ಈ ಪುಟವನ್ನು ಪ್ರಕಟಿಸಲಾಗಿದೆ

54

ವಿಕ್ರಮನು ಆ ಬಹುಧನನನ್ನೆಲ್ಲಾ ಐಂದ್ರಜಾಲಿಕನಿಗಗೇ ಕೊಡಿ ಸಿದನು, ಈ ಬಗೆಯ ವಿಶೇಷಗಳು ಬೋಜಮಹಾರಾಜನ ಆಸ್ಥಾನದಲ್ಲಿ ನಡೆಯುವವೆ?”

ಭೋಜನು ಸುಮ್ಮನೆ ನಡೆದನು.

*** ಮೂವತ್ತೊಂದನೆಯಾವರ್ತಿ ಭೋಜಭೂಪತಿಯು ವಿಕ್ರಮಾಸನದ ಬಳಿ ಹೋಗಲು ಇನ್ನೊಂದು ಪಾಂಚಾಳಿಕೆಯು ಹೀಗೆ ಹೇಳಿತು:-

"ಒಂದುಸಲ ದಿಗಂಬರ ಸನ್ಮಾನಿಯೊಬ್ಬನು ವಿಕ್ರಮಾರ್ಕನಲ್ಲಿಗೆ ಬಂದು, ರಾಜನನ್ನಾಶೀರ್ವದಿಸಿ ಫಲಮಂತ್ರಾಕ್ಷತೆಗಳನ್ನಿತ್ತು, ಅಯ್ಯಾ, ನಾನು ಮಾರ್ಗಶೀರ್ಷ ಕೃಷ್ಣ ಚತುರ್ದಶಿಯ ರಾತ್ರಿ ಸ್ಮಶಾನದಲ್ಲಿ ಒಂದು ಹೋಮ ಮಾಡಬೇಕಾಗಿದೆ. ಅದಕ್ಕೆ ನಿನ್ನ ಸಹಾಯವು ಬೇಕು" ಎಂದನು.

ರಾಜ:-ನಾನೇನು ಮಾಡಬೇಕು?

ದಿಗಂಬರ:- ಸ್ಮಶಾನಭೂಮಿಗೆ ಸ್ವಲ್ಪ ದೂರದಲ್ಲಿರುವ ಶಮಿವೃಕ್ಷದಲ್ಲಿ ಭೇತಾಳನಿರುವನು. ಅವನನ್ನು ಬಲವಾಗಿ ಹಿಡಿದು, ಮೌನದಿಂದ ನನ್ನಲ್ಲಿಗೆ ಕರೆತರಬೇಕು.

ರಾಜ:- ಹಾಗೆಯೇ ಆಗಲಿ.

ದಿಗಂಬರನು ಹೊರಟು ಹೋದನು. ನಿಯಮಿಸಿದ್ದ ವೇಳೆಗೆ ವಿಕ್ರಮನು ರುದ್ರಭೂಮಿಯನ್ನು ಸೇರಿ, ಶಮಿವೃಕ್ಷದಡಿಯಲ್ಲಿದ್ದ ಭೇತಾಳನನ್ನು ಬಲವಾಗಿ ಹಿಡಿದೆತ್ತಿ ಭುಜದಮೇಲೆ ಕೂಡಿಸಿಕ್ಕೊಂಡು ದಿಗಂಬರನ ಬಳಿಗೆ ಹೊರಟನು. ಮಾರ್ಗದಲ್ಲಿ ಭೇತಾಳನು ಹೀಗೆಂದನು: "ರಾಜನೆ, ದಾರಿಯನ್ನು ಕಳೆಯುವುದಕ್ಕಾಗಿ ಒಂದು ಕಥೆಯನ್ನ ಹೇಳು. "ರಾಜನು ಮೌನವನ್ನು ಬಿಟ್ಟರೆ ಭೇತಾಳನು ಹಿಂದಿರುಗುವನೆಂಬ ಭಯದಿಂದ ಸುಮ್ಮನಿದ್ದನು.