ಈ ಪುಟವನ್ನು ಪ್ರಕಟಿಸಲಾಗಿದೆ

60

ದನು; ಹಾಗೆಯೇ ಅಂಗಗಳನ್ನೆಲ್ಲಾ ಒಂದೊಂದಾಗಿ ಎವೆಯಿಕ್ಕದೆ ನೋಡುತ್ತ ಬಂದನು; ಬರುತಬರುತ ಅವನ ಕಣ್ಣ ಮಧ್ಯ ಭಾಗವನ್ನು ಸೇರಿದೊಡನೆಯೆ ಅವನು ಸ್ತಬ್ದನಾದನು! ಇದೇನು?ಇಷ್ಟೊಂದು ಜಾಗರುಕನಾಗಿ, ಮೈಯೆಲ್ಲಾ ಕಣ್ಣ ಮಾಡಿಕ್ಕೊಂಡು ಬಂದಿರುವ ಈ ಆಕಾರದಲ್ಲಿ ಕಿಬ್ಬೊಟ್ಟೆ ಮೇಲಕ್ಕೆ ಕಪ್ಪು ಮಚ್ಚೆಯು ಹೇಗೆ ಒಂದಿತು? ಇರಲಿ, ಮಸಿಯ ಚುಕ್ಕೆಯೇನಾದರೂ ಪ್ರಮಾದದಿಂದ ಬಿದ್ದಿರಬಹುದು."ಎಂದಂದುಕ್ಕೊಂಡು, ಚಿತ್ರಕಾರನು ಆ ದೋಷವನ್ನು ತೆಗೆಯಲು ಪ್ರಯತ್ನ ಮಾಡಿದನು. ಏನೇನೋ' ಸಾಹಸಮಾಡಿದನು. ಏನು ಮಾಡಿದರು ಆ ಗುರುತು ಹೋಗಲ್ಲೋಲದು. ಅಳಿಸಿದರೆ ಹೋಗದು ಆಯಧದಿಂದ ಕೆರೆದರೆ ಹೋಗದು ಮೇಲೆ ಬಣ್ಣ ಬಳಿದರೂ ಹೋಗದು.ಮಾಡುವುದೇನು? ಎಷ್ಟೊಕಷ್ಟಪಟ್ಟು ಅಣಿ ಮಾಡಿದ ಚಿತ್ರದಲ್ಲಿ ಅದು ಒಂದೇ ಕುಂದು.

ಆ ಚಿತ್ರಕಾರನು ಈ ಕಷ್ಟದಲ್ಲಿ ಸಿಕ್ಕಿ ಸಂಕಟಪಡುತ್ತಿರು \ವಾಗ ಕಾಳಿದಾಸನು• ಆ ದಾರಿಯಲ್ಲಿ ಹೋಗುತ್ತಿದ್ದ, ಚಿತ್ರಕಾರನನ್ನು ಕಂಡು "ಎಲೈ, ಏಕೆ ಚಿಂತಾಕ್ರಾಂತನಾಗಿ ಕಾಣುವೆ? ನಿನಗೆ ನನ್ನಿಂದಾಗಬಲ್ಲ ಸಹಾಯವೇನಾದರೂ ಇದ್ದರೆ ದಯಯಿಟ್ಟು ತಿಳಿಸು, ಶಿರಸಾವಹಿಸಿ ಮಾಡುವೆನು"ಎಂದು


•ಈ ಕಾಳಿದಾಸನೂ ವಿಕ್ರಮಾದಿತ್ಯನ ಸಭೆಯಲ್ಲಿದ್ದ ಕಾಳಿದಾಸನೂ ಒಬ್ಬ ವ್ಯಕ್ತಿಯೇ ಎಂದು ನಂಬುವುದು ಕಷ್ಯವಾಗಿದೆ; ಏಕೆಂದರೆ ವಿಕ್ರಮನ ಕಾಲಕ್ಕೂ ಭೋಜನ ಕಾಲಕ್ಕೂ ನೂರು ವರ್ಷಗಳಿಗಿಂತ ಹೆಚ್ಚಿನ ಅಂತರ ವುಂಟೆಂದು ಗೊತ್ತಾಗಿದೆ. ಆದರೆ ಇಲ್ಲಿ ನಾವು ಹೇಳುತ್ತಿರುವುದು ಕಥೆಯಾದ ಕಾರಣ ಚರಿತ್ರೆಯನ್ನು ಸ್ಪಲ್ಪ ಮಟ್ಟಿಗೆ ದೂರವಿಡಬೇಕಾಗಿದೆ.