63
ಭೋಗಾಸಕ್ತನ ವಿದ್ಯೆಯಂತೆ ಕಮಲದ ಕಾಂತಿಯು ತಗ್ಗಿತು;ಪರದೇಶಕ್ಕೆ ಹೋದಸಜ್ಜನರಂತೆ ದುಂಬಿಗಳು ನಿರಾಶ್ರಯವಾದ ವು; ದುಷ್ಟರಾಜನಂತೆ ಕತ್ತಲೆಯು ಲೋಕಗಳನ್ನು ಹಿಂಸಿಸತೊಡಗಿತು; ಲೋಭಿಯ ಹೆಣದಂತೆ ಕಣ್ಣುಗಳು ನಿಸ್ಸಪ್ರಯೋಜನಕವಾದವು, ಭೋಜಪುತ್ರನು ಮಾಡತಕ್ಕುದೆನು? ಅವನು ದಣಿದಿದ್ದನು ಹಸಿವುಬಾಯಾರಿಕೆಗಳು, ಅವನನ್ನೂ ಅವನಕು ದುರೆಯನ್ನೂ ಕಾಡುತ್ತಿದ್ದನು ಆಗ ಹೋಗುವದೆಲ್ಲಿ? ಕಷ್ಟದಲ್ಲಿ ಅವನಿರುವಾಗ ಅನತಿ ದೂರದಲ್ಲಿ ಹುಲಿಯೊಂದು ಅವನ ಕಣ್ಣಿಗೆ ಕಾಣಿಸಿತು. ರೋಷಾವೆಶದಿಂದ ಓಡಿಬರುತ್ತಿದ್ದ ಆ ಹುಲಿಯ ಬಾಯಿಯಿಂದ ಅವನು ತಪ್ಪಿಸಿಕೊಳ್ಳುವುದು ಹೇಗೆ? ಕುದುರೆಯು ಮುಂದೆ ನಡೆದುದು, ಭೋಜನ ಪುತ್ರನು ಸ್ತoಭೀಭೂತನಾದನು, ವ್ಯಾಘ್ರನು ಬಹಳ ಸಮಿಾಪಕ್ಕೆ ಬಂದಿತು. ಆಗ ಅವನು ಒಂದು ಮರದ ಕೊಂಬೆಯನ್ನು ಹಿಡಿದುಕ್ಕೊಂಡು ಮೇಲಕ್ಕೆ ಹಾರಿದನು; ಮರದ ಮೇಲಾದರೂ ಅವನಿಗೆ ಸ್ಥಳವುಂಟ? ಇಲ್ಲ, ವಿಧಿವಿಲಾಸವನ್ನೇನೆಂದು ಹೇಳೋಣ! ಮಂದ ಭಾಗ್ಯನಾದ ಆ ಹುಡುಗನಿಗೆ ಆ ಕ್ಷಣದಲ್ಲಿ ಉಂಟಾಗಿದ್ದ ದುರವ್ಯವಸ್ಥೆಯನ್ನು ಊಹಿಸಿ ತಿಳಿಯಬೇಕೇ ಹೊರತು ಹೇಳತೀರದು. ಮರ ದಮಲೋಂದು ಕರಡಿಯು ಕುಳಿತಿತ್ತು, ಅವನು ಮರದಡಿಯಲ್ಲಿ ರಬೇಕೆ? ಮರದಮೇಲಿರಬೇಕ? ಪಾಠಕರೆ, ಯೋಚಿಸಿ ಹೇಳಿರಿ.
ಆದರೆ ಆ ಕರಡಿಯು ಮನುಷ್ಯ ಪ್ರಾಣಿಯಷ್ಟು ಕಲ್ಲೆದೆಯ ದಾಗಿರಲಿಲ್ಲ. ಆ ಹತಭಾಗ್ಯವನ್ನು ನೋಡಿ ಅದರ ಮನಸ ಕರಗಿತು, ಅದು ಆ ಬಾಲಕನನ್ನು ಒಳಗೆ ಕರೆದು, ಒಳ್ಳೆ ಮಾತುಗಳಿಂದ ಸಮಾಧಾನಪಡಿಸಿ, ಅವನಿಗೆ ತನ್ನಿಂದ ಕೆಡಕಾಗಲಾರದೆಂದು ಅಭಯವನ್ನು ಕೊಟ್ಟು, ಅವನನ್ನು ತನ್ನ ತೊಡೆಯ ಮೇಲೆ? ಮಲಗಿಸಿಕ್ಕೊಂಡು ನಿದ್ದೆ ಮಾಡಿಸಿತು.