ಈ ಪುಟವನ್ನು ಪ್ರಕಟಿಸಲಾಗಿದೆ


ಇಂದ್ರವಜ್ರ.

ನಮ್ಮ ಭರತಖಂಡದ ಉತ್ತರದಿಕ್ಕಿನಲ್ಲಿ ಹಿಮಾಲ ಯನೆಂಬ ಬಲು ಎತ್ತರವಾದ ಬೆಟ್ಟದ ಸಾಲು ಇರುವುದಲ್ಲವೆ? ಆ ಬೆಟ್ಟಗಳ ನಡುವೆ ಈಗ ದೇವದ್ಯಾರ ವೆಂಬ ಹಳ್ಳಿಯೊಂದಿರುವುದು. ಅದಕ್ಕೆ ಕೊಂಚ ದೂರ ದಲ್ಲಿ ರಾಮಗಂಗಾನದಿಯು ಹರಿಯುತ್ತಿರುವುದು. ಆ ಹಳ್ಳಿಯಲ್ಲಿ ಎಷ್ಟೋ ವರ್ಷಗಳ ಹಿಂದೆ ಒಬ್ಬ ಬಡಮು ದುಕಿಯೂ ಅವಳ ಎಳೆಯಮಗನೂ ವಾಸಮಾಡುತ್ತಿದ್ದರು. ಅವರಿಗ ಕೀಳುತರದ ಭೂಮಿ ಸಲ್ಪ ವಿತ್ತು. ಅದನ್ನು ಅವರು ಬೇಸಾಯಮಾಡಿ ಜೀವಿಸುತ್ತಿದ್ದರು. ಆದರೂ ಅವರಿಗೆ ಕಷ್ಟ, ಹೆಚ್ಚು, ಫಲಕಡಿಮೆ; ಏಕಂದರೆ ಅವರಿಗೆ ವ್ಯವಸಾಯಕ್ಕೆ ಬೇಕಾದ ಜನಸಹಾಯವಾಗಲಿ ಇತರ ಅನುಕೂಲಗಳಾಗಲಿ ಇರಲಿಲ್ಲ. ಆದರೂ ಆ ಬಡಮುದುಕಿಗೆ ಮಾನದ ಮೇಲೆ ತುಂಬಾ ದೃಷ್ಟಿ; ಯಾವ ಉಪಕಾರವನ್ನೂ ಕೇಳಳು, ಯಾರ ಸಹಾಯವನ್ನೂ ಬಯಸಳು. ಅವಳ ಮಗನು ಅರೆಹೋ ಟ್ಟಿಗೆತಿಂದು, ಅರೆಮೈಗೆ ಹೊದ್ದು, ಬಡತನದಲ್ಲಿಯೇ ಬೆಳೆದನು.

ಒಂದು ಸಲ ಆಪ್ರಾಂತ ತಕ್ಕಷ್ಟು ಮಳೆ ಬೀಳದೆ ಕ್ಷಾಮ ಬಂದಿತು. ನೆಲದಲ್ಲಿ ಬಿತ್ತಿದ್ದ ಧಾನ್ಯಗಳನ್ನು