಬಂದು ಕಾಡಿನಲ್ಲಿ ಎಲ್ಲಿಗೋ ಹೋಗುತ್ತಿರಲು, ಮಾರ್ಗದಲ್ಲಿ ದುರ್ಬಲವಾಗಿ, ಕೃಶವಾಗಿದ್ದ ಒಂದು ಹಸುವು ಕೆಸರಿನಲ್ಲಿ ಸಿಕ್ಕಿ ಈಚೆಗೆ ಬರಲಾರದೆ ಸಂ ಕಟಪಡುತ್ತಿದ್ದುದನ ಕಂಡನು. ಆತನು ಕನಿಕರಪಟ್ಟವನಾಗಿ,ಬೇಗನೆ ತಾನೆ ಆಕೆಸರಿನೊಳಕ್ಕೆ ನುಗ್ಗಿ, ಬಹ ಸಾಹಸದಿಂದ ಆ ದನ್ನು ಹೆಸರಿನಿಂದಿಚೆಗೆ ಕರೆದು ತಂದು, ಅದರ ಮೈಯನ್ನು ತೊಳೆದು, ಅದಕ್ಕೆ ಗರಿಕೆಯ ಹುಲ್ಲನ ತಂದುಹಾಕಿ, ಅದನ್ನು ಪಚರಿಸಿದನು, ಆಗ ಅದು ದಿವ್ಯವಾದ ರೂಪವನ್ನು ಧರಿಸಿ, "ಎಲೈ ರಾಜನೆ, ನಾನು ಕಾಮಧೇನು, ನೀನು ಪರಮದಯಾಳುವೆಂದು