ಈ ಪುಟವನ್ನು ಪ್ರಕಟಿಸಲಾಗಿದೆ

53

ಣೆಯದಿನ ವಿಕ್ರಮರಾಜನು ಎಂದಿನಂತೆ ಸಭಾಸಾನಕ್ಕೆ ಬಂದು ಕೂಡಲು, ಹಿಂದಿನ ದಿನದ ದಿವ್ಯ ಪುರುಷನು ಹಿಂದಿನಂತೆಯೇ ಬಂದು, ವಿಕ್ರಮನಿಗೆ ಒಂದು ದಿವ್ಯ ಪುಷ್ಸ ಮಾಲೆಯನ್ನು ಸಮರ್ಪಿಸಿ ಕುಶಲ ಪ್ರಶ್ನೆ ಮಾಡಿ, ತಾನು ದೇವದಾನವ ಯುದ್ಧದಲ್ಲಿ ಅನೇಕ ದಾನವರನ್ನು ಕೊಂದನೆಂದೂ, ಮಹೇಂದ್ರನು ಅದರಿಂದ ಸಂತೋಷಿಸಿ ತನ್ನನ್ನು ಪುನಃ ದೇವಲೋಕಕ್ಕೆ ಬಾರೆಂದು ಕರೆದನೆಂದೂ ಹೇಳಿ, ತನ್ನ ಪತ್ನಿಯನ್ನ ಕಳುಹಿಸಿಕೊಡಬೇಕೆಂದು ಕೇಳಿದನು. ವಿಕ್ರಮನು, ಸಬಿಕರೂ ಅತ್ಯಂತ ವಿಸ್ಮಿತರಾದರು, ಸಭಿಕರಲ್ಲೊಬ್ಬನು ಅವನನ್ನು ಕುರಿತು "ನಿನ್ನ ಭಾರ್ಯಯು ಅಗ್ನಿಯನ್ನು ಹೊಕ್ಕಳು ಎಂದನು. ಆ ಪರುಷನು "ಅಯ್ಯೋ! ಅದೇನು- ಎಂದನು. ಯಾರೂ ಉತ್ತರ ಕೊಡಲಿಲ್ಲ. ಅವನು 'ಎಲೈ ಗಾಜನೇ! ನೀನು ಪರನಾರಿಯರ ಸೋದರನೆಂದು ತಿಳಿದು ನನ್ನ ಪತ್ನಿಯನ್ನು ನಿನ್ನ ವಶದಲ್ಲಿ ಬಿಟ್ಟು ಹೋದರೆ, ನೀನವಳನ್ನು ಅಂತಃಪುರದಲ್ಲಿ ಬಚ್ಚಿಟ್ಟರುವೆಯೋ?" ಎಂದನು. ವಿಕ್ರಮಾರ್ಕನು ಮನದಲ್ಲಿ ಕಳವಳಹೊಂದಿ ರಾಣಿವಾಸದ ಸೇವಕ ಜನರನ್ನು ಕರೆಯಿಸಿ "ಈತನ ಪತ್ನಿಯು ಅಂತಃಪುರದಲ್ಲಿರುವಳೆ?" ಎಂದು ಕೇಳಿದನು. ಅವರು "ಹೌದು, ಮಹಾರಾಣಿಯವ ರೂಡನೆ ಮಾತನಾಡುತ್ತಿರುಳು!" ಎಂದರು. ಎಲ್ಲರೂ ಮತ್ತಷ್ಟು ಆಶ್ಚರ್ಯಭರಿತರಾದರು. ಆಗ ಆ ಪುರುಷನು ಎದ್ದು ನಿಂತು "ಮಹಾಪ್ರಭೋ?: ಕ್ಷಮಿಸಬೇಕು, ನಾನೊಬ್ಬ ಐಂದ್ರಜಾಲಿಕನು ಈಗ ನಡೆದುದೆಲ್ಲವೂ ಬರಿಯವಾಯೆ, ನನ್ನ ಇಂದ್ರಜಾಲ ಮಹೇಂದ್ರಜಾಲ ವಿದ್ಯೆಗಳನ್ನು ತೋರಿಸಲು ಹೀಗೆ ಮಾಡಿದೆನು. ಅಪರಾಧಗಳನ್ನು ಮನ್ನಿಸಬೇಕು" ಎಂದನು ಆ ವೇಳೆಗೆ ದ್ವಾರವಾಲಕನೊಬ್ಬನ ವಿಕ್ರಮರಾಜನು ಸನ್ನಿಧಿಗೆ ಬಂದು "ಪಾಂಡ್ಯ ರಾಜನು ಕಪ್ಪವನ್ನು ಕಳುಹಿಸಿರುವನು " ಎಂದು ಬಿನ್ನಯಿಸಿದನು .