ಬಿನ್ನಹ
ಈ ಸುಮತಿ ಗ್ರಂಥಮಾಲೆಯು ಮೂರನೆಯ ಪುಷ್ಪದಂತೆ, ಈ ಪುಸ್ತಕವೂ ಮುಖ್ಯವಾಗಿ ಬಾಲಕರನ್ನು ಸಂತೋಷಗೊಳಿಸತಕ್ಕುದು, ಕಲ್ಪಿತಕಥೆಗಳಿಗೆ ನಮ್ಮ ಇಂಡಿಯಾ ದೇಶವು ಇರು ಮನೆಯಿಂದ ಹೇಳಬಹುದಾದರೂ, ಈ ಬಗೆಯಕಥೆಗಳು ಅನ್ಯ ದೇಶಗಳಲ್ಲಿ ವಿಶೇಷವಾಗಿವೆ ಯೆಂದು ಹಿಂದಿನ ಹೊತ್ತಗೆ "ಬೆಕ್ಕೊಜಿ" ಯಿಂದಲೇ ವ್ಯಕ್ತವಾತ್ತದೆ. ಕಟ್ಟು ಕಥೆಗಳು ಮಕ್ಕಳ ಮನಸ್ಸಿಗೆ ಉಲ್ಲಾಸವನ್ನೂ ಉತ್ಸಾಹವನ್ನೂ ಉಂಟುಮಾಡಿ, ಅವರ ಊಹಾಶಕ್ತಿಯನ್ನು ಹೆಚ್ಚಿಸಿ, ಅವರಲ್ಲಿ ಒಳ್ಳೆಯ ಭಾವನೆಗಳನ್ನು ನೆಲೆಗೊಳಿಸುತ್ತವೆ. ಆದಕಾರಣ ಇಂತಹ ಪುಸ್ತಕಗಳು ಮಕ್ಕಳುಳ್ಳವರ ಆದರೆಗೆ ಪಾತ್ರವಾದಾವೆಂದು ನಂಬಿಕೆ.
ಈ ಪುಸ್ತಕದ ಶೈಲಿಯು "ಬೆಕ್ಕೊಜಿ"ಯ ಶೈಲಿಗಿಂತಲೂ ಸ್ವಲ್ಪ ಪ್ರೌಢವಾಗಿ ಕಾಣಬಹುದು, ಆದರೆ ಈ ಮೂಲಕ ಬಾಲ ವಾಚಕರ ಭಾಷಾಜ್ಞಾನವು ಹೆಚ್ಚಬಹುದೆಂದು ಲೇಖಕನ ಉದ್ದೇಶ.
ಕಥೆಗಳಿಗೆ ಅಲ್ಲಲ್ಲಿ ಚರಿತ್ರೆಯ ಸಂಬಂಧವಿರುವುದಾದರೂ, ಅವುಗಳೆಲ್ಲವೂ ಕೇವಲ ಇತಿಹಾಸವೇ ಎಂದು ಹೇಳಲಾಗುವುದಿಲ್ಲ.
ಅಲ್ಲಲ್ಲಿ ಚಿತ್ರಗಳನ್ನು ಇನ್ನೂ ಹೆಚ್ಚಾಗಿ ಸೆರಿಸಬಹುದಾಗಿತ್ತು; ಆದರೆ ಗ್ರಂಥವು ವಿಸ್ತಾರವಾಗಿ ಬೆಲೆ ಹೆಚ್ಚುವುದೆಂಬ ಭೀತಿಯಿಂದ ಹಾಗೆ ಮಾಡಲು ಆಗಲಿಲ್ಲ.
ಕನ್ನಡನಾಡಿನ ಮಹಾಜನರು ಈ ಪುಸ್ತಕಕ್ಕೆ ಆಶ್ರಯ ಕೊಟ್ಟರೆ, ಈಗ ಇರಬಹುದಾದ ಎಲ್ಲಾ ತಪ್ಪುಗಳನ್ನೂ ದ್ವಿತೀಯ ಮುದ್ರಣದಲ್ಲಿ ತಿದ್ದಿ, ಅದನ್ನು ಎಲ್ಲಾ ವಿಧಗಳಲ್ಲಿಯೂ ಉತ್ತಮ ಗೊಳಿಸಬಹುದು.
ಜನವರಿ, ೧೯೧೨.